Dailyhunt Logo
  • Light mode
    Follow system
    Dark mode
    • Play Story
    • App Story
HOLIDAY: ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ.. ಇಲ್ಲಿದೆ ಸಂಪೂರ್ಣ ಮಾಹಿತಿ

HOLIDAY: ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ.. ಇಲ್ಲಿದೆ ಸಂಪೂರ್ಣ ಮಾಹಿತಿ

Navasamaja.com 2 weeks ago

chatgpt Image

ಬೆಂಗಳೂರು: ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳಿದ್ದರೆ ಗ್ರಾಹಕರು ಈಗಲೇ ಯೋಜನೆ ರೂಪಿಸಿಕೊಳ್ಳುವುದು ಒಳಿತು. ಸಾಲು ಸಾಲು ಹಬ್ಬಗಳು ಹಾಗೂ ವಾರಾಂತ್ಯದ ರಜೆಗಳು ಸೇರಿ ಸೆಪ್ಟೆಂಬರ್‌ನಲ್ಲಿ ಒಟ್ಟು 13 ದಿನಗಳ ಕಾಲ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಬ್ಯಾಂಕ್‌ಗಳು (Banks holidays) ಮುಚ್ಚಲ್ಪಡಲಿವೆ.

ಕರ್ನಾಟಕದಲ್ಲಿ ಸಾಮಾನ್ಯ ವಾರಾಂತ್ಯದ ರಜೆಗಳು ಹಾಗೂ ಗಣೇಶ ಚತುರ್ಥಿ ಸೇರಿ ಒಟ್ಟು 7 ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹಬ್ಬದ ರಜೆಗಳ ನಡುವೆಯೇ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸೆಪ್ಟೆಂಬರ್ 11ರಂದು ಒಂದು ದಿನ ಹಾಗೂ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನ ಸೇರಿ ಒಟ್ಟು 4 ದಿನಗಳ ಕಾಲ ಮುಷ್ಕರ ನಡೆಯುವ ಸಾಧ್ಯತೆಯಿದೆ. ಈ ಮುಷ್ಕರ ನಡೆದರೆ ಹೆಚ್ಚುವರಿಯಾಗಿ 4 ದಿನ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು.

ಕರ್ನಾಟಕದಲ್ಲಿ ಸೆಪ್ಟೆಂಬರ್​ನಲ್ಲಿ ಇರುವ ಬ್ಯಾಂಕ್ ರಜೆಗಳು

  • ಸೆಪ್ಟೆಂಬರ್ 6: ಭಾನುವಾರದ ರಜೆ
  • ಸೆಪ್ಟೆಂಬರ್ 12: ಎರಡನೇ ಶನಿವಾರದ ರಜೆ
  • ಸೆಪ್ಟೆಂಬರ್ 13: ಭಾನುವಾರದ ರಜೆ
  • ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ
  • ಸೆಪ್ಟೆಂಬರ್ 20: ಭಾನುವಾರದ ರಜೆ
  • ಸೆಪ್ಟೆಂಬರ್ 26: ನಾಲ್ಕನೇ ಶನಿವಾರದ ರಜೆ
  • ಸೆಪ್ಟೆಂಬರ್ 27: ಭಾನುವಾರದ ರಜೆ

ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶನ ಹಬ್ಬ, ಮಹಾರಾಜ ಹರಿಸಿಂಗ್ ಜಯಂತಿ ಇತ್ಯಾದಿ ವಿಶೇಷ ಹಬ್ಬ ಹರಿದಿನಗಳಿದ್ದು, ಪ್ರದೇಶವಾರ ರಜಾದಿನಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇದೆ. ಸೆಪ್ಟೆಂಬರ್​ನ 13 ದಿನಗಳ ರಜೆಯಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಒಳಗೊಂಡಿವೆ. ಕರ್ನಾಟಕದಲ್ಲಿ 7 ದಿನ ಬ್ಯಾಂಕ್​ಗಳು ಬಂದ್ ಆಗಿರುತ್ತವೆ. ರಾಜ್ಯದಲ್ಲಿ ಗಣೇಶ ಚತುರ್ಥಿಗೆ ರಜೆ ಇರುತ್ತದೆ.

2026ರ ಸೆಪ್ಟೆಂಬರ್​ನಲ್ಲಿ ದೇಶದ ವಿವಿಧೆಡೆ ಬ್ಯಾಂಕ್ ರಜಾದಿನಗಳು

    • ಸೆಪ್ಟೆಂಬರ್ 4, ಶುಕ್ರವಾರ: ಕೃಷ್ಣ ಜನ್ಮಾಷ್ಟಮಿ (ಹಲವು ಕಡೆ ರಜೆ)
    • ಸೆಪ್ಟೆಂಬರ್ 6: ಭಾನುವಾರದ ರಜೆ
    • ಸೆಪ್ಟೆಂಬರ್ 12: ಎರಡನೇ ಶನಿವಾರದ ರಜೆ
    • ಸೆಪ್ಟೆಂಬರ್ 13: ಭಾನುವಾರದ ರಜೆ
    • ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ (ಹಲವು ಕಡೆ ರಜೆ)
    • ಸೆಪ್ಟೆಂಬರ್ 15, ಮಂಗಳವಾರ: ನುವಾಖಾಯ್, ಗಣೇಶ ಚತುರ್ಥಿ (ಹಲವೆಡೆ ರಜೆ)
    • ಸೆಪ್ಟೆಂಬರ್ 20: ಭಾನುವಾರದ ರಜೆ
    • ಸೆಪ್ಟೆಂಬರ್ 21, ಸೋಮವಾರ: ಶ್ರೀ ನಾರಾಯಣಗುರು ಸಮಾಧಿ, ಶ್ರೀಮಂತ ಶಂಕರದೇವ ಜನ್ಮೋತ್ಸವ (ಅಸ್ಸಾಂ, ಕೇರಳ ರಾಜ್ಯಗಳಲ್ಲಿ ರಜೆ)
    • ಸೆಪ್ಟೆಂಬರ್ 22, ಮಂಗಳವಾರ: ಕರ್ಮ ಪೂಜಾ (ಜಾರ್ಖಂಡ್​ನಲ್ಲಿ ರಜೆ)
    • ಸೆಪ್ಟೆಂಬರ್ 23, ಬುಧವಾರ: ಮಹಾರಾಜ ಹರಿಸಿಂಗ್ ಜಯಂತಿ (ಜಮ್ಮು ಕಾಶ್ಮೀರದಲ್ಲಿ ರಜೆ)
    • ಸೆಪ್ಟೆಂಬರ್ 25, ಶುಕ್ರವಾರ: ಇಂದ್ರಜಾತ್ರ (ಸಿಕ್ಕಿಂನಲ್ಲಿ ರಜೆ)
    • ಸೆಪ್ಟೆಂಬರ್ 26: ನಾಲ್ಕನೇ ಶನಿವಾರದ ರಜೆ
    • ಸೆಪ್ಟೆಂಬರ್ 27: ಭಾನುವಾರದ ರಜೆ

Dailyhunt
Disclaimer: This content has not been generated, created or edited by Dailyhunt. Publisher: Navasamaja