Dailyhunt Logo
  • Light mode
    Follow system
    Dark mode
    • Play Story
    • App Story
KPSC SCAM : ಪರೀಕ್ಷೆಯೇ ಇಲ್ಲದೇ ನೇಮಕಾತಿ ಮಾಡುವುದೇ ಉತ್ತಮ: ಸರ್ಕಾರಕ್ಕೆ ಎ.ಮಂಜು ಆಗ್ರಹ

KPSC SCAM : ಪರೀಕ್ಷೆಯೇ ಇಲ್ಲದೇ ನೇಮಕಾತಿ ಮಾಡುವುದೇ ಉತ್ತಮ: ಸರ್ಕಾರಕ್ಕೆ ಎ.ಮಂಜು ಆಗ್ರಹ

Navasamaja.com 2 weeks ago

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 80 ಲಕ್ಷ (80 lakhs) ಲಂಚ ಪಡೆದಿರುವ ಗಂಭೀರ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷಾ ವಿಧಾನವನ್ನೇ ತಕ್ಷಣವೇ ಕೈಬಿಡುವಂತೆ ಮಾಜಿ ಸಚಿವ ಎ.

ಮಂಜು (A Manju) ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪದವಿ ಪೂರೈಸಿದ ವೈದ್ಯಕೀಯ ಅಭ್ಯರ್ಥಿಗಳನ್ನು ಯಾವುದೇ ಲಿಖಿತ ಪರೀಕ್ಷೆಗಳಿಲ್ಲದೆ ನೇರವಾಗಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ತಾವು ಸಚಿವರಾಗಿದ್ದ ಅವಧಿಯಲ್ಲಿ ಯಾವುದೇ ಪರೀಕ್ಷೆ ಅಥವಾ ಹಸ್ತಕ್ಷೇಪವಿಲ್ಲದೆ 650 ಪಶುವೈದ್ಯರ ನೇರ ನೇಮಕಾತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಉದಾಹರಣೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಇತ್ತೀಚೆಗೆ ನೇಮಕಾತಿ ಪಟ್ಟಿಗಾಗಿ ಭಾರೀ ಮೊತ್ತದ ಲಂಚದ ಮಾತುಕತೆ ನಡೆದಿದೆ ಎನ್ನಲಾದ ಆಡಿಯೋ ತುಣುಕುಗಳು ಹೊರಬಿದ್ದು ದೊಡ್ಡ ವಿವಾದ ಸೃಷ್ಟಿಸಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೃಷಿಕರು ಹಾಗೂ ಜಾನುವಾರುಗಳಿಗೆ ಸೂಕ್ತ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಲು, ಪ್ರಸ್ತುತ ಕೆಪಿಎಸ್‌ಸಿ ವ್ಯಾಪ್ತಿಯಲ್ಲಿರುವ ಆಯ್ಕೆ ವಿಧಾನವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ನೇರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja