Dailyhunt Logo
  • Light mode
    Follow system
    Dark mode
    • Play Story
    • App Story
KAMBALA : ಕಂಬಳದ ದಂತಕಥೆ ನಂದಳಿಕೆ ಪಾಂಡು ಇನ್ನಿಲ್ಲ - 201 ಪದಕಗಳ ವೀರನಿಗೆ ವಿದಾಯ

KAMBALA : ಕಂಬಳದ ದಂತಕಥೆ ನಂದಳಿಕೆ ಪಾಂಡು ಇನ್ನಿಲ್ಲ - 201 ಪದಕಗಳ ವೀರನಿಗೆ ವಿದಾಯ

Navasamaja.com 2 hrs ago

ಉಡುಪಿ : ನಂದಳಿಕೆ ಶ್ರೀಕಾಂತ ಭಟ್ ಅವರ ಮನೆಯ ಹೆಮ್ಮೆಯ ಕೋಣ ನಂದಳಿಕೆ ಪಾಂಡು (Nandalike Pandu) 26ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ (Passed away). ಕಂಬಳ (Kambala) ಕರೆಯಲ್ಲಿ ಮಿಂಚಿನ ಓಟದಿಂದ ಖ್ಯಾತಿ ಪಡೆದಿದ್ದ ಪಾಂಡು ದೇಶ ವಿದೇಶಗಳಲ್ಲಿ ಅಭಿಮಾನಿಗಳನ್ನು ಗಳಿಸಿತ್ತು.

ಸಾಮಾನ್ಯ ಕೋಣಗಳು ಒಂದು ಬದಿಯಲ್ಲಿ ಮಾತ್ರ ಓಡಿದರೆ, ಪಾಂಡು ಎಡ ಮತ್ತು ಬಲ ಎರಡೂ ಬದಿಗಳಲ್ಲಿ ಸಮತೋಲನದಿಂದ ಓಡುವ ವಿಶೇಷತೆ ಹೊಂದಿತ್ತು. ಕುಟ್ಟಿ ಜೊತೆಗಿನ ಅದರ ಜೋಡಿ ಅಜೇಯವೆಂದು ಪ್ರಸಿದ್ಧವಾಗಿತ್ತು. ಪ್ರತಿ ಋತುವಿನಲ್ಲೂ ಗೆಲುವು ಸಾಧಿಸಿ ಒಟ್ಟು 201 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಈ ಸಾಧನೆಗಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳ ಎದುರು ಸನ್ಮಾನ ಕೂಡ ನಡೆದಿತ್ತು.

ಸಾವಿನ ಸುದ್ದಿ ಕೇಳಿ ಸಾವಿರಾರು ಜನರು ಅಂತಿಮ ದರ್ಶನಕ್ಕೆ ಬಂದರು. ಸ್ನಾನ ಮಾಡಿಸಿ ಹೂಮಾಲೆ ಹಾಕಿ ಕಹಳೆ ಮೊಳಗಿಸಿ ಗೌರವಿಸಲಾಯಿತು. ಗೆದ್ದ ಪದಕಗಳ ನೆನಪಿಗಾಗಿ ಮೈಮೇಲೆ 201 ಹೂಗಳನ್ನು ಇರಿಸಲಾಯಿತು. ಮಾಲೀಕರು ಕಣ್ಣೀರಿಡುತ್ತಾ ಮುಂದಿನ ಜನ್ಮದಲ್ಲೂ ತಮ್ಮ ಕೊಟ್ಟಿಗೆಯಲ್ಲೇ ಹುಟ್ಟಿ ಬರುವಂತೆ ಮನವಿ ಮಾಡಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja