ಬೆಂಗಳೂರು: 2026ರ ಮುಂಗಾರು ಹಂಗಾಮಿಗೆ ರೈತರಿಗೆ (farmer) ರಸಗೊಬ್ಬರದ (Fertilizer) ಸಮರ್ಪಕ ಪೂರೈಕೆ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಕೃಷಿ ಇಲಾಖೆಯು ಹಲವು ಮಹತ್ವದ ಕ್ರಮಗಳನ್ನು ಜಾರಿಗೊಳಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಅಸ್ಥಿರತೆಯಿಂದಾಗಿ ರಸಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಕೃಷಿ ಸಚಿವ ಎನ್.
ಚಲುವರಾಯಸ್ವಾಮಿ (N.Cheluvaraya Swamy) ಅವರ ನೇತೃತ್ವದಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪೂರೈಕೆ ಮತ್ತು ದಾಸ್ತಾನು ವಿವರ ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ಹಂಚಿಕೆ ಮಾಡಿದೆ. ಏಪ್ರಿಲ್ 1ರ ವೇಳೆಗೆ ರಾಜ್ಯದಲ್ಲಿ ಈಗಾಗಲೇ 11.42 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹ ಲಭ್ಯವಿದೆ. ಇದಲ್ಲದೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (KSCMF) ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದ (KSSC) ಮೂಲಕ ದಾಸ್ತಾನು ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು, ಪ್ರಸ್ತುತ 28,224 ಮೆಟ್ರಿಕ್ ಟನ್ ಗೊಬ್ಬರ ಮೀಸಲು ದಾಸ್ತಾನಿನಲ್ಲಿದೆ. ನಿಯಮಿತ ವಿತರಣೆ ಮತ್ತು ನಿಗಾ ಡೇಟಾ ಬೇಸ್ ಆಧಾರಿತ ವಿತರಣೆ: ಯೂರಿಯಾ ಬಳಕೆಯನ್ನು ನಿಯಂತ್ರಿಸಲು ರೈತರ ಭೂ ಹಿಡುವಳಿ ಮತ್ತು ಬೆಳೆ ಮಾದರಿಯನ್ನು ಆಧರಿಸಿ ವಿತರಣೆ ಮಾಡುವ 'ಡೇಟಾ ಬೇಸ್' ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪ್ರಾಯೋಗಿಕ ಯೋಜನೆ ಎಂಟು ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದು, ಮುಂಬರುವ ಹಂಗಾಮಿನಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಅಕ್ರಮ ತಡೆಗೆ ಕ್ರಮ: ಕೃಷಿಯೇತರ ಚಟುವಟಿಕೆಗಳಿಗೆ ಯೂರಿಯಾ ದುರುಪಯೋಗವಾಗುವುದನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗಡಿ ತಪಾಸಣೆ: ಅಂತರರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳ ಮೂಲಕ ಯೂರಿಯಾ ಅಕ್ರಮ ಸಾಗಣೆಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಪ್ರತಿ ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರೈಕೆ ಮತ್ತು ಮಾರಾಟದ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮುಖ್ಯಾಂಶಗಳು ಇದನ್ನೂಓದಿ: ವಿಧಾನಸೌಧದಲ್ಲಿ ಇ - ವಿಧಾನ ಯೋಜನೆಗೆ ಅಸ್ತು - ಯುಟಿ ಖಾದರ್ ಚಾಲನೆ

