Dailyhunt
IPL: ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿಶೇಷ ಬಸ್, ಮೆಟ್ರೋ ಸಂಚಾರ ವಿಸ್ತರಣೆ

IPL: ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿಶೇಷ ಬಸ್, ಮೆಟ್ರೋ ಸಂಚಾರ ವಿಸ್ತರಣೆ

Navasamaja.com 3 weeks ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಕ್ರೇಜ್ ಆರಂಭವಾಗಿದ್ದು, ಏಪ್ರಿಲ್ 5ರ ಭಾನುವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ (BMRCL) ಮತ್ತು ಬಿಎಂಟಿಸಿ (BMTC) ಮಹತ್ವದ ಕ್ರಮಗಳನ್ನು ಕೈಗೊಂಡಿವೆ.

ಮೆಟ್ರೋ ಸಮಯ ವಿಸ್ತರಣೆ

ಪಂದ್ಯ ಮುಗಿದ ನಂತರ ಪ್ರೇಕ್ಷಕರು ಸುಲಭವಾಗಿ ಮನೆ ತಲುಪಲು ಅನುಕೂಲವಾಗುವಂತೆ ಮೆಟ್ರೋ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ಇದರಿಂದ ತಡರಾತ್ರಿಯವರೆಗೂ ಮೆಟ್ರೋ ಸೇವೆ ಲಭ್ಯವಿರಲಿದೆ.

ವಿಶೇಷ ಬಿಎಂಟಿಸಿ ಬಸ್ ವ್ಯವಸ್ಥೆ

ಜನಸಂದಣಿಯನ್ನು ನಿಯಂತ್ರಿಸಲು ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಬಸ್‌ಗಳು ಕ್ರೀಡಾಂಗಣದಿಂದ ಈ ಕೆಳಗಿನ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿವೆ.

  • ಕಾಡುಗೋಡಿ ಬಸ್ ನಿಲ್ದಾಣ
  • ಹೆಚ್.ಎ.ಎಲ್ ರಸ್ತೆ
  • ಸರ್ಜಾಪುರ
  • ಎಲೆಕ್ಟ್ರಾನಿಕ್ ಸಿಟಿ
  • ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
  • ಜನಪ್ರಿಯ ಟೌನ್ ಶಿಪ್
  • ಮಾಗಡಿ ರಸ್ತೆ
  • ಆರ್.ಕೆ. ಹೆಗಡೆ ನಗರ
  • ಯಲಹಂಕ, ಹೊಸಕೋಟೆ ಮತ್ತು ಬನಶಂಕರಿ

ಪೊಲೀಸ್ ಇಲಾಖೆಯ ಸೂಚನೆ

ಈ ವಿಶೇಷ ಬಸ್‌ಗಳು ಸಿಟಿಓ ಜಂಕ್ಷನ್‌ನಿಂದ ಬಿ.ಆರ್.ವಿ ಜಂಕ್ಷನ್‌ವರೆಗಿನ ರಸ್ತೆಯ ಎಡಭಾಗದಲ್ಲಿ ನಿಲುಗಡೆಯಾಗಲಿವೆ. ಸಾರ್ವಜನಿಕರು ಈ ಸಾರಿಗೆ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಅಲ್ಲದೆ, ಭದ್ರತೆಯ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಕೆಲವು ನಿಷೇಧಿತ ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಇದನ್ನೂಓದಿ: ಆಟೋ ಚಾಲಕರು.. ಸಾಮಾನ್ಯ ಜನರಿಗೆ ಗ್ಯಾಸ್‌ ಸಮಸ್ಯೆ, ಜನಪ್ರತಿನಿಧಿಗಳಿಗೆ IPL ಚಿಂತೆ; ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು!-VIDEO

Dailyhunt
Disclaimer: This content has not been generated, created or edited by Dailyhunt. Publisher: Navasamaja