Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR: ದೋಷಗಳ ಬಗ್ಗೆ ಎಚ್ಚರವಿರಲಿ. ಡಿಕೆಶಿಗೆ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ!

DK SHIVAKUMAR: ದೋಷಗಳ ಬಗ್ಗೆ ಎಚ್ಚರವಿರಲಿ. ಡಿಕೆಶಿಗೆ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆ!

Navasamaja.com 4 months ago

ತುಮಕೂರು: ರಾಜಕೀಯ ಯಶಸ್ಸಿಗಾಗಿ ಜ್ಯೋತಿಷ್ಯ ಮತ್ತು ಶಾಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಕೆ ಶಿವಕುಮಾರ್ (DK Shivakumar) ಅವರಿಗೆ ತುಮಕೂರಿನ (Tumkur) ನೊಣವಿನಕೆರೆ ಶ್ರೀಗಳು (Nonavinakere sri) ಕಿವಿಮಾತು ಹೇಳಿದ್ದಾರೆ.

ರಾಜ್ಯದ ಮುಖಂಡತ್ವ ಬದಲಾವಣೆಯ ಸದ್ದು ಜೋರಾಗಿರುವ ಬೆನ್ನಲ್ಲೇ, ಮಾಧ್ಯಮಗಳೊಂದಿಗೆ ಮಾತನಾಡಿದ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿಯವರು ಈ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.

ಧಾರ್ಮಿಕ ಪೀಠದ ಸಂಪೂರ್ಣ ಬೆಂಬಲ ಸಚಿವರಿಗೆ ಸದಾ ಇರಲಿದ್ದು, ಅವರು ದೀನದಲಿತರ ಹಾಗೂ ರೈತರ ಧ್ವನಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಶ್ರೀಗಳು ಹರಸಿದ್ದಾರೆ. ಡಿಕೆಶಿ ಅವರು ಅತ್ಯುನ್ನತ ಹುದ್ದೆಗೇರುವ ಶುಭಕಾಲ ಸನ್ನಿಹಿತವಾಗಿದ್ದು, ಮುಂದಿನ ಎರಡು ವರ್ಷಗಳ ಕಾಲ ಅವರು ಉತ್ತಮ ಜನಸೇವೆ ಮಾಡಲಿದ್ದಾರೆ ಎಂದು ಶ್ರೀಮಠದ ಧರ್ಮಧ್ವಜ ನೀಡಿ ಹರಸಲಾಗಿದೆ.

ಇನ್ನು ಇಂದು (ಮೇ.28) ನಿಗದಿಯಾಗಿದ್ದ ಮಠದ ಭೇಟಿ ಕೊನೆ ಕ್ಷಣದಲ್ಲಿ ಮುಂದೂಡಲ್ಪಟ್ಟಿದ್ದು, ಬೆಂಗಳೂರಿನ ಶಾಖೆಯಲ್ಲೇ ಗುರುಗಳ ಆಶೀರ್ವಾದ ಪಡೆಯಲು ಸಚಿವರು ನಿರ್ಧರಿಸಿದ್ದಾರೆ. ಕೊನೆಯದಾಗಿ ಶ್ರೀಗಳು ನೀಡಿದ ಅತ್ಯಂತ ಪ್ರಮುಖ ಎಚ್ಚರಿಕೆಯೆಂದರೆ, ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ಮುನ್ನ ತಮ್ಮ ಜಾತಕದಲ್ಲಿರುವ ಸಕಲ ದೋಷಗಳನ್ನು ಕೂಲಂಕಷವಾಗಿ ಪರಿಶೀಲಿಸಿಕೊಂಡು, ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja