Dailyhunt Logo
  • Light mode
    Follow system
    Dark mode
    • Play Story
    • App Story
HIGH COURT : ರಾಜಸ್ತಾನ ಸರ್ಕಾರದ ಆಕ್ಷೇಪದ ನಡುವೆಯೂ ಅಸಾರಾಂ ಬಾಪುಗೆ ಪೆರೋಲ್ !

HIGH COURT : ರಾಜಸ್ತಾನ ಸರ್ಕಾರದ ಆಕ್ಷೇಪದ ನಡುವೆಯೂ ಅಸಾರಾಂ ಬಾಪುಗೆ ಪೆರೋಲ್ !

Navasamaja.com 2 weeks ago

ರಾಜಸ್ಥಾನ: ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ (Sexual harassment) ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ (life imprisonment) ಅನುಭವಿಸುತ್ತಿರುವ 85 ವರ್ಷದ ಆಸಾರಾಂಗೆ (Asaram) ರಾಜಸ್ಥಾನ ಹೈಕೋರ್ಟ್ 20 ದಿನಗಳ ಪೆರೋಲ್ (Parole) ಮಂಜೂರು ಮಾಡಿದೆ.

ಜೋಧ್‌ಪುರ ಮಧ್ಯವರ್ತಿ ಕಾರಾಗೃಹದಲ್ಲಿರುವ ಇವರ ಬಿಡುಗಡೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ, ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಸುಮಾರು 13 ವರ್ಷಗಳಿಗೂ ಹೆಚ್ಚು ಕಾಲ ಸೆರೆಮನೆ ವಾಸ ಅನುಭವಿಸಿರುವ ಆಸಾರಾಂ, ಹಿಂದೆ ಮಧ್ಯಂತರ ಜಾಮೀನಿನಲ್ಲಿ ಹೊರಬಂದಾಗ ಯಾವುದೇ ನಿಯಮಗಳನ್ನು ಮುರಿದಿಲ್ಲ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ. ಅವರು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ ಮಾಡಿಲ್ಲ ಮತ್ತು ಶಾಂತಿ ಭಂಗ ಉಂಟುಮಾಡಿಲ್ಲ ಎಂದು ವಿಭಾಗೀಯ ಪೀಠವು ಗಮನಿಸಿದೆ.

ಸರ್ಕಾರ ಹಾಗೂ ಪೋಲಿಸರು ವ್ಯಕ್ತಪಡಿಸಿದ ಭದ್ರತೆಯ ಭೀತಿಗಳು ಮತ್ತು ಪರಾರಿಯಾಗುವ ಶಂಕೆಗಳು ಯಾವುದೇ ಭದ್ರ ಆಧಾರವಿಲ್ಲದ ಕೇವಲ ಊಹಾಪೋಹಗಳಾಗಿವೆ ಎಂದು ತಿಳಿಸಿದ ಪೀಠವು, ₹50,000 ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯೊಂದಿಗೆ ಈ ಪೆರೋಲ್ ಸೌಲಭ್ಯವನ್ನು ಮಂಜೂರು ಮಾಡಿದೆ. ಇತರೆ ರಾಜ್ಯಗಳ ಪ್ರಕರಣಗಳು ಇದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja