ಮಂಗಳೂರು: ಕರಾವಳಿಯ ಜನರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಈಗ 'ಮ್ಯಾರಥಾನ್' ಹೆಸರಿನಲ್ಲಿ ಹೊಸ ಬಲೆ ಬೀಸಿದ್ದಾರೆ. ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಏಪ್ರಿಲ್ 19 ರಂದು ಬೃಹತ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂಬ ಸುಳ್ಳು ಪೋಸ್ಟರ್‌ಗಳನ್ನು ಹಂಚುವ ಮೂಲಕ ಸಾರ್ವಜನಿಕರ (Cyber Crime) ಹಣಕ್ಕೆ ಕನ್ನ ಹಾಕುವ ಪ್ರಯತ್ನ ನಡೆಯುತ್ತಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅವರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಬಹುಮಾನದ ಆಮಿಷವೊಡ್ಡಿ ವಂಚನೆ ಪೋಸ್ಟರ್‌ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಹಿಂದಿ ಮಾತನಾಡುವ ವ್ಯಕ್ತಿಯೊಬ್ಬ ವಾಟ್ಸಾಪ್ ಮೂಲಕ ಲಿಂಕ್ ಕಳುಹಿಸಿಕೊಡುತ್ತಾನೆ. ಆ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ಮಾಡಲು ಹೋದರೆ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಕದ್ದು ಹಣ ಲೂಟಿ ಮಾಡುವುದು ಈ ಜಾಲದ ತಂತ್ರಗಾರಿಕೆಯಾಗಿದೆ. ಈ ಬಗ್ಗೆ ಸ್ವತಃ ಕರೆ ಮಾಡಿ ವಿಚಾರಿಸಿದ ಸ್ಥಳೀಯ ಕ್ರೀಡಾಪಟುಗಳು ಇದೊಂದು ಪಕ್ಕಾ ಸೈಬರ್ ವಂಚನೆ ಎಂಬುವುದನ್ನು ಖಚಿತಪಡಿಸಿದ್ದಾರೆ. ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಏಪ್ರಿಲ್ 19 ರಂದು ಇಂತಹ ಯಾವುದೇ ಅಧಿಕೃತ ಮ್ಯಾರಥಾನ್ ಆಯೋಜನೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಆಕರ್ಷಕ ಪೋಸ್ಟರ್‌ಗಳನ್ನು ನೋಡಿ ಯಾರು ಕೂಡ ಹಣ ಪಾವತಿಸಬಾರದು ಅಥವಾ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ನಿಮ್ಮ ಮೊಬೈಲ್‌ಗೆ ಇಂತಹ ಯಾವುದೇ ಸಂದೇಶ ಬಂದಲ್ಲಿ ತಕ್ಷಣ ಸೈಬರ್ ಪೊಲೀಸರಿಗೆ ದೂರು ನೀಡಿ ಸುರಕ್ಷಿತವಾಗಿರಿ. ಆನ್‌ಲೈನ್ ಹೂಡಿಕೆ ಆಮಿಷ - ನಿವೃತ್ತ ವ್ಯಕ್ತಿಯಿಂದ ಬರೋಬ್ಬರಿ 19.65 ಲಕ್ಷ ರೂ. ಲೂಟಿ! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಸೈಬರ್ ಕಳ್ಳರ (Cyber Crime) ಅಟ್ಟಹಾಸ ಮುಂದುವರಿದಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೃತ್ತ ಜೀವನದ ನೆಮ್ಮದಿ ಕಾಣುತ್ತಿದ್ದ ಹಿರಿಯ ನಾಗರಿಕರೊಬ್ಬರಿಗೆ ಅಂತರಾಷ್ಟ್ರೀಯ ಮಟ್ಟದ ಹೂಡಿಕೆಯ ಆಮಿಷವೊಡ್ಡಿ ಬರೋಬ್ಬರಿ 19.65 ಲಕ್ಷ ರೂಪಾಯಿಗಳನ್ನು (Fraud) ವಂಚಿಸಿದ್ದಾರೆ. ಮೈಸೂರಿನ ಯಾದವಗಿರಿಯ ಕಳೆದ 2025ರ ಡಿಸೆಂಬರ್‌ನಲ್ಲಿ ಈ ಹಿರಿಯ ನಾಗರಿಕರು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾಗ ಆಕರ್ಷಕ ಹೂಡಿಕೆ ಜಾಹೀರಾತೊಂದು ಕಂಡಿತ್ತು. ಅದನ್ನು ಕುತೂಹಲದಿಂದ ಕ್ಲಿಕ್ ಮಾಡಿದ ಬೆನ್ನಲ್ಲೇ ಅಜಿತ್ ಮತ್ತು ಸುಮನ್ ರೈ ಎಂಬ ಹೆಸರಿನ ಕಿಲಾಡಿ ವಂಚಕರು ಇವರನ್ನು ಸಂಪರ್ಕಿಸಿದ್ದಾರೆ. ಚಿನ್ನ, ಬೆಳ್ಳಿ ಮತ್ತು ಕಚ್ಚಾ ತೈಲದ ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಕೋಟ್ಯಧಿಪತಿಯಾಗಬಹುದು ಎಂದು ನಂಬಿಸಿದ ಈ ವಂಚಕರು, 'ಮನಿ ಪ್ರಾಕ್ಸಿ' ಎಂಬ ನಕಲಿ ಆಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಸಿ, ವಂಚನೆ ಮಾಡಿದ್ದಾರೆ.
ವಂಚಕರು ಸಾರ್ವಜನಿಕರ ನಂಬಿಕೆ ಗಳಿಸಲು 'ಸೀ ಬ್ರೀಝ್ ಮ್ಯಾರಥಾನ್' ಎಂಬ ಹೆಸರಿನ ಪೋಸ್ಟರ್ ಸಿದ್ಧಪಡಿಸಿದ್ದು, ಅದರಲ್ಲಿ ಎಸ್‌ಬಿಐ (SBI) ಬ್ಯಾಂಕ್‌ನ ಲೋಗೋ ಬಳಸಿ ಸ್ಪಾನ್ಸರ್ ಮಾಡಿರುವುದಾಗಿ ತೋರಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ಆಕರ್ಷಕ ಬಹುಮಾನಗಳ ಆಮಿಷವೊಡ್ಡಲಾಗಿದ್ದು, 5 ಕಿಲೋಮೀಟರ್ ಓಟಕ್ಕೆ 2.51 ಲಕ್ಷ, 10 ಕಿಲೋಮೀಟರ್‌ಗೆ 3.51 ಲಕ್ಷ ಹಾಗೂ 21 ಕಿಲೋಮೀಟರ್ ಗೆಲ್ಲುವವರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ನಂಬಿಸಲಾಗಿದೆ. ಅಷ್ಟೇ ಅಲ್ಲದೆ ಭಾಗವಹಿಸುವ ಪ್ರತಿಯೊಬ್ಬರಿಗೂ ಶೂ, ಟೀ-ಶರ್ಟ್ ಮತ್ತು ಬ್ಯಾಗ್ ಉಚಿತವಾಗಿ ನೀಡಲಾಗುವುದು ಎಂದು ಆಸೆ ತೋರಿಸಲಾಗಿದೆ.

