Dailyhunt Logo
  • Light mode
    Follow system
    Dark mode
    • Play Story
    • App Story
KICHCHA SUDEEPA: ನಾ ಬರೆದ ಪ್ರೇಮದ ಓಲೆ - ಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ಭಾವನಾತ್ಮಕ ಮನವಿ

KICHCHA SUDEEPA: ನಾ ಬರೆದ ಪ್ರೇಮದ ಓಲೆ - ಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ಭಾವನಾತ್ಮಕ ಮನವಿ

Navasamaja.com 1 week ago

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ (Kichcha Sudeepa) ಅವರಿಗೆ ಇಂದು (ಸೆಪ್ಟೆಂಬರ್ 2) ಹುಟ್ಟುಹಬ್ಬದ (Birthday) ಸಂಭ್ರಮ. ಆದರೆ ವೈಯಕ್ತಿಕ ಮತ್ತು ಬಲವಾದ ಕಾರಣಗಳಿಂದಾಗಿ ಈ ಬಾರಿ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಹಾಗೂ ಅಭಿಮಾನಿಗಳ (Fans) ಭೇಟಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಅಭಿಮಾನಿಗಳಿಗೆ ಸುದೀಪ್ ಬರೆದಿರುವ ಪತ್ರದಲ್ಲಿ, ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ ಎಂದಿದ್ದಾರೆ. ಅಭಿಮಾನಿಗಳು ತಮ್ಮ ತಮ್ಮ ಊರುಗಳಲ್ಲಿ ಮಾಡುವ ಸಾಮಾಜಿಕ ಕಾರ್ಯಕ್ರಮಗಳೇ ನಿಜವಾದ ಆಚರಣೆ ಎಂದು ತಿಳಿಸಿರುವ ಅವರು, ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮುಂದುವರಿಸುವಂತೆ ಹಾಗೂ ನೀಡುವ ಉಡುಗೊರೆಗಳನ್ನು ಸಮಾಜಕ್ಕೆ ಸದ್ವಿನಿಯೋಗಪಡಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಮನೆ ಬಳಿ ಯಾರೂ ಬರುವುದು ಬೇಡ ಎಂದು ಅರಿಕೆ ಮಾಡಿಕೊಂಡಿದ್ದಾರೆ.

ಸುದೀಪ್ ಅವರ ಬಹುನಿರೀಕ್ಷಿತ 'ಬಿಲ್ಲಾ ರಂಗ ಬಾಷ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಲಿದೆ. ಜೊತೆಗೆ ಸೆಪ್ಟೆಂಬರ್ 6ರಿಂದ ಆರಂಭವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್-13ರ ಮೂಲಕ ಅವರು ಮತ್ತೆ ಕಿರುತೆರೆಗೆ ಮರಳಲಿದ್ದಾರೆ.

ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್‌ ಕೊಟ್ಟಿರುವ ಕಿಚ್ಚ ಶೀಘ್ರವೇ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರ ಕೃಷ್ಣದೇವರಾಯನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಹೊಸ ಐತಿಹಾಸಿಕ ಸಿನಿಮಾ 'ದೇವರಾಯʼ (Devaraaya) ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಹಂಚಿಕೊಂಡಿದ್ದು, ಸದ್ಯ ಇದು ಇಡೀ ಭಾರತೀಯ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja