Dailyhunt Logo
  • Light mode
    Follow system
    Dark mode
    • Play Story
    • App Story
HEMAVATHI: ಮಲೆನಾಡಿನಲ್ಲಿ ವರುಣನ ಅಬ್ಬರ: ಹೇಮಾವತಿ ಜಲಾಶಯಕ್ಕೆ ಭಾರಿ ಒಳಹರಿವು

HEMAVATHI: ಮಲೆನಾಡಿನಲ್ಲಿ ವರುಣನ ಅಬ್ಬರ: ಹೇಮಾವತಿ ಜಲಾಶಯಕ್ಕೆ ಭಾರಿ ಒಳಹರಿವು

Navasamaja.com 3 weeks ago

ಹಾಸನ: ಮುಂಗಾರು ಮಳೆ ಚುರುಕುಗೊಂಡಿರುವುದರಿಂದ ಹಾಸನ ಜಿಲ್ಲೆಯ ಗೊರೂರಿನ ಪ್ರಸಿದ್ಧ ಹೇಮಾವತಿ ಜಲಾಶಯಕ್ಕೆ (Hemavathi Reservoir) ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು, ಇದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹೆಚ್ಚುತ್ತಿದೆ ಜಲಾಶಯದ ಒಳಹರಿವು
ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗ ಹಾಗೂ ಹೇಮಾವತಿ ನದಿಯ ಉಗಮ ಸ್ಥಾನಗಳಲ್ಲಿ ಬಿಡುವಿಲ್ಲದೆ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ನದಿ-ತೊರೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜಲಾಶಯದ ಒಳಹರಿವಿನ ಪ್ರಮಾಣ ನಿರಂತರವಾಗಿ ಏರುತ್ತಲೇ ಸಾಗಿದೆ. ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕುಡಿಯುವ ನೀರು ಹಾಗೂ ಮುಂಬರುವ ಕೃಷಿ ಚಟುವಟಿಕೆಗಳಿಗೆ ಆಶಾಕಿರಣ ಮೂಡಿಸಿದೆ.

ಮಾಹಿತಿಗಳ ಪ್ರಕಾರ ಶುಕ್ರವಾರ ಬೆಳಗ್ಗೆ ಜಲಾಶಯದ ಒಳಹರಿವಿನ ಪ್ರಮಾಣ 5250 ಕ್ಯಸೆಕ್ಸ್‌ ಇತ್ತು., ಗುರುವಾರ ಬೆಳ್ಳಗ್ಗೆ ಸಮಯದಲ್ಲಿ 1000 ಕ್ಯೂಸೆಕ್ಸ್‌ ಇದ್ದ ಪ್ರಮಾಣ ಸಂಜೆಯ ವೇಳೆಗೆ ಹೆಚ್ಚಾಗಿತ್ತು ಎನ್ನಲಾಗಿದೆ. ಸದ್ಯ ಜಲಾಶಯದಿಂದ 300 ಕ್ಯೂಸೆಕ್ಸ್‌ ನೀರನ್ನ ಹೊರಗೆ ಬಿಡಲಾಗುತ್ತಿದೆ.

ಈಗ ಜಲಾಶಯದಲ್ಲಿ 2892.38 ಅಡಿ ನೀರಿದೆ, ಇಲ್ಲಿ 2922 ಅಡಿ ನೀರನ್ನ ಸಂಗ್ರಹಣೆ ಮಾಡುವ ಸಾಮರ್ಥ್ಯ ಇದೆ. ಇಲ್ಲಿಯವರೆಗೆ ಜಲಾಶಯದಲ್ಲಿ 15.39 ಟಿಎಂಸಿ ನೀರು ಸಂಗ್ರಹ ಇದೆ. ಇಲ್ಲಿ 37.10 ಟಿಎಂಸಿ ನೀರನ್ನ ಸಂಗ್ರಹ ಮಾಡಬಹುದು.

ಹೇಗಿದೆ ಕೆಆರ್‌ಎಸ್‌ -ಹಾರಂಗಿ ಪರಿಸ್ಥಿತಿ
ಇನ್ನು ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಸದ್ಯ 722 ಕ್ಯುಸೆಕ್ಸ್‌ ನೀರು ಹರಿದು ಬರುತ್ತಿದೆ, 758 ಕ್ಯುಸೆಕ್ಸ್‌ ಹೊರಗೆ ಬಿಡಲಾಗುತ್ತಿದೆ. ಇದು ಸ್ವಲ್ಪ ರೈತರಿಗೆ ಆತಂಕವನ್ನ ತಂದೊಡ್ಡಿದೆ. ಮುಖ್ಯವಾಗಿ ಈ ಜಲಾಶಯದಲ್ಲಿ ನೀರಿನ ಮಟ್ಟ 80.76 ಅಡಿಯಷ್ಟಿದೆ. ಸದ್ಯ 11.12 ಟಿಎಂಸಿ ನೀರು ಸಂಗ್ರಹ ಇದೆ. ಹಾಗೆಯೇ, ಹಾರಂಗಿಯಲ್ಲಿ ಕೂಡ ನೀರಿನ ಒಳಹರಿವು ಸ್ವಲ್ಪ ಹೆಚ್ಚಾಗಿದೆ. ಇಂದಿನ ಮಾಹಿತಿ ಪ್ರಕಾರ, 1113 ಕ್ಯುಸೆಕ್‌ ಇದ್ದು, ಆದರೆ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಬಹಳ ಕಡಿಮೆ.

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತ.. ರೈತರಿಗೆ ತೀವ್ರ ಆತಂಕ

ಕರ್ನಾಟಕದಲ್ಲಿ (Karnataka ) ಈ ಬಾರಿ ಮುಂಗಾರು ಮಳೆ (Rain ) ತೀವ್ರ ಕೈಕೊಟ್ಟಿದ್ದು, ಬರೋಬ್ಬರಿ ಶೇಕಡಾ 42 ರಷ್ಟು ಮಳೆ ಕೊರತೆಯಾಗಿದೆ.

ಇದರಿಂದಾಗಿ ಕೊಪ್ಪಳ (Koppal ) ಜಿಲ್ಲೆಯ ಹೊಸಪೇಟೆಯ ಪ್ರಸಿದ್ಧ ತುಂಗಭದ್ರಾ ಜಲಾಶಯದಿಂದ (TB Dam)ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹರಿಸಲಾಗುತ್ತಿದ್ದ ಕೃಷಿ ನೀರನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರಿ ಆಘಾತ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja