Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR : ಮೇ ತಿಂಗಳ ಮಹಾಜಾದೂ : ಡಿಕೆಶಿಗೆ ಬ್ಯಾಕ್ ಟು ಬ್ಯಾಕ್ 'ಸೂಪರ್ ಬಂಪರ್'!

DK SHIVAKUMAR : ಮೇ ತಿಂಗಳ ಮಹಾಜಾದೂ : ಡಿಕೆಶಿಗೆ ಬ್ಯಾಕ್ ಟು ಬ್ಯಾಕ್ 'ಸೂಪರ್ ಬಂಪರ್'!

Navasamaja.com 1 week ago

ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಪಾಲಿಗೆ ಪ್ರಸ್ತುತ ಸಾಲಿನ 'ಮೇ ತಿಂಗಳು' ಕೇವಲ ರಾಜಕೀಯವಾಗಿ (Politics) ಮಾತ್ರವಲ್ಲ, ವೈಯಕ್ತಿಕವಾಗಿಯೂ ಅತ್ಯಂತ ಅದೃಷ್ಟದ ಜಾದೂ ಹಾಗೂ ಬಿಗ್ ಬಂಪರ್ ತಂದುಕೊಟ್ಟಿದೆ.

ಒಂದು ಕಡೆ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಸ್ಥಾನದ ಪಟ್ಟಾಭಿಷೇಕಕ್ಕೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದರೆ, ಮತ್ತೊಂದೆಡೆ ಅವರ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನವಾಗಿದೆ! ಈ ಎಲ್ಲಾ ಸಂಭ್ರಮಗಳು ಸಾಲು ಸಾಲಾಗಿ ಮೇ ತಿಂಗಳಲ್ಲೇ ನಡೆದಿರುವುದು ವಿಶೇಷ.

ಮೇ 1ರಂದು ಮೊಮ್ಮಗಳ ಜನನ: ಮನೆಗೆ ಬಂದ ಮಹಾಲಕ್ಷ್ಮಿ!

ಡಿ.ಕೆ. ಶಿವಕುಮಾರ್ ಅವರ ಈ ಅದೃಷ್ಟದ ಸರಣಿ ಆರಂಭವಾಗಿದ್ದು ಮೇ ತಿಂಗಳ ಮೊದಲ ದಿನವೇ. ಮೇ 1 ರಂದು ಡಿಕೆಶಿ ಅವರ ಹಿರಿಯ ಪುತ್ರಿ ಐಶ್ವರ್ಯ ಅಮರ್ತ್ಯ ಹೆಗಡೆ ಅವರು ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಅಜ್ಜರಾಗಿದ್ದಾರೆ.

"ಮೇ ಮೊದಲ ದಿನವೇ ನಮ್ಮ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿಯ ಎಂಟ್ರಿಯಾಗಿದೆ, ಆಕೆಯ ಪಾದಗುಣವೇ ನನ್ನ ರಾಜಕೀಯ ಹಾದಿಯ ಎಲ್ಲಾ ಮುಳ್ಳುಗಳನ್ನು ನಿವಾರಿಸಿದೆ" ಎಂದು ಡಿಕೆಶಿ ತಮ್ಮ ಆಪ್ತ ವಲಯದಲ್ಲಿ ಸಂಭ್ರಮ ಹಂಚಿಕೊಂಡಿದ್ದರು.

ಮೇ 15ರಂದು ಹುಟ್ಟುಹಬ್ಬದ ಸಡಗರ

ಮೊಮ್ಮಗಳು ಹುಟ್ಟಿದ ಕೇವಲ ಎರಡು ವಾರಗಳಲ್ಲೇ, ಅಂದರೆ ಮೇ 15 ರಂದು ಡಿ.ಕೆ. ಶಿವಕುಮಾರ್ ಅವರು ತಮ್ಮ 64ನೇ ಜನ್ಮದಿನವನ್ನು (Birthday) ಆಚರಿಸಿಕೊಂಡಿದ್ದಾರೆ. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲೇ ರಾಜ್ಯಾದ್ಯಂತ ಅವರ ಅಭಿಮಾನಿಗಳು "ಮುಂದಿನ ಸಿಎಂ ಡಿಕೆಶಿ" ಎಂಬ ಭಾರಿ ಅಭಿಯಾನವನ್ನೇ ನಡೆಸಿದ್ದರು. ಜನ್ಮದಿನದ ಸುದಿನದಂದೇ ಅವರ ಮುಂದಿನ ರಾಜಕೀಯ ಭವಿಷ್ಯದ ಭದ್ರ ಬುನಾದಿಗೆ ದೆಹಲಿ ಮಟ್ಟದಲ್ಲಿ ಸೂತ್ರಗಳು ಸಿದ್ಧವಾಗಿದ್ದವು.

ತಿಂಗಳಾಂತ್ಯದಲ್ಲಿ ಒಲಿದ 'ಸಿಎಂ' ಭಾಗ್ಯ!

ಇವೆಲ್ಲದರ ಕ್ಲೈಮ್ಯಾಕ್ಸ್ ಎಂಬಂತೆ, ಮೇ ತಿಂಗಳ ಕೊನೆಯ ವಾರದಲ್ಲೇ (ಇಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬುದು ಕನ್ಫರ್ಮ್ ಆಗಿದೆ.

ಮೇ ಮೊದಲ ವಾರದಲ್ಲಿ ಮೊಮ್ಮಗಳ ಹುಟ್ಟು, ಮಧ್ಯಭಾಗದಲ್ಲಿ ಸ್ವಂತ ಜನ್ಮದಿನ ಹಾಗೂ ತಿಂಗಳ ಕೊನೆಯಲ್ಲಿ ರಾಜ್ಯದ ಅತ್ಯುನ್ನತ ಸಿಎಂ ಕುರ್ಚಿ ಸಿಗುತ್ತಿರುವುದು ಬರೀ ಕಾಕತಾಳೀಯವಲ್ಲ, ಇದು ಅವರ ಜಾತಕಕ್ಕೆ ಒಲಿದು ಬಂದಿರುವ 'ರಾಜಯೋಗ' ಎಂದು ಜ್ಯೋತಿಷಿಗಳು ವಿಶ್ಲೇಷಿಸುತ್ತಿದ್ದಾರೆ. ಒಟ್ಟಿನಲ್ಲಿ 2026ರ ಮೇ ತಿಂಗಳು 'ಕನಕಪುರ ಬಂಡೆ'ಯ ಪಾಲಿಗೆ ಲಕ್ಕಿ ತಿಂಗಳಾಗಿ ಇತಿಹಾಸ ಸೇರಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja