Dailyhunt Logo
  • Light mode
    Follow system
    Dark mode
    • Play Story
    • App Story
GUJRAT: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ, ಕಾರ್ಪೋರೇಟರ್‌ ಆದ ಬಿಜೆಪಿ ಆಫೀಸ್‌ ಪ್ಯೂನ್‌

GUJRAT: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ, ಕಾರ್ಪೋರೇಟರ್‌ ಆದ ಬಿಜೆಪಿ ಆಫೀಸ್‌ ಪ್ಯೂನ್‌

Navasamaja.com 0 months ago

ಮೆಹ್ಸಾನಾ: ರಾಜಕೀಯದಲ್ಲಿ ಅಧಿಕಾರ ಬಲುದೂರದ ಮಾತು ಎಂದು ಭಾವಿಸುವವರಿಗೆ ಗುಜರಾತ್‌ನ (Gujrat) ಮೆಹ್ಸಾನಾ ಮಹಾನಗರ (BJP) ಪಾಲಿಕೆ ಚುನಾವಣೆಯ ಫಲಿತಾಂಶ ಹೊಸ ಸ್ಫೂರ್ತಿಯನ್ನು ನೀಡಿದೆ. ಕಳೆದ 28 ವರ್ಷಗಳಿಂದ ಬಿಜೆಪಿ ಜಿಲ್ಲಾ ಕಚೇರಿ 'ಕಮಲಂ'ನಲ್ಲಿ ಕಚೇರಿ ಸೇವಕನಾಗಿ (ಪ್ಯೂನ್) ಕೆಲಸ ಮಾಡುತ್ತಿದ್ದ ರಮೇಶ್‌ಭಾಯ್ ಭಿಲ್, ಇದೀಗ ಅದೇ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾರ್ಪೊರೇಟರ್ ಆಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

4 ಸಾವಿರ ಮತಗಳ ಅಂತರದಿಂದ ಜಯ
ಮೆಹ್ಸಾನಾದ ವಾರ್ಡ್ ನಂಬರ್ 13ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಜಯಭೇರಿ ಬಾರಿಸಿದೆ. ಈ ಪೈಕಿ ರಮೇಶ್‌ಭಾಯ್ ಭಿಲ್ ಅವರು 4,000ಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ದಶಕಗಳ ಕಾಲ ಪಕ್ಷದ ನಾಯಕರಿಗೆ ಟೀ ನೀಡುವುದು ಮತ್ತು ಫೈಲ್‌ಗಳನ್ನ ನಿರ್ವಹಿಸುವ ಕೆಲಸದಲ್ಲಿದ್ದ ರಮೇಶ್‌ಭಾಯ್ ಅವರನ್ನು, ಪಕ್ಷದ ಸಾಮಾನ್ಯ ಕಾರ್ಯಕರ್ತರ ಮೇಲಿರುವ ಗೌರವದ ಸಂಕೇತವಾಗಿ ಚುನಾವಣಾ ಕಣಕ್ಕಿಳಿಸಲಾಗಿತ್ತು.

ಸಂತಸ ವ್ಯಕ್ತಪಡಿಸಿದ ರಮೇಶ್‌ಭಾಯ್
ತಮ್ಮ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಮೇಶ್‌ಭಾಯ್, 28 ವರ್ಷಗಳ ಕಾಲ ಕಚೇರಿ ಸೇವಕನಾಗಿ ದುಡಿದಿದ್ದೇನೆ. ಈಗ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ ಮಂತ್ರದೊಂದಿಗೆ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಭಾವುಕರಾಗಿ ನುಡಿದಿದ್ದಾರೆ. ಒಬ್ಬ ಸಾಮಾನ್ಯ ಸೇವಕನಿಂದ ಜನಪ್ರತಿನಿಧಿಯಾಗಿ ಬೆಳೆದ ಈ ಪ್ರಯಾಣವು, ಸ್ಥಳೀಯ ಮತದಾರರ ಮನ ಗೆದ್ದಿದೆ. ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಸಿಗಬಹುದು ಎಂಬುದನ್ನು ಸಾಬೀತುಪಡಿಸಿರುವ ರಮೇಶ್‌ಭಾಯ್ ಅವರ ಯಶೋಗಾಥೆ ಇದೀಗ ಉತ್ತರ ಗುಜರಾತ್‌ನಾದ್ಯಂತ ಸುದ್ದಿಯಾಗಿದೆ. ಪಾಲಿಕೆಯ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿರುವ ಇವರು, ತಮ್ಮ ಸರಳತೆಯ ಮೂಲಕವೇ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja