ಕಾರವಾರ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಾರವಾರದ ವಾಣಿಜ್ಯ ಬಂದರಿನ ಚಟುವಟಿಕೆಗಳು ಕಳೆದ ಒಂದು ವಾರದಿಂದ ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ವಿದೇಶದಿಂದ ಬರಬೇಕಿದ್ದ (Iran War) ಕಚ್ಚಾ ಡಾಂಬರ್ (Bitumen) ಪೂರೈಕೆಯ ಹಡಗುಗಳು ಆಗಮಿಸದ ಹಿನ್ನೆಲೆಯಲ್ಲಿ ಕಾರವಾರ (Karwar) ಬಂದರು ಈಗ ಬಿಕೋ ಎನ್ನುತ್ತಿದೆ.
ಬಂದರಿಗೆ ಬಂದಿಲ್ಲ ಒಂದೇ ಒಂದು ಹಡಗು ಡಾಂಬರ್ ಬೆಲೆ ಏರಿಕೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರ.. ಕಚ್ಚಾ ತೈಲ ಸಂಗ್ರಹ ಹೆಚ್ಚಿಸಲು ಭಾರತಕ್ಕೆ ತಜ್ಞರ ಸಲಹೆ ಮದ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ (Iran-Israel) ನಡುವಿನ ಯುದ್ಧವು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು, ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರೀ ಪೆಟ್ಟು ಬೀಳುತ್ತಿದೆ. ಈ ಸಂಘರ್ಷದ ಹಿನ್ನೆಲೆಯಲ್ಲಿ ಭಾರತವು ತನ್ನ ಕಚ್ಚಾ ತೈಲದ ತುರ್ತು ಸಂಗ್ರಹವನ್ನು ವಿಸ್ತರಿಸುವುದು ಅನಿವಾರ್ಯ ಎಂದು ಸಿಐಐ (CII) ಮಾಜಿ ಮುಖ್ಯಸ್ಥರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾರ್ಮುಜ್ ಜಲಸಂಧಿ ಬಂದ್: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ 'ಹಾರ್ಮುಜ್ ಜಲಸಂಧಿ' ಬಂದ್ ಆಗಿದ್ದರೂ ಸಹ ಇರಾನ್ ವಿರುದ್ಧದ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಮಾರ್ಗವನ್ನು ಬಲವಂತವಾಗಿ ತೆರೆಸಲು ಹೋದರೆ ಯುದ್ಧವು ನಿಗದಿತ 4 ರಿಂದ 6 ವಾರಗಳಿಗಿಂತಲೂ ಹೆಚ್ಚು ಕಾಲ ಮುಂದುವರಿಯಬಹುದು ಎಂಬ ಆತಂಕ ಅಮೆರಿಕಾಗೆ ಇದೆ. ಒಂದು ವೇಳೆ ಇರಾನ್ ಈ ಜಲಸಂಧಿಯನ್ನು ತೆರೆಯದಿದ್ದರೆ, ಅದರ ಪ್ರಮುಖ ತೈಲ ರಫ್ತು ಕೇಂದ್ರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಈಗಾಗಲೇ ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಕಾರವಾರ ಬಂದರಿಗೆ ಮಧ್ಯಪ್ರಾಚ್ಯ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ಡಾಂಬರ್ ಆಮದಾಗುತ್ತಿತ್ತು. ಆದರೆ ಸಂಘರ್ಷದ ಕಾರಣದಿಂದ ಹಡಗುಗಳ ಸಂಚಾರ ಸ್ಥಗಿತಗೊಂಡಿದ್ದು, ಕಳೆದ ಎಂಟು ದಿನಗಳಿಂದ ಒಂದೇ ಒಂದು ಹಡಗು ಬಂದರಿಗೆ ಬಂದಿಲ್ಲ. ಇದರಿಂದಾಗಿ ಬಂದರಿನಲ್ಲಿ ನಿರಂತರವಾಗಿ ನಡೆಯುತ್ತಿದ್ದ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸಗಳು ನಿಂತುಹೋಗಿವೆ. ಡಾಂಬರ್ ಕಂಪನಿಗಳು ಕಚ್ಚಾ ವಸ್ತುವಿನ ಕೊರತೆಯಿಂದ ಭಾರಿ ನಷ್ಟ ಅನುಭವಿಸುತ್ತಿವೆ.
ಬಂದರಿನಲ್ಲಿ ವಾಣಿಜ್ಯ ವಹಿವಾಟು ಇಲ್ಲದ ಕಾರಣ ನೂರಾರು ಲಾರಿ ಮತ್ತು ಟ್ಯಾಂಕರ್‌ಗಳು ಕೆಲಸವಿಲ್ಲದೆ ಸಾಲುಗಟ್ಟಿ ನಿಂತಿವೆ. ಇತ್ತ ಕಚ್ಚಾ ಡಾಂಬರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಮಾರುಕಟ್ಟೆಯಲ್ಲಿ ಡಾಂಬರ್ ಬೆಲೆ ಗಗನಕ್ಕೇರಿದೆ. ಇದು ರಸ್ತೆ ಕಾಮಗಾರಿಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಅಂತರಾಷ್ಟ್ರೀಯ ಮಟ್ಟದ ಈ ಸಂಘರ್ಷವು ಕಾರವಾರದ ಸ್ಥಳೀಯ ಆರ್ಥಿಕತೆ ಮತ್ತು ಸಾರಿಗೆ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಹಡಗುಗಳ ಸಂಚಾರ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

