ನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನ ಈಗಾಗಲೇ ಮಾಡಲಾಗುತ್ತಿದೆ. ಇದೀಗ ಮತ್ತೊಂದು ಮಹತ್ವದ ಸುಧಾರಣೆ ಮಾಡಲು ಶಿಕ್ಷಣ (Education) ಸಚಿವಾಲಯ ನಿರ್ಧಾರ ಮಾಡಿದ್ದು, ಕಪ್ಪು ಹಲಗೆಗಳ ಬದಲಿಗೆ ಆಧುನಿಕ ಸ್ಮಾರ್ಟ್ ಬೋರ್ಡ್‌ಗಳನ್ನು ಅಳವಡಿಕೆ ಮಾಡಲು ಮುಂದಾಗಿದೆ.
ಸೃಜನಶೀಲತೆ ಹೆಚ್ಚಿಸಲು ಕ್ರಮ ಯಾವ ವಯಸ್ಸಿನ ಮಕ್ಕಳಿಗೆ ಈ ವಿಶೇಷ ಯೋಜನೆ? ಮಾಹಿತಿಗಳ ಪ್ರಕಾರ, 3ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಈ ವಿಷಯಗಳನ್ನು ಕಲಿಸಲು ಸಚಿವಾಲಯ ಸಜ್ಜಾಗಿದ್ದು, ಈ ವಿಷಯಗಳನ್ನ ಗಣಿತದ ಜೊತೆಗೆ ಸೇರಿಸಲು ಕಲಿಸಲು ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ ಬಹುತೇಕ ಮಕ್ಕಳಿಗೆ ಗಣಿತ ಎಂದರೆ ಭಯ ಇರುತ್ತದೆ. ಹಾಗಾಗಿ ಇದರ ಮೂಲಕ ಗಣಿತ ಮೇಲಿನ ಭಯವನ್ನ ಸಹ ಹೋಗಲಾಡಿಸಬಹುದಾಗಿದೆ. ಬಾಯಿಪಾಠ ಕ್ಯಾನ್ಸಲ್ ಇದರ ಜೊತೆಗೆ ಪ್ರಾದೇಶಿಕ ಭಾಷೆಗೆ ಸಹ ಮಹತ್ವ ನೀಡಲು ಯೋಜನೆ ಮಾಡಲಾಗಿದೆ. ಇದಲ್ಲದೇ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಹ ಅನೇಕ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಮಾತೃಭಾಷೆಯಲ್ಲಿ ಕಲಿಕೆ ನಡೆಯುವುದರಿಂದ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಬಹುದು. ಇದು ಅವರ ಕಲಿಕೆಗೆ ಸಹ ಸಹಾಯ ಮಾಡುತ್ತದೆ. ಈ ಎಲ್ಲಾ ಬದಲಾವಣೆಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳ ಬಳಕೆಯ ಬಗ್ಗೆ ಸಹ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಇನ್ಸ್ಟಾಗ್ರಾಮ್, ಯೂಟ್ಯೂಬ್ ಮುಂತಾದ ಸೋಷಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳು ಯಾವ ರೀತಿ ಕೆಲಸ ಮಾಡುತ್ತದೆ ಮತ್ತು ಅದರ ಹಿಂದೆ ಇರುವ ಅಲ್ಗಾರಿದಮ್ ಹೇಗೆ ಇರುತ್ತದೆ ಎಂಬುದನ್ನ ತಿಳಿಸಲಾಗುತ್ತದೆ ಎನ್ನಲಾಗಿದೆ.
ಹೌದು, ಕಾಲ ಬದಲಾದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಹ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳ ಅಭಿವೃದ್ಧಿಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯ ಹೊಸ ಹೆಜ್ಜೆ ಇಡುತ್ತಿದೆ. ಇಲಾಖೆಯ ಈ ನಿರ್ಧಾರದಿಂದ ಮಕ್ಕಳ ಸೃಜನಶೀಲತೆ ಮತ್ತು ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಯುತ್ತದೆ. ಇದಿಷ್ಟೇ ಅಲ್ಲದೇ, ಅದರ ಜೊತೆಗೆ ಕೋಡಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಹ ಮಕ್ಕಳಿಗೆ ಕಲಿಸಲು ನಿರ್ಧಾರ ಮಾಡಲಾಗಿದೆ. ಅದರಲ್ಲೂ NCERT ಮತ್ತು CBSE ಸಹಯೋಗದೊಂದಿಗೆ ವಿದ್ಯಾರ್ಥಿಗಳು ಈ ಎಲ್ಲವನ್ನ ತಮ್ಮ ಮಾತೃಭಾಷೆಯಲ್ಲೇ ಕಲಿಯಬಹುದಾಗಿದೆ.
ಇನ್ನು ಮತ್ತೊಂದು ದೊಡ್ಡ ಬದಲಾವಣೆ ಎಂದರೆ ಬಾಯಿಪಾಠ ಪದ್ಧತಿಗೆ ಬ್ರೇಕ್ ಹಾಕಲಾಗುತ್ತಿದೆ. ಈ ಮೊದಲು ವಿದ್ಯಾರ್ಥಿಗಳು ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯುತ್ತಿದ್ದರು. ಆದರೆ ಈಗ ವಿಮರ್ಶಾತ್ಮಕ ಚಿಂತನೆಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ಮಕ್ಕಳ ವಿಶ್ಲೇಷಣಾತ್ಮಕ ಶಕ್ತಿ ಸಹ ಹೆಚ್ಚಾಗುತ್ತದೆ.

