ಬೆಂಗಳೂರು: ಸ್ವಂತ ಮನೆ ಕಟ್ಟಬೇಕು ಎನ್ನುವ ಕನಸು ಎಲ್ಲರಿಗೂ ಇರುತ್ತದೆ. ಅದರಲ್ಲೂ ಕನಸಿನ ನಗರಿ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಬಹಳಷ್ಟು ಜನರು ಸರ್ಕಸ್ ಮಾಡುತ್ತಾರೆ. ಆದರೆ ಅದು ಸುಲಭದ ಮಾತಲ್ಲ. ಆದರೆ ಜನರ ಕನಸನ್ನ ನನಸು (Good News) ಮಾಡಲು ಬಿಡಿಎ ಸಜ್ಜಾಗಿದೆ.
4 ಸಾವಿರ ಫ್ಲಾಟ್ ಮಾರಾಟಕ್ಕೆ ಸಿದ್ಧತೆ ಯಾವ ಏರಿಯಾದಲ್ಲಿ ಸಿಗುತ್ತೆ ಮನೆಗಳು? ನಗರದ ಆಯಕಟ್ಟಿನ ಸ್ಥಳಗಳಾದ ಎಲೆಕ್ಟ್ರಾನಿಕ್ಸ್ ಸಿಟಿ, ಕೊನದಾಸಪುರ, ಕಾಳತಮ್ಮನಹಳ್ಳಿ ಮತ್ತು ಕೆಂಚನಪುರ ಸೇರಿದಂತೆ ಬೇಡಿಕೆ ಇರುವ ಪ್ರದೇಶಗಳಲ್ಲಿ ಈ ಅಪಾರ್ಟ್‌ಮೆಂಟ್‌ಗಳು ತಲೆಎತ್ತುತ್ತಿವೆ. ವಿಶೇಷವೆಂದರೆ, ಇಲ್ಲಿ ಕೇವಲ ಸಣ್ಣ ಮನೆಗಳಷ್ಟೇ ಅಲ್ಲದೆ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ 1 BHK ನಿಂದ ಹಿಡಿದು ವಿಶಾಲವಾದ 4 BHK ವರೆಗಿನ ಫ್ಲಾಟ್‌ಗಳು ಲಭ್ಯವಿರಲಿವೆ. ಅಂದರೆ ಸಣ್ಣ ಕುಟುಂಬಗಳಿಂದ ಹಿಡಿದು ದೊಡ್ಡ ಕುಟುಂಬಗಳವರೆಗೆ ಎಲ್ಲರಿಗೂ ಇಲ್ಲಿ ಆಯ್ಕೆಗಳಿವೆ. ಅದರಲ್ಲೂ ಕೊನದಾಸಪುರ ಬಡಾವಣೆಯ ಮೊದಲ ಹಂತದಲ್ಲಿ ಅತಿ ಹೆಚ್ಚು ಅಂದರೆ 1,928 ಫ್ಲಾಟ್‌ಗಳು ನಿರ್ಮಾಣವಾಗುತ್ತಿದ್ದು, ಇದರಲ್ಲಿ 2 BHK ಮತ್ತು 3 BHK ಮನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಖಾಸಗಿ ಬಿಲ್ಡರ್‌ಗಳ ಬಳಿ ಫ್ಲಾಟ್ ಖರೀದಿಸುವಾಗ ಎದುರಾಗುವ ಖಾತಾ ಸಮಸ್ಯೆ ಅಥವಾ ಕಾನೂನು ಗೊಂದಲಗಳ ಭಯ ಬಿಡಿಎ ಆಸ್ತಿಗಳಲ್ಲಿ ಇರುವುದಿಲ್ಲ. ಇವೆಲ್ಲವೂ ಅಧಿಕೃತ ಎ-ಖಾತಾ ಆಸ್ತಿಗಳಾಗಿದ್ದು, ಬ್ಯಾಂಕ್ ಸಾಲ ಪಡೆಯುವುದು ಕೂಡ ತುಂಬಾ ಸುಲಭವಾಗಿರುತ್ತದೆ. ಕಡಿಮೆ ಬೆಲೆಯಲ್ಲಿ ಸುರಕ್ಷಿತ ಮತ್ತು ನಂಬಿಕಸ್ತ ಆಸ್ತಿಯನ್ನು ಹೊಂದಲು ಬಯಸುವವರಿಗೆ ಬಿಡಿಎಯ ಈ ಯೋಜನೆ ಒಂದು ಉತ್ತಮ ಅವಕಾಶವಾಗಿದೆ. ರಾಜಧಾನಿಯಲ್ಲಿ ನಿವೇಶನ ಅಥವಾ ಫ್ಲಾಟ್ ದರಗಳು ಗಗನಕ್ಕೇರುತ್ತಿರುವ ಈ ಸಮಯದಲ್ಲಿ, ಸರ್ಕಾರದ ಈ ವಸತಿ ಯೋಜನೆ ಮಧ್ಯಮ ವರ್ಗದ ಜನರಿಗೆ ದೊಡ್ಡ ಆಸರೆಯಾಗಲಿದೆ.
ಬೆಂಗಳೂರಿನಲ್ಲಿ ಸೈಟ್ ಬೆಲೆ ಕೇಳಿದ್ರೆ ತಲೆ ಸುತ್ತಿ ಬೀಳೋದು ಫಿಕ್ಸ್. ಹಾಗಾಗಿ ಅನೇಕ ಜನರ ಕನಸು ಕನಸಾಗಿಯೇ ಉಳಿಯುತ್ತೆ. ಆದರೆ ಇದೀಗ ಬಿಡಿಎ ತಂದಿರುವ ಹೊಸ ಯೋಜನೆಯಿಂದ ಮನೆ ನಿಮ್ಮದಾಗಿಸಿಕೊಳ್ಳಬಹುದು. ಹೌದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭರ್ಜರಿ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ನಗರದ ಆರು ಪ್ರಮುಖ ಬಡಾವಣೆಗಳಲ್ಲಿ ಸುಮಾರು 3,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 4,000ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಹಂತ ಹಂತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಬಿಡಿಎ ಸಿದ್ಧತೆ ನಡೆಸುತ್ತಿದೆ. ಈ ವಸತಿ ಯೋಜನೆಗಳ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಇವುಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ಯೋಜಿಸಲಾಗಿದೆ.

