ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಕೊನೆ ಮಾಡುವ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ ಹೇಳಿಕೆಗಳಿಗೆ ಇರಾನ್ (Iran) ಈಗ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
ಅಮೆರಿಕಗೆ ಸಂಪೂರ್ಣ ಅವಮಾನ ಆಗುವ ತನಕ ಬಿಡಲ್ಲ
ಇತ್ತೀಚೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಂದ ಇರಾನ್‌ನ ವಾಯುಪಡೆ, ನೌಕಾಪಡೆ ಹಾಗೂ ಸೇನಾ ಮೂಲಸೌಕರ್ಯಗಳು ಧ್ವಂಸವಾಗಿವೆ ಎಂದು ಹೇಳಿದ್ದರು. ಅಮೆರಿಕದ ವಾದವನ್ನು ತಳ್ಳಿಹಾಕಿರುವ ಇರಾನ್, ಅಮೆರಿಕವು ಶಾಶ್ವತ ಅವಮಾನವನ್ನು ಎದುರಿಸುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಇದಲ್ಲದೇ, ತಮ್ಮ ಮಿಲಿಟರಿ ಸಾಮರ್ಥ್ಯದ ಬಗ್ಗೆ ಟ್ರಂಪ್‌ಗೆ ಸರಿಯಾದ ಮಾಹಿತಿಯೇ ಇಲ್ಲ ಎಂದು ಲೇವಡಿ ಮಾಡಿದೆ. ಅಮೆರಿಕದ ಗುಪ್ತಚರ ಇಲಾಖೆಯ ವರದಿಗಳು ಸಂಪೂರ್ಣ ಸುಳ್ಳು ಎಂದು ಇರಾನ್ ಕಿಡಿಕಾರಿದೆ. ಭ್ರಮೆಯಲ್ಲಿ ಇರಬೇಡಿ ಎಂದ ಇರಾನ್ 'ಇತಿಹಾಸಕ್ಕೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತು..' ಟ್ರಂಪ್ 'ಶಿಲಾಯುಗ'ದ ಎಚ್ಚರಿಕೆಗೆ ಇರಾನ್ ಕೌಂಟರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ (Iran) ವಿರುದ್ಧ ನೀಡಿದ್ದ ಹೊಡೆದರೆ ಶಿಲಾಯುಗಕ್ಕೆ ಹೋಗಬೇಕು ಎಂಬ ಎಚ್ಚರಿಕೆಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ (America) ತನ್ನ ಹಳೆಯ ಕಾಲದ ಅಪರಾಧ ಮನೋಭಾವವನ್ನು ಆಧುನಿಕ ಜಗತ್ತಿಗೆ ತರುತ್ತಿದೆ ಎಂದು ಇರಾನ್ ಗುಡುಗಿದೆ. ಟ್ರಂಪ್ ಎಚ್ಚರಿಕೆ ಏನು? ದೇಶವನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಮುಂದಿನ ಎರಡು ಮೂರು ವಾರಗಳಲ್ಲಿ ನಾವು ಇರಾನ್ ಮೇಲೆ ಅತ್ಯಂತ ಕಠಿಣವಾಗಿ ದಾಳಿ ಮಾಡಲಿದ್ದೇವೆ. ಇರಾನ್ಗೆ ನಾವು ಶಿಲಾಯುಗಕ್ಕೆ ಮರಳಿ ಕಳುಹಿಸುತ್ತೇವೆ ಎಂದಿದ್ದಾರೆ. ಇರಾನ್ ಸೇನೆಯು ಅಮೆರಿಕ-ಇಸ್ರೇಲ್ ದಾಳಿಯಿಂದ ಸಂಪೂರ್ಣವಾಗಿ ನಾಶವಾಗಿದೆ ಎಂಬ ಅರ್ಥದಲ್ಲಿ ಟ್ರಂಪ್ ಮಾತನಾಡಿದ್ದರು.
ಇದಿಷ್ಟೇ ಅಲ್ಲದೇ, ಟ್ರಂಪ್ ಮಾತುಗಳಿಗೆ ಇರಾನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಕಾರ್ಯತಂತ್ರದ ಶಕ್ತಿ ಹಾಗೂ ಅತ್ಯಾಧುನಿಕ ಯುದ್ಧೋಪಕರಣಗಳ ಬಗ್ಗೆ ಅಮೆರಿಕಕ್ಕೆ ಕಲ್ಪನೆಯೇ ಇಲ್ಲ. ನಮ್ಮ ಕ್ಷಿಪಣಿ ಉತ್ಪಾದನಾ ಕೇಂದ್ರಗಳು, ದೂರಗಾಮಿ ಡ್ರೋನ್‌ಗಳು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್ ಯುದ್ಧ ಸಾಮಗ್ರಿಗಳನ್ನು ನಾಶಪಡಿಸಿದ್ದೇವೆ ಎಂದು ಭ್ರಮೆಯಲ್ಲಿ ಇರಬೇಡಿ ಎಂದು ಟಾಂಗ್ ನೀಡಿದೆ. ಅಮೆರಿಕದ ದಾಳಿಗಳಿಂದ ತಮಗೆ ಯಾವುದೇ ದೊಡ್ಡ ನಷ್ಟವಾಗಿಲ್ಲ ಮತ್ತು ತಮ್ಮ ಸೇನಾ ಶಕ್ತಿ ಇಂದಿಗೂ ಬಲಿಷ್ಠವಾಗಿದೆ ಎಂದು ತಿಳಿಸಿದೆ.

