Dailyhunt Logo
  • Light mode
    Follow system
    Dark mode
    • Play Story
    • App Story
ELON MUSK: ಒಂದು ತಪ್ಪು ನಿರ್ಧಾರಕ್ಕೆ ಎಲಾನ್ ಮಸ್ಕ್​​​ನ ಟ್ರಿಲಿಯನೇರ್ ಪಟ್ಟ ಉಡೀಸ್!

ELON MUSK: ಒಂದು ತಪ್ಪು ನಿರ್ಧಾರಕ್ಕೆ ಎಲಾನ್ ಮಸ್ಕ್​​​ನ ಟ್ರಿಲಿಯನೇರ್ ಪಟ್ಟ ಉಡೀಸ್!

Navasamaja.com 6 days ago

ಬೆಂಗಳೂರು: ಜಗತ್ತಿನ ಪ್ರಭಾವಿ ಉದ್ಯಮಿ (Entrepreneur) ಎಲಾನ್ ಮಸ್ಕ್(Elon Musk) ಇತ್ತೀಚೆಗಷ್ಟೇ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೇರ್ (trillionaire) (ಸರಿಸುಮಾರು 83 ಲಕ್ಷ ಕೋಟಿ ರೂಪಾಯಿ ಸಂಪತ್ತು) ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಮಸ್ಕ್ ಅವರ ಈ ಮಂತಿಕೆ ಮತ್ತು ಆದಾಯದ ಜಿಗಿತ ಜಗತ್ತಿನ ಇತರೆ ಬಿಲಿಯನೇರ್‌ಗಳನ್ನೇ ಚಕಿತಗೊಳಿಸಿತ್ತು. ಆದರೆ, ಈ ಪ್ರತಿಷ್ಠಿತ ಪಟ್ಟ ಎಲಾನ್ ಮಸ್ಕ್ ಬಳಿ ಹೆಚ್ಚು ದಿನ ಉಳಿಯಲಿಲ್ಲ. ಜೂನ್ ತಿಂಗಳಲ್ಲಿ ಮಸ್ಕ್ ತೆಗೆದುಕೊಂಡ ಒಂದು ತಪ್ಪು ನಿರ್ಧಾರದಿಂದಾಗಿ ಅವರ ಆಸ್ತಿ ಮೌಲ್ಯ ಭಾರಿ ಕುಸಿತ ಕಂಡಿದ್ದು, ಅವರು ತಮ್ಮ ಟ್ರಿಲಿಯನೇರ್ ಪಟ್ಟವನ್ನು ಕಳೆದುಕೊಂಡಿದ್ದಾರೆ.

1.4 ಟ್ರಿಲಿಯನ್ ಡಾಲರ್ ತಲುಪಿದ್ದ ಮಸ್ಕ್ ಸಂಪತ್ತು!
ಕಳೆದ ಜೂನ್ 12 ರಂದು ಎಲಾನ್ ಮಸ್ಕ್ ಒಡೆತನದ ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ (SpaceX) ಐಪಿಒ (IPO) ಮೂಲಕ ಷೇರು ಮಾರುಕಟ್ಟೆಗೆ ಅದ್ಧೂರಿಯಾಗಿ ಕಾಲಿಟ್ಟಿತ್ತು. ಮಾರುಕಟ್ಟೆಗೆ ಪ್ರವೇಶಿಸಿದ ಆರಂಭದಲ್ಲಿ ಪ್ರತಿ ಷೇರಿಗೆ 135 ಡಾಲರ್ ನಿಗದಿಯಾಗಿತ್ತು. ಆದರೆ, ಹೂಡಿಕೆದಾರರ ಮುಗಿಬೀಳುವಿಕೆಯಿಂದಾಗಿ ಕೆಲವೇ ದಿನಗಳಲ್ಲಿ ಈ ಷೇರಿನ ಮೌಲ್ಯ ಬರೋಬ್ಬರಿ 225 ಡಾಲರ್‌ಗೆ ಜಿಗಿತ ಕಂಡು ಇತಿಹಾಸ ಸೃಷ್ಟಿಸಿತು. ಇದರ ನೇರ ಪರಿಣಾಮ ಎಲಾನ್ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ ಬರೋಬ್ಬರಿ 1.4 ಟ್ರಿಲಿಯನ್ ಡಾಲರ್ ಗಡಿ ದಾಟಿ ಮುನ್ನಡೆದಿತ್ತು. ಈ ಮೂಲಕ ಮಸ್ಕ್ ಅವರು ಜಗತ್ತಿನ ಕುಬೇರರ ಪಟ್ಟಿಯಲ್ಲಿ ಯಾರಿಗೂ ಎಟುಕದ ಎತ್ತರಕ್ಕೆ ಸಾಗುವ ಸ್ಪಷ್ಟ ಸೂಚನೆ ನೀಡಿದ್ದರು.

ಪತನಕ್ಕೆ ಕಾರಣವಾದ ಆ ಒಂದು ಬಿಗ್ ಡೀಲ್!
ಷೇರು ಮಾರುಕಟ್ಟೆಯಲ್ಲಿ ಇತಿಹಾಸ ಬರೆಯುತ್ತಿದ್ದ ಸ್ಪೇಸ್ ಎಕ್ಸ್ ಸಂಸ್ಥೆಯು ಜೂನ್ 16 ರಂದು ತೆಗೆದುಕೊಂಡ ಒಂದು ನಿರ್ಧಾರ ಪರಿಸ್ಥಿತಿಯನ್ನು ತಲೆಕೆಳಗಾಗಿಸಿತು. ಬಾಹ್ಯಾಕಾಶದಲ್ಲಿ ಕೃತಕ ಬುದ್ಧಿಮತ್ತೆ (AI) ಡೇಟಾ ಸ್ಥಾಪಿಸುವ ಬೃಹತ್ ಯೋಜನೆ ಹೊಂದಿದ್ದ ಎಲಾನ್ ಮಸ್ಕ್, ಅದಕ್ಕೆ ಪೂರಕವಾಗಿ ಪ್ರಸಿದ್ಧ ಕೋಡಿಂಗ್ ಏಜೆಂಟ್ ಕಂಪನಿಯಾದ ಕರ್ಸರ್ (Cursor) ಅನ್ನು ಬರೋಬ್ಬರಿ 60 ಬಿಲಿಯನ್ ಡಾಲರ್ ನೀಡಿ ಖರೀದಿ ಮಾಡುವುದಾಗಿ ಘೋಷಿಸಿದರು. ಮಸ್ಕ್ ಅವರ ಈ ನಿರ್ಧಾರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿತು. ಮಸ್ಕ್ ಅವರ ಈ ಎಐ ಯೋಜನೆಗಳು ಇನ್ನೂ ಕೇವಲ ಪ್ರಾಯೋಗಿಕ ಹಂತದಲ್ಲಿದ್ದು, ಜಾರಿಗೆ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿಮತ್ತೆಯ (AI) ಮೇಲೆ ಅತಿಯಾದ ಹೂಡಿಕೆ ಮತ್ತು ಅವಲಂಬನೆ ಮಾಡುವುದು ಅಪಾಯಕಾರಿ ಎಂಬ ಅನುಮಾನ ಹೂಡಿಕೆದಾರರಲ್ಲಿ ಮೂಡಿತು.

ಷೇರು ಮಾರುಕಟ್ಟೆಯಲ್ಲಿ ಭಾರಿ ಪೆಟ್ಟು!
ಈ ಆತಂಕದ ಬೆನ್ನಲ್ಲೇ ಹೂಡಿಕೆದಾರರು ಸ್ಪೇಸ್ ಎಕ್ಸ್ ಷೇರುಗಳನ್ನು ಹಿಂಪಡೆಯಲು ಮುಂದಾದ ಕಾರಣ, ಕಂಪನಿಯ ಷೇರು ಮೌಲ್ಯದಲ್ಲಿ ಸತತವಾಗಿ ಕುಸಿತ ಆರಂಭವಾಯಿತು. ಕೇವಲ ಕೆಲವೇ ದಿನಗಳಲ್ಲಿ ಸ್ಪೇಸ್ ಎಕ್ಸ್ ಕಂಪನಿಯ ಷೇರು ಮೌಲ್ಯ ಶೇಕಡಾ 30 ರಷ್ಟು ಕುಸಿದು, 225 ಡಾಲರ್‌ನಿಂದ 154 ರಿಂದ 152 ಡಾಲರ್ ಮಟ್ಟಕ್ಕೆ ತಲುಪಿತು. ಈ ಪತನದ ಬಿಸಿ ಮಸ್ಕ್ ಅವರ ಮತ್ತೊಂದು ಪ್ರಮುಖ ಕಂಪನಿಯಾದ ಟೆಸ್ಲಾ (Tesla) ಮೇಲೂ ತಟ್ಟಿದ್ದು, ಟೆಸ್ಲಾ ಷೇರುಗಳು ಸಹ ಶೇಕಡಾ 21 ರಷ್ಟು ಕುಸಿತ ಕಂಡವು. ಈ ಆಘಾತದಿಂದಾಗಿ ಎಲಾನ್ ಮಸ್ಕ್ ಅವರ ಆಸ್ತಿ ಮೌಲ್ಯ ಟ್ರಿಲಿಯನ್ ಡಾಲರ್ ಕಳಚಿ ಬಿಲಿಯನ್ ಡಾಲರ್ ಮಟ್ಟಕ್ಕೆ ಕುಸಿಯಿತು.

ಆಸ್ತಿ ಕುಸಿದರೂ ವಿಶ್ವದ ನಂಬರ್ 1 ಶ್ರೀಮಂತ ಅವನೇ!
ಈ ಭಾರಿ ಹಿನ್ನಡೆಯಿಂದಾಗಿ ಎಲಾನ್ ಮಸ್ಕ್ ಅವರ ಟ್ರಿಲಿಯನೇರ್ ಪಟ್ಟ ಕೈತಪ್ಪಿ ಹೋಗಿದೆ ನಿಜ. ಪ್ರಸ್ತುತ ಅವರ ಒಟ್ಟು ಆಸ್ತಿ ಮೌಲ್ಯ 997 ಬಿಲಿಯನ್ ಡಾಲರ್‌ನಿಂದ 957 ಬಿಲಿಯನ್ ಡಾಲರ್ ಮಟ್ಟಕ್ಕೆ ಕುಸಿದಿದೆ. ಆದಾಗ್ಯೂ, ಎಲಾನ್ ಮಸ್ಕ್ ಅವರ ಜಾಗತಿಕ ನಂ.1 ಶ್ರೀಮಂತ ಪಟ್ಟಕ್ಕೆ ಯಾವುದೇ ಧಕ್ಕೆ ಬಂದಿಲ್ಲ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಅವರ ಒಟ್ಟು ಆಸ್ತಿ ಮೌಲ್ಯ ಕೇವಲ 284 ಬಿಲಿಯನ್ ಡಾಲರ್ ಆಗಿದೆ. ಹೀಗಾಗಿ, ಆಸ್ತಿ ಕುಸಿತದ ಹೊರತಾಗಿಯೂ ಎಲಾನ್ ಮಸ್ಕ್ ಮತ್ತು ಎರಡನೇ ಸ್ಥಾನದಲ್ಲಿರುವ ಲ್ಯಾರಿ ಪೇಜ್ ನಡುವೆ ಅಜಗಜಾಂತರ ವ್ಯತ್ಯಾಸವಿದ್ದು, ಮಸ್ಕ್ ಇಂದಿಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

: RISHAB SHETTY: ರಿಷಬ್ ಶೆಟ್ಟಿಗೆ ಬರ್ತ್‌ಡೇ ಶುಭಾಶಯ ಕೋರಿ ಹೊಸ ಸಿನಿಮಾ ಸುಳಿವು ನೀಡಿದ ಬಾಲಿವುಡ್ ಸ್ಟಾರ್ ವಿವೇಕ್ ಒಬೆರಾಯ್!

Dailyhunt
Disclaimer: This content has not been generated, created or edited by Dailyhunt. Publisher: Navasamaja