Dailyhunt Logo
  • Light mode
    Follow system
    Dark mode
    • Play Story
    • App Story
DK SHIVAKUMAR: ಮುಂದಿನ 8 ವರ್ಷ 'ಬಂಡೆ'ಯನ್ನ ಅಲ್ಲಾಡಿಸಲು ಸಾಧ್ಯವಿಲ್ಲ: ದ್ವಾರಕನಾಥ್ ಗುರೂಜಿ ಭವಿಷ್ಯ

DK SHIVAKUMAR: ಮುಂದಿನ 8 ವರ್ಷ 'ಬಂಡೆ'ಯನ್ನ ಅಲ್ಲಾಡಿಸಲು ಸಾಧ್ಯವಿಲ್ಲ: ದ್ವಾರಕನಾಥ್ ಗುರೂಜಿ ಭವಿಷ್ಯ

Navasamaja.com 1 week ago

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಉತ್ತರ ಕೊಟ್ಟಿದ್ದಾರೆ.

ಸೋಮವಾರದ ಒಳಗೆ ಡಿಕೆಶಿ ಪದಗ್ರಹಣ
ಮುಂಬರುವ ಸೋಮವಾರದ ಒಳಗೆ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಮತ್ತು ಮುಂದಿನ 8 ವರ್ಷಗಳ ಕಾಲ ಅವರನ್ನ ಅಲ್ಲಾಡಿಸಲು ಯಾರಿಂದಲೂ ಆಗಲ್ಲ ಎಂದು ಅವರು ಭವಿಷ್ಯ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ದ್ವಾರಕನಾಥ್ ಗುರೂಜಿ, ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ಹಂಚಿಕೊಂಡಿದ್ದಾರೆ. ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ಡಿಕೆಶಿ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಾವು ಭವಿಷ್ಯ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಸದಾ ತಮ್ಮ ಸಂಪರ್ಕದಲ್ಲಿರುವ ಶಿವಕುಮಾರ್ ತಮಗೆ ಮನೆಯ ಮಗನಿದ್ದಂತೆ ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಡಿಕೆಶಿಗೆ ಸಿಎಂ ಪಟ್ಟ ಸಿಗುವುದು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ತಾವು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಖುದ್ದು ಶಿವಕುಮಾರ್ ಅವರೇ ಫೋನ್ ಮಾಡಿ ಕೆಲಸ ಮುಗಿದಿರುವ ಸಿಹಿ ಸುದ್ದಿ ನೀಡಿದ್ದಾಗಿ ರಹಸ್ಯ ಬಿಚ್ಚಿಟ್ಟಿದ್ದಾರೆ.

ಸಿದ್ದರಾಮಯ್ಯ ಅವರ ರಾಜಯೋಗ ಮುಗಿದಿದೆ
ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಜಾತಕದ ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ನಡೆಸಿರುವ ಗುರೂಜಿ, ವೃಶ್ಚಿಕ ರಾಶಿಯ ಸಿದ್ದರಾಮಯ್ಯ ಅವರಿಗೆ ಸದ್ಯ ಗುರು ಮತ್ತು ಶನಿ ಬಲ ಎರಡೂ ಇಲ್ಲದಿರುವುದರಿಂದ ಅವರ ಸಿಎಂ ಆಗುವ 'ರಾಜಯೋಗ' ಮುಗಿದಿದೆ. ಆದರೆ, ರಾಜ್ಯಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ ಎಂದಿದ್ದಾರೆ. ಇನ್ನೊಂದೆಡೆ, ಗೋಚಾರ ಫಲದ ಪ್ರಕಾರ ಗುರು ಈಗ ಮಿಥುನ ರಾಶಿಯಲ್ಲಿದ್ದು, ಡಿ.ಕೆ. ಶಿವಕುಮಾರ್ ಅವರಿಗೆ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಈ ಭಾರಿ ರಾಜಯೋಗದ ಬಲದಿಂದಾಗಿ ಮುಂದಿನ ಎಂಟು ವರ್ಷಗಳ ಕಾಲ ಅವರ ನೇತೃತ್ವದ ಆಡಳಿತ ಸುಭದ್ರವಾಗಿರಲಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಗುರೂಜಿ, ಆತ ಅತ್ಯಂತ ಬುದ್ಧಿವಂತ ಹಾಗೂ ಚತುರ ನಾಯಕ. ಕೆಲವೊಮ್ಮೆ ಉದ್ವೇಗಕ್ಕೆ ಒಳಗಾಗುತ್ತಾರಾದರೂ ಎಲ್ಲವನ್ನೂ ಸಹನೆಯಿಂದ ಸಂಭಾಳಿಸುವ ಶಕ್ತಿ ಅವರಿಗಿದೆ. ಯಾರನ್ನೂ ಭೇದಭಾವ ಮಾಡದೆ ಹೆಗಲ ಮೇಲೆ ಕೈಹಾಕಿ ಮಾತನಾಡಿಸುವ ಗುಣ ಹೊಂದಿರುವ ಅವರಿಗೆ ಯಾರದ್ದೋ ಬ್ರ್ಯಾಂಡ್ ಅಗತ್ಯವಿಲ್ಲ, ಏಕೆಂದರೆ 'ಶಿವಕುಮಾರ್' ಅನ್ನೋದೇ ಒಂದು ಬ್ರ್ಯಾಂಡ್ ಎಂದು ಬಣ್ಣಿಸಿದ್ದಾರೆ. ಸಿಎಂ ಆದ ಬಳಿಕ ಅವರು ಬೆಂಗಳೂರಿನ ಟ್ರಾಫಿಕ್, ಮೂಲಸೌಕರ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಲಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರನ್ನೂ ಜೊತೆಯಲ್ಲೇ ಕರೆದುಕೊಂಡು ಹೋಗಿ ನಾಡಿನ ಅಭಿವೃದ್ಧಿಗಾಗಿ ಒಂದು ಅತ್ಯುತ್ತಮ ಸರ್ಕಾರವನ್ನು ನೀಡಲಿದ್ದಾರೆ ಎಂದು ಗುರೂಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja