Dailyhunt Logo
  • Light mode
    Follow system
    Dark mode
    • Play Story
    • App Story
GRUHAJYOTI: ಗೃಹ ಜ್ಯೋತಿ ಮರುಪರಿಶೀಲನೆಗೆ ಮೊಬೈಲ್ ಮೂಲಕ  ಅರ್ಜಿ ಸಲ್ಲಿಸುವುದು ಹೇಗೆ? VIDEO

GRUHAJYOTI: ಗೃಹ ಜ್ಯೋತಿ ಮರುಪರಿಶೀಲನೆಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? VIDEO

Navasamaja.com 2 weeks ago

ಬೆಂಗಳೂರು: ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಉಚಿತ ವಿದ್ಯುತ್ ಯೋಜನೆಯಾದ 'ಗೃಹ ಜ್ಯೋತಿ' (Gruha Jyothi Scheme) ಸೌಲಭ್ಯ ಪಡೆಯುತ್ತಿರುವ ಗ್ರಾಹಕರಿಗೆ ಈಗ ಹೊಸ ಮೊಬೈಲ್ ಆಯಪ್ ಮೂಲಕ ಮರುಪರಿಶೀಲನೆ (Verification) ಪ್ರಕ್ರಿಯೆ ಆರಂಭವಾಗಿದೆ.

ಸಾರ್ವಜನಿಕರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕವೇ ಈ ಗೃಹ ಜ್ಯೋತಿ ಪರಿಶೀಲನಾ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುವ ಕುರಿತು ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ನೀಡಲು ಲೈನ್‌ಮ್ಯಾನ್ ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (@powerman_yogesh) ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

  • ಮೊದಲು ನಿಮ್ಮ ಮೊಬೈಲ್‌ನಲ್ಲಿ 'ಗೃಹ ಜ್ಯೋತಿ ಆಯಪ್' (Gruha Jyothi App) ಅನ್ನು ಓಪನ್ ಮಾಡಿ.

  • ನಿಮ್ಮ ಭಾಗದ ವಿದ್ಯುತ್ ಸರಬರಾಜು ಸಂಸ್ಥೆಯನ್ನು (ಉದಾಹರಣೆಗೆ: BESCOM, HESCOM, MESCOM ಇತ್ಯಾದಿ) ಆಯ್ಕೆ ಮಾಡಿಕೊಳ್ಳಿ.

  • ಬಳಿಕ ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಗ್ರಾಹಕರ ಖಾತೆ ಸಂಖ್ಯೆಯನ್ನು (Account ID) ಟೈಪ್ ಮಾಡಿ, "ವಿವರಗಳನ್ನು ಪಡೆಯಿರಿ" (Get Details) ಎಂಬುದರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಹೆಸರು, ವಿಳಾಸ ಕಾಣಿಸುತ್ತದೆ. ಅದು ಸರಿಯಾಗಿದ್ದರೆ "ಹೌದು" ಎಂದು ಮುಂದುವರಿಯಿರಿ.

  • ನಿಮ್ಮ ಚಾಲ್ತಿಯಲ್ಲಿರುವ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಬರುವ ಒಟಿಪಿ (OTP) ಮೂಲಕ ಮೊಬೈಲ್ ವೆರಿಫಿಕೇಶನ್ ಮಾಡಿ.

  • ಮುಂದೆ, ನೀವು ಆ ಮನೆಯ ಮಾಲೀಕರೇ (Owner) ಅಥವಾ ಬಾಡಿಗೆದಾರರೇ (Tenant) ಎಂಬುದನ್ನು ಆಯ್ಕೆ ಮಾಡಿ.

  • ತದನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಜನರೇಟ್ ಮಾಡಿ. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ ಒಟಿಪಿಯನ್ನು ಹಾಕಿ ಆಧಾರ್ ಇ-ಕೆವೈಸಿ ಪೂರ್ಣಗೊಳಿಸಿ.

  • ನಿಮ್ಮ ಜಿಲ್ಲೆ, ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವನ್ನು ಸರಿಯಾಗಿ ಆಯ್ಕೆ ಮಾಡಿ.

  • ನಿಮ್ಮ ಪಡಿತರ ಚೀಟಿಯ ಪ್ರಕಾರ (APL ಅಥವಾ BPL) ಸೂಕ್ತವಾದ ಆಯ್ಕೆಯನ್ನು ಕ್ಲಿಕ್ ಮಾಡಿ.

  • ನೀವು ಕರ್ನಾಟಕದ ನೋಂದಾಯಿತ ಮತದಾರರೇ ಎಂಬುದಕ್ಕೆ 'ಹೌದು' ಎಂದು ಗುರುತಿಸಿ, ನಿಮ್ಮ ವೋಟರ್ ಐಡಿ (Voter ID) ಕಾರ್ಡ್‌ನಲ್ಲಿರುವಂತೆ ಪೂರ್ಣ ಹೆಸರು ಮತ್ತು EPIC ಸಂಖ್ಯೆಯನ್ನು ನಮೂದಿಸಿ.

  • ನಿಮ್ಮ ಮತದಾರರ ಚೀಟಿಯ ಮುಂಭಾಗ (Front Side) ಮತ್ತು ಹಿಂಭಾಗದ (Back Side) ಸ್ಪಷ್ಟವಾದ ಫೋಟೋವನ್ನು ಮೊಬೈಲ್ ಕ್ಯಾಮೆರಾ ಮೂಲಕವೇ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಿ.

  • ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ (Taxpayer) 'ಹೌದು' ಎಂದು, ಇಲ್ಲದಿದ್ದರೆ 'ಇಲ್ಲ' ಎಂದು ಆಯ್ಕೆ ಮಾಡಿ. (ತೆರಿಗೆದಾರರಾಗಿದ್ದರೆ ಪ್ಯಾನ್ ಕಾರ್ಡ್ ವಿವರ ಹಾಗೂ ಫೋಟೋ ಅಪ್‌ಲೋಡ್ ಮಾಡಬೇಕಾಗುತ್ತದೆ).

  • ನಿಮ್ಮ ವೃತ್ತಿ (ಉದಾಹರಣೆಗೆ: ರೈತ, ಕೂಲಿ ಕಾರ್ಮಿಕ, ಖಾಸಗಿ ಉದ್ಯೋಗ ಇತ್ಯಾದಿ) ಮತ್ತು ನಿಮ್ಮ ಸಾಮಾಜಿಕ ವರ್ಗವನ್ನು (SC, ST, OBC, Minority) ಆರಿಸಿಕೊಳ್ಳಿ.

  • ಗಮನಿಸಿ: ನೀವು 'ST' ಅಥವಾ ಇತರೆ ನಿರ್ದಿಷ್ಟ ವರ್ಗವನ್ನು ಆಯ್ಕೆ ಮಾಡಿದರೆ, ಕಡ್ಡಾಯವಾಗಿ ನಿಮ್ಮ ಆರ್‌ಡಿ (RD) ಪ್ರಮಾಣಪತ್ರ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಒಬಿಸಿ ಅಥವಾ ಇತರೆ ಸಾಮಾನ್ಯ ವರ್ಗಗಳಿಗೆ ಇದರ ಅಗತ್ಯವಿರುವುದಿಲ್ಲ.

  • ಕೊನೆಯದಾಗಿ ಅರ್ಜಿದಾರರು ತಮ್ಮ ಮೊಬೈಲ್ ಕ್ಯಾಮೆರಾ ಆನ್ ಮಾಡಿ ತಮ್ಮ 'ಲೈವ್ ಫೋಟೋ' (Live Photo) ಅನ್ನು ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು.

  • ಪರದೆಯ ಮೇಲೆ ಕಾಣಿಸುವ ಸ್ವಯಂ ಘೋಷಣೆಯ ನಿಯಮಗಳನ್ನು (Declarations) ಜಾಗರೂಕತೆಯಿಂದ ಓದಿ, ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

  • ಎಲ್ಲಾ ವಿವರಗಳು ಸರಿಯಾಗಿರುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡು, ಕೊನೆಯಲ್ಲಿ "ಅರ್ಜಿ ಸಲ್ಲಿಸಿ" (Submit) ಬಟನ್ ಒತ್ತಿ.

ಈ ಹಂತಗಳು ಮುಗಿಯುತ್ತಿದ್ದಂತೆ ಪರದೆಯ ಮೇಲೆ ನಿಮ್ಮ ನೋಂದಣಿ ಯಶಸ್ವಿಯಾಗಿದೆ ಎಂಬ ಸಂದೇಶ ಮೂಡುತ್ತದೆ. ಅಧಿಕಾರಿಗಳು ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಮುಂದಿನ ಪ್ರಕ್ರಿಯೆಯ ಮಾಹಿತಿ ನಿಮಗೆ ಲಭ್ಯವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja