Dailyhunt Logo
  • Light mode
    Follow system
    Dark mode
    • Play Story
    • App Story
HAVERI : ಆಸ್ಪತ್ರೆ ಕ್ಯಾಂಟೀನ್ ಕೇಸರಿಬಾತ್‌ನಲ್ಲಿ ಹಲ್ಲಿ, ಜಿರಳೆ ಪತ್ತೆ - ಬೆಚ್ಚಿಬಿದ್ದ ರೋಗಿಗಳು

HAVERI : ಆಸ್ಪತ್ರೆ ಕ್ಯಾಂಟೀನ್ ಕೇಸರಿಬಾತ್‌ನಲ್ಲಿ ಹಲ್ಲಿ, ಜಿರಳೆ ಪತ್ತೆ - ಬೆಚ್ಚಿಬಿದ್ದ ರೋಗಿಗಳು

Navasamaja.com 1 day ago

ಹಾವೇರಿ : ತಾಯಿ-ಮಕ್ಕಳ ಆಸ್ಪತ್ರೆಯ (Hospital) ಕ್ಯಾಂಟೀನ್‌ನಲ್ಲಿ (Canteen) ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕುರಿತು ಗಂಭೀರ ಘಟನೆ ಹಾವೇರಿಯಲ್ಲಿ (Haveri) ಬೆಳಕಿಗೆ ಬಂದಿದೆ. ಬಾಣಂತಿಯರು ಹಾಗೂ ಅವರ ಸಂಬಂಧಿಕರಿಗೆ ಬೆಳಗಿನ ಉಪಹಾರವಾಗಿ ನೀಡಲಾಗುತ್ತಿದ್ದ ಕೇಸರಿಬಾತ್‌ನಲ್ಲಿ ಸತ್ತ ಹಲ್ಲಿಯ ಅವಶೇಷಗಳು ಪತ್ತೆಯಾಗಿದ್ದು, ಇದರಿಂದ ಆಹಾರ ಸೇವಿಸುತ್ತಿದ್ದವರಲ್ಲಿ ಆತಂಕ ಉಂಟಾಗಿದೆ.

ಈ ವೇಳೆ ಬಾಣಂತಿಯ ಸಹಾಯಕ್ಕೆ ಆಸ್ಪತ್ರೆಯಲ್ಲಿ ಉಳಿದಿದ್ದ ಸಂಬಂಧಿಯೊಬ್ಬರು ಕೇಸರಿಬಾತ್ ಪಾರ್ಸಲ್ ಪಡೆದು ತೆರೆಯುವಾಗ ಹಲ್ಲಿಯ ತುಂಡುಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸಂಬಂಧಿಕರು ಕ್ಯಾಂಟೀನ್ ಸಿಬ್ಬಂದಿಯನ್ನು ಪ್ರಶ್ನಿಸಿ, ಆಹಾರ ತಯಾರಿಕೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ ಬಳಿಕ ಕ್ಯಾಂಟೀನ್ ಪರಿಶೀಲಿಸಿದ ವೇಳೆ ಪ್ಲೇಟ್‌ಗಳಲ್ಲಿ ಜಿರಳೆಗಳು ಕಾಣಿಸಿಕೊಂಡಿವೆ ಎಂಬ ಆರೋಪವೂ ಕೇಳಿಬಂದಿದೆ. ಸ್ವಚ್ಛತಾ ವ್ಯವಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ.
ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಸಂಬಂಧಿಸಿದ ಆಸ್ಪತ್ರೆಯಾಗಿರುವುದರಿಂದ ಆಹಾರದ ತಯಾರಿ, ಸಂಗ್ರಹಣೆ ಹಾಗೂ ವಿತರಣೆಯಲ್ಲಿ ಕಟ್ಟುನಿಟ್ಟಿನ ಶುಚಿತ್ವ ಅಗತ್ಯ. ಈ ಘಟನೆ ಆಸ್ಪತ್ರೆಯ ಆಹಾರ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಕ್ಯಾಂಟೀನ್ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja