Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR: ಮುಖ್ಯಮಂತ್ರಿ ಆಗುವ ಖುಷಿಯಲ್ಲಿರುವ ಡಿಸಿಎಂಗೆ ಸಿಕ್ತು ಮತ್ತೊಂದು ಭರ್ಜರಿ ಸುದ್ದಿ!

DK SHIVAKUMAR: ಮುಖ್ಯಮಂತ್ರಿ ಆಗುವ ಖುಷಿಯಲ್ಲಿರುವ ಡಿಸಿಎಂಗೆ ಸಿಕ್ತು ಮತ್ತೊಂದು ಭರ್ಜರಿ ಸುದ್ದಿ!

Navasamaja.com 3 weeks ago

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಮುಂಬರುವ ಇಪ್ಪತ್ತನಾಲ್ಕು ತಿಂಗಳುಗಳ ಕಾಲ ಹೊರದೇಶಗಳಿಗೆ ಪ್ರಯಾಣಿಸಲು ಬೆಂಗಳೂರಿನ (Bengaluru) ವಿಶೇಷ ನ್ಯಾಯಾಲಯ (Court) ಗ್ರೀನ್ ಸಿಗ್ನಲ್ ನೀಡಿದೆ. ಹಿಂದೆ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸಿ, ಎಸಿಜೆಎಂ ಕೋರ್ಟ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

ಇದರ ಅನ್ವಯ, ಅವರು ತಮ್ಮ ಅಧಿಕೃತ ಹಾಗೂ ವೈಯಕ್ತಿಕ ಅಗತ್ಯಗಳಿಗಾಗಿ ಅಮೆರಿಕ, ಯುಕೆ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ಅರಬ್ ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಆದರೆ, ಪ್ರತಿ ಬಾರಿ ಹೊರಡುವ ಮುನ್ನ ಪ್ರವಾಸದ ಇಂಚಿಂಚೂ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವುದು ಕಡ್ಡಾಯವಾಗಿದೆ.

ಆದ್ರೆ ವಿಚಾರಣೆಗೆ ಕರೆಯ ಬಂದಾಗಲೆಲ್ಲಾ ಅವರು ಕಡ್ಡಾಯವಾಗಿ ಹಾಜರಿರಬೇಕು. ಮೇ 15 ರಂದು ಹೊರಡಿಸಲಾದ ತೀರ್ಪಿನಲ್ಲಿ, ಕೋರ್ಟ್ ವಿಧಿಸಿರುವ ಯಾವುದೇ ನಿಯಮಗಳನ್ನು ಮೀರಿದಲ್ಲಿ ಅವರ ಪ್ರವಾಸದ ಸೌಲಭ್ಯವನ್ನು ಹಿಂಪಡೆಯಲು ತನಿಖಾ ಸಂಸ್ಥೆಗೆ ಪೂರ್ಣ ಅಧಿಕಾರವಿರುತ್ತದೆ ಎಂದು ಜಡ್ಜ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇನ್ನುಳಿದಂತೆ, 2017ರ ಐಟಿ ದಾಳಿಗೆ ಸಂಬಂಧಿಸಿದ ತೆರಿಗೆ ವಂಚನೆ ಪ್ರಕರಣದಲ್ಲಿ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಸೇರಿದಂತೆ ಐವರ ವಿರುದ್ಧ ತನಿಖೆ ಮುಂದುವರಿದಿದೆ. ಒಂಬತ್ತು ವರ್ಷಗಳ ಹಿಂದೆ (2017ರಲ್ಲಿ) ಆದಾಯ ತೆರಿಗೆ ಇಲಾಖೆ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ಘಟನೆಯ ನಂತರ, ತೆರಿಗೆ ವಂಚನೆ ಆರೋಪದಡಿ ಡಿ.ಕೆ. ಶಿವಕುಮಾರ್, ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಹಾಗೂ ಎನ್. ರಾಜೇಂದ್ರ ಅವರ ಮೇಲೆ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Navasamaja