Dailyhunt
IRAN, ISRAEL WAR: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಟೋಲ್ ವಿಧಿಸಲು ಸಾಧ್ಯವಿಲ್ಲ: ಇರಾನ್ ಬೇಡಿಕೆಗೆ ಒಮಾನ್ ಸೆಡ್ಡು

IRAN, ISRAEL WAR: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಟೋಲ್ ವಿಧಿಸಲು ಸಾಧ್ಯವಿಲ್ಲ: ಇರಾನ್ ಬೇಡಿಕೆಗೆ ಒಮಾನ್ ಸೆಡ್ಡು

Navasamaja.com 1 week ago

ಸ್ಕತ್: ಜಗತ್ತಿನ ಪ್ರಮುಖ ತೈಲ ವ್ಯಾಪಾರ ಮಾರ್ಗವಾಗಿರುವ ಹಾರ್ಮುಜ್ (Hormuz) ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಸಾರಿಗೆ ಶುಲ್ಕ (ಟೋಲ್) ವಿಧಿಸಬೇಕು ಎಂಬ ಇರಾನ್ (Iran) ಪ್ರಸ್ತಾಪವನ್ನು ಓಮನ್ ಸರ್ಕಾರ (Oman Government) ಸ್ಪಷ್ಟವಾಗಿ ತಿರಸ್ಕರಿಸಿದೆ.

ಯುದ್ಧದ ನಂತರದ ಪುನರ್ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಲು ಹಡಗುಗಳಿಂದ ಶುಲ್ಕ ವಸೂಲಿ ಮಾಡಬೇಕೆಂಬ ಇರಾನ್‌ನ ಬೇಡಿಕೆಗೆ ಒಮಾನ್ ವಿರುದ್ಧ ಹೇಳಿಕೆ ನೀಡಿದೆ.

ಇರಾನ್ ತನ್ನ 10 ಅಂಶಗಳ ಕದನ ವಿರಾಮ ಪ್ರಸ್ತಾವನೆಯಲ್ಲಿ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಇರಾನ್ ಮತ್ತುಒಮಾನ್ ಜಂಟಿಯಾಗಿ ಶುಲ್ಕ ವಿಧಿಸಬೇಕು ಎಂಬ ಅಂಶವನ್ನು ಸೇರಿಸಿತ್ತು. ಯುದ್ಧದಿಂದ ಹಾನಿಗೊಳಗಾಗಿರುವ ದೇಶದ ರಕ್ಷಣೆ, ಆಡಳಿತ ಮತ್ತು ನಾಗರಿಕ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕೆ ಈ ಹಣವನ್ನು ಬಳಸಿಕೊಳ್ಳುವುದು ಇರಾನ್‌ನ ಉದ್ದೇಶವಾಗಿತ್ತು. ಆದರೆ ಓಮನ್ ಸಾರಿಗೆ ಸಚಿವರು ಈ ಬಗ್ಗೆ ಪ್ರತಿಕ್ರಿಯಿಸಿ, ಹಾರ್ಮುಜ್ ಜಲಸಂಧಿಯನ್ನು ದಾಟಲು ಯಾವುದೇ ರೀತಿಯ ಟೋಲ್ ವಿಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಮಾನ್ ಈಗಾಗಲೇ ಹಲವು ಅಂತರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತ ಮತ್ತು ಸುರಕ್ಷಿತ ಸಂಚರಿಸುವ ಹಡಗುಗಳ ಮೇಲೆ ಯಾವುದೇ ಶುಲ್ಕ ಹೇರುವುದಿಲ್ಲ ಎಂದು ಭರವಸೆ ನೀಡಿದೆ. ಈ ಕಾರ್ಯತಂತ್ರದ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಯಾವುದೇ ಅಡೆತಡೆ ಇರಬಾರದು ಎಂಬುದು ಓಮನ್‌ನ ಕಟ್ಟುನಿಟ್ಟಿನ ನಿಲುವಾಗಿದೆ.

ಇರಾನ್ ಮತ್ತು ಒಮಾನ್ ನಡುವೆ ಇರುವ ಸುಮಾರು 34 ಕಿಲೋಮೀಟರ್ ಅಗಲದ ಈ ಜಲಸಂಧಿಯನ್ನು ಅಂತರಾಷ್ಟ್ರೀಯ ಜಲಮಾರ್ಗ ಎಂದು ಪರಿಗಣಿಸಲಾಗಿದೆ. ಐತಿಹಾಸಿಕವಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಯಾವುದೇ ದೇಶವೂ ಇದುವರೆಗೆ ಶುಲ್ಕ ವಿಧಿಸಿಲ್ಲ. ವಿಶ್ವದ ಒಟ್ಟು ತೈಲ ವ್ಯಾಪಾರದ ಐದನೇ ಒಂದು ಭಾಗ ಈ ಕಿರಿದಾದ ಜಲಸಂಧಿಯ ಮೂಲಕವೇ ನಡೆಯುವುದರಿಂದ, ಇಲ್ಲಿ ಟೋಲ್ ವಿಧಿಸುವ ಇರಾನ್‌ನ ಪ್ರಯತ್ನವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಆತಂಕವಿತ್ತು. ಆದರೆ ಓಮನ್‌ನ ಈ ನಿರ್ಧಾರದಿಂದ ಸದ್ಯಕ್ಕೆ ಹಡಗು ಸಂಚಾರಕ್ಕೆ ಇದ್ದ ಆತಂಕ ದೂರವಾದಂತಾಗಿದೆ.

ಇದನ್ನೂಓದಿ: ಪಾಕಿಸ್ತಾನದ ಶಾಂತಿ ಪೋಸ್ಟ್‌ ಮೇಲೆ ನೆಟ್ಟಿಗರ ಅನುಮಾನ, ಇದರ ಹಿಂದಿದೆಯಾ ಅಮೆರಿಕ?

Dailyhunt
Disclaimer: This content has not been generated, created or edited by Dailyhunt. Publisher: Navasamaja