ಬೆಂಗಳೂರು:ಇತ್ತೀಚಿನದಿನಗಳಲ್ಲಿಹಾರ್ಟ್ ಅಟ್ಯಾಕ್(Heart Attack) ಹಾಗೂ ಸ್ಟ್ರೋಕ್‌ನಂತಹ ಸಮಸ್ಯೆಗಳು ಸಾಂಕ್ರಾಮಿಕದಂತೆ ಹರಡುತ್ತಿವೆ. ಇದಕ್ಕೆ ಕೇವಲ ಮಾನಸಿಕ ಜಂಜಾಟ, ವಾಯುಮಾಲಿನ್ಯ ಮತ್ತು ಕೆಟ್ಟ ಆಹಾರ ಪದ್ಧತಿ ಮಾತ್ರ ಕಾರಣವಲ್ಲ, ಬದಲಿಗೆ ನಮ್ಮ ದೇಹದಲ್ಲಿರುವ ರಕ್ತದ ಗುಂಪು(Blood Group) ಕೂಡ ಒಂದು ಪ್ರಮುಖ ಕಾರಣವಾಗಿರಬಹುದು ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನವೊಂದು(Medical Report) ತಿಳಿಸಿದೆ . ಹೌದು, ನಿಮ್ಮ ಬ್ಲಡ್ ಗ್ರೂಪ್ ಮತ್ತು ಹೃದಯಾಘಾತದ ರಿಸ್ಕ್‌ಗೆ ಹತ್ತಿರದ ಸಂಬಂಧವಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
'ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ' ನೇತೃತ್ವದಲ್ಲಿ ನಡೆದ ಈ ಬೃಹತ್ ಸಂಶೋಧನೆಯಲ್ಲಿ ಸುಮಾರು 4 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ 'O' ಬ್ಲಡ್ ಗ್ರೂಪ್ ಹೊಂದಿರದ ಜನರಲ್ಲಿ ಹೃದ್ರೋಗಗಳ ಸಾಧ್ಯತೆ ತೀರಾ ಹೆಚ್ಚಿರುವುದು ಕಂಡುಬಂದಿದೆ. ಅಲ್ಲದೆ, 'A' ಹಾಗೂ 'B' ರಕ್ತದ ಗುಂಪಿನ ಜನರಿಗೆ ಕೂಡ ಹಾರ್ಟ್ ಅಟ್ಯಾಕ್ ಆಗುವ ಸಂಭವನೀಯತೆ ಅತ್ಯಂತ ಹೆಚ್ಚಿದೆ ಎಂದು ವರದಿ ಎಚ್ಚರಿಸಿದೆ. ಯಾವ ಬ್ಲಡ್ ಗ್ರೂಪ್‌ನವರಿಗೆ ಎಷ್ಟು ರಿಸ್ಕ್ ಇದೆ ಎಂಬುದನ್ನು ಈ ಸಂಶೋಧನೆಯು ಶೇಕಡಾವಾರು ಆಧಾರದ ಮೇಲೆ ಸ್ಪಷ್ಟಪಡಿಸಿದೆ. 'O' ರಕ್ತದ ಗುಂಪಿನ ಜನರಿಗೆ ಹೋಲಿಸಿದರೆ, ಸಾಮಾನ್ಯವಾಗಿ 'A' ಮತ್ತು 'B' ಬ್ಲಡ್ ಗ್ರೂಪ್ ಉಳ್ಳವರಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಶೇ. 8 ರಷ್ಟು ಹೆಚ್ಚಿರುತ್ತದೆ. ಇನ್ನು ಪ್ರತ್ಯೇಕವಾಗಿ ಗಮನಿಸಿದರೆ, ಕೇವಲ 'A' ಗ್ರೂಪ್ ಹೊಂದಿರುವವರಲ್ಲಿ ಹಾರ್ಟ್ ಫೇಲ್ಯೂರ್ ಆಗುವ ರಿಸ್ಕ್ ಶೇ. 11 ರಷ್ಟು ಹೆಚ್ಚಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, 'B' ರಕ್ತದ ಗುಂಪಿನ ಜನರಲ್ಲಿ ಹೃದಯಾಘಾತದ ಅಪಾಯವು 'O' ಗ್ರೂಪ್‌ನವರಿಗಿಂತ ಬರೋಬ್ಬರಿ ಶೇ. 15 ರಷ್ಟು ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಅಂಕಿ-ಅಂಶಗಳ ಸಮೇತ ಸಾಬೀತುಪಡಿಸಿದ್ದಾರೆ. ರಕ್ತದ ಗುಂಪಿಗೂ ಹೃದಯದ ಕಾಯಿಲೆಗೂ ಇರುವ ನಂಟಿನ ಹಿಂದೆ 'ರಕ್ತ ಹೆಪ್ಪುಗಟ್ಟುವಿಕೆ' (Blood Clots) ಪ್ರವೃತ್ತಿ ಕೆಲಸ ಮಾಡುತ್ತದೆ. 'A' ಮತ್ತು 'B' ಬ್ಲಡ್ ಗ್ರೂಪ್ ಉಳ್ಳವರ ದೇಹದಲ್ಲಿ 'O' ಗ್ರೂಪ್‌ನವರಿಗಿಂತ ರಕ್ತ ಹೆಪ್ಪುಗಟ್ಟುವ ಗುಣ ಶೇ. 44 ರಷ್ಟು ತೀವ್ರವಾಗಿರುತ್ತದೆ. ಈ ರೀತಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ, ಅದು ಹಾರ್ಟ್‌ಗೆ ಶುದ್ಧ ರಕ್ತ ಕೊಂಡೊಯ್ಯುವ ಅಪಧಮನಿಗಳನ್ನು (Arteries) ಬ್ಲಾಕ್ ಮಾಡುತ್ತದೆ. ಇದೇ ಬ್ಲಾಕೇಜ್ ಮುಂದೆ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತದೆ. ಬ್ಲಡ್ ಗ್ರೂಪ್ ಎಂಬುದು ಪೋಷಕರಿಂದ ಬರುವ ಜೆನೆಟಿಕ್ ಅಂಶವಾಗಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, 'A' ಅಥವಾ 'B' ಗ್ರೂಪ್‌ನವರೆಲ್ಲರಿಗೂ ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದಲ್ಲ. ನಿಮ್ಮ ರಕ್ತದ ಗುಂಪನ್ನು ಒಂದು ಮುನ್ನೆಚ್ಚರಿಕೆ ಸಂದೇಶವಾಗಿ ಪರಿಗಣಿಸಿ, ಇಂದಿನಿಂದಲೇ ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು. ನಮ್ಮ ಹವ್ಯಾಸಗಳು ಉತ್ತಮವಾಗಿದ್ದರೆ, ರಕ್ತದ ಗುಂಪಿನಿಂದ ಬರಬಹುದಾದ ಇಂತಹ ಜೆನೆಟಿಕ್ ಅಪಾಯಗಳನ್ನು ಸುಲಭವಾಗಿ ದಾಟಬಹುದು ಎಂದು ವೈದ್ಯರು ಧೈರ್ಯ ತುಂಬಿದ್ದಾರೆ.

