Dailyhunt Logo
  • Light mode
    Follow system
    Dark mode
    • Play Story
    • App Story
KICCHA SUDEEP : ಹುಟ್ಟುಹಬ್ಬ ಆಚರಣೆಯಿಂದ ದೂರ ಸರಿದ ಕಿಚ್ಚ : ಜನ್ಮದಿನಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದ ಚಿತ್ರತಂಡಗಳು

KICCHA SUDEEP : ಹುಟ್ಟುಹಬ್ಬ ಆಚರಣೆಯಿಂದ ದೂರ ಸರಿದ ಕಿಚ್ಚ : ಜನ್ಮದಿನಕ್ಕೆ ಭರ್ಜರಿ ಸಿಹಿ ಸುದ್ದಿ ನೀಡಿದ ಚಿತ್ರತಂಡಗಳು

Navasamaja.com 6 days ago

ಬೆಂಗಳೂರು: ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್(Sudeep) ಸೆಪ್ಟೆಂಬರ್ 2ರಂದು ತಮ್ಮ 53ನೇ ಜನ್ಮದಿನದ((Birthday) ಸಂಭ್ರಮದಲ್ಲಿದ್ದಾರೆ. ಆದರೆ, ಈ ಬಾರಿ ಸುದೀಪ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ವೈಯಕ್ತಿಕ ಹಾಗೂ ಬಲವಾದ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಸ್ವತಃ ಸುದೀಪ್ ಅವರೇ ಸ್ಪಷ್ಟಪಡಿಸಿದ್ದು, ಅಭಿಮಾನಿಗಳಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ.

ನೆಚ್ಚಿನ ನಟನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಇದು ಕೊಂಚ ನಿರಾಸೆ ಮೂಡಿಸಿದೆ.

ಮಧ್ಯರಾತ್ರಿಯೇ ಸಿಕ್ಕಿತು 'ಫಸ್ಟ್ ಕಟ್' ಸರ್ಪ್ರೈಸ್
ಬರ್ತ್‌ಡೇ ಆಚರಣೆ ಇಲ್ಲದಿದ್ದರೂ ಅಭಿಮಾನಿಗಳನ್ನು ಖಾಲಿ ಕೈಯಲ್ಲಿ ಕಳುಹಿಸಲು ಚಿತ್ರತಂಡಗಳು ಸಿದ್ಧವಿರಲಿಲ್ಲ. ಸುದೀಪ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರದ 'ಫಸ್ಟ್ ಕಟ್' ಅನ್ನು ಸೆಪ್ಟೆಂಬರ್ 1ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಅದ್ಧೂರಿ ಸರ್ಪ್ರೈಸ್ ನೀಡಲಾಗಿದೆ. ಈ ಮೂಲಕ ಬರ್ತ್‌ಡೇ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ.

'ಬಿಲ್ಲ ರಂಗ ಬಾಷಾ' ಅಪ್‌ಡೇಟ್ ಹಾಗೂ ಹೊಸ ಸಿನಿಮಾಗಳ ಧಮಾಕ
ಕಿಚ್ಚ ಸುದೀಪ್ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿರುವ 'ಬಿಲ್ಲ ರಂಗ ಬಾಷಾ' ಚಿತ್ರದಿಂದಲೂ ಮಹತ್ವದ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಈ ಸಿನಿಮಾದ ಎರಡು ಹಂತಗಳ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಮೂರನೇ ಹಂತದ ಶೂಟಿಂಗ್ ಭರದಿಂದ ಸಾಗಿದೆ. ಇದರ ಜೊತೆಗೆ, ಸುದೀಪ್ ಅವರ ಜನ್ಮದಿನದ ಅಂಗವಾಗಿ ಸಾಲು ಸಾಲು ಹೊಸ ಸಿನಿಮಾಗಳ ಘೋಷಣೆ ಹಾಗೂ ಪೋಸ್ಟರ್‌ಗಳು ರಿಲೀಸ್ ಆಗುತ್ತಿದ್ದು, ಕಾಲಿವುಡ್-ಸ್ಯಾಂಡಲ್‌ವುಡ್ ಅಂಗಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja