Dailyhunt Logo
  • Light mode
    Follow system
    Dark mode
    • Play Story
    • App Story
ELECTION: ಪರಿಷತ್.. ರಾಜ್ಯಸಭಾ ಎಲೆಕ್ಷನ್​​​ಗೆ ಅಧಿಸೂಚನೆ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ

ELECTION: ಪರಿಷತ್.. ರಾಜ್ಯಸಭಾ ಎಲೆಕ್ಷನ್​​​ಗೆ ಅಧಿಸೂಚನೆ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ

Navasamaja.com 3 weeks ago

ಬೆಂಗಳೂರು: ಮೇಲ್ಮನೆ (Legislative Council) ಹಾಗೂ ಸಂಸತ್ತಿನ (Rajya sabha) ಉನ್ನತ ಸದನಕ್ಕೆ ಕರ್ನಾಟಕದಿಂದ ಪ್ರತಿನಿಧಿಗಳನ್ನು (Representatives) ಆರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಈ ಕುರಿತು ಶಾಸನ ಸಭೆಯ ಕಾರ್ಯಾಲಯವು ಅಧಿಕೃತ ಆದೇಶ ಹೊರಡಿಸಿದೆ.

ಜೂನ್ ತಿಂಗಳಾಂತ್ಯಕ್ಕೆ ಹಾಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿಯಲಿದ್ದು, ತೆರವಾಗಲಿರುವ ಒಟ್ಟು 11 ಸ್ಥಾನಗಳಿಗೆ (4 ರಾಜ್ಯಸಭೆ ಹಾಗೂ 7 ವಿಧಾನ ಪರಿಷತ್) ಹೊಸಬರ ಆಯ್ಕೆ ನಡೆಯಲಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ದೇವೇಗೌಡ, ಈರಣ್ಣ ಕಡಾಡಿ ಮತ್ತು ಕೆ. ನಾರಾಯಣ ಅವರ ರಾಜ್ಯಸಭಾ ಅವಧಿ ಜೂನ್ 25ಕ್ಕೆ ಮುಕ್ತಾಯವಾಗಲಿದೆ. ಇತ್ತ ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಎಂ.ಟಿ.ಬಿ. ನಾಗರಾಜು, ನಸೀರ್ ಅಹಮದ್, ಗೋವಿಂದ ರಾಜು, ಪ್ರತಾಪ ಸಿಂಹ ನಾಯಕ್, ಸುನಿಲ್ ವಲ್ಯಾಪುರೆ ಹಾಗೂ ತಿಪ್ಪಣ್ಣಪ್ಪ ಅವರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದೆ.

ಎಂ.ಕೆ. ವಿಶಾಲಾಕ್ಷಿ ಮತ್ತು ಬಿ.ಎಸ್. ಮಹಾಲಿಂಗೇಶ್ ಅವರು ಕ್ರಮವಾಗಿ ಮುಖ್ಯ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಈ ಪ್ರಕ್ರಿಯೆಯನ್ನು ಮುನ್ನಡೆಸಲಿದ್ದಾರೆ. ಜೂನ್ 1 ರಂದು ಅಧಿಕೃತ ಚಾಲನೆ ಸಿಕ್ಕಿದ್ದು, ಅಭ್ಯರ್ಥಿಗಳು ಜೂನ್ 8 ರೊಳಗೆ ಅರ್ಜಿ ಸಲ್ಲಿಸಬೇಕು. ಜೂನ್ 9 ರಂದು ಪರಿಶೀಲನೆ ನಡೆದು, ಹಿಂಪಡೆಯಲು ಜೂನ್ 11 ಕೊನೆಯ ದಿನವಾಗಿದೆ. ಜೂನ್ 18 ರಂದು ಮತದಾನ ಹಾಗೂ ಫಲಿತಾಂಶ ಪ್ರಕಟಣೆ ಒಟ್ಟಿಗೇ ಜರುಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja