Dailyhunt Logo
  • Light mode
    Follow system
    Dark mode
    • Play Story
    • App Story
KSRTC : ಮಹಿಳೆಯರ ಸುರಕ್ಷತೆಗೆ ಸರ್ಕಾರದ ದಿಟ್ಟ ಹೆಜ್ಜೆ - ಸಾರಿಗೆ ಬಸ್ ಗಳಲ್ಲೂ ಪ್ಯಾನಿಕ್ ಬಟನ್!

KSRTC : ಮಹಿಳೆಯರ ಸುರಕ್ಷತೆಗೆ ಸರ್ಕಾರದ ದಿಟ್ಟ ಹೆಜ್ಜೆ - ಸಾರಿಗೆ ಬಸ್ ಗಳಲ್ಲೂ ಪ್ಯಾನಿಕ್ ಬಟನ್!

Navasamaja.com 1 week ago

ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಬಸ್ ಕಾಯುವ ಪ್ರಯಾಣಿಕರಿಗೆ(travelers) ಬಸ್ ಎಲ್ಲಿದೆ, ಯಾವಾಗ ಬರುತ್ತದೆ ಅಥವಾ ಮಾರ್ಗಮಧ್ಯೆ ಏನಾದರೂ ಕೆಟ್ಟು ನಿಂತಿದೆಯಾ ಎಂಬ ಮಾಹಿತಿ ಸಿಗದೆ ಪರದಾಡುವ ದಿನಗಳು ಶೀಘ್ರದಲ್ಲೇ ಮುಗಿಯಲಿವೆ. ಪ್ರಯಾಣಿಕರ ಈ ಸುದೀರ್ಘ ಸಮಸ್ಯೆಗೆ ಮುಕ್ತಿ ನೀಡಲು ರಾಜ್ಯ ಸಾರಿಗೆ ನಿಗಮ ದಿಟ್ಟ ಹೆಜ್ಜೆ ಇಟ್ಟಿದ್ದು, ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳು ಹೈಟೆಕ್ ಸ್ಪರ್ಶ ಪಡೆಯಲಿವೆ.

ನಿರ್ಭಯ ಯೋಜನೆ ಅಡಿ ಹೈಟೆಕ್ ಸ್ಪರ್ಶ!
ದೆಹಲಿಯ ಭೀಕರ ನಿರ್ಭಯ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ದೇಶದ ಎಲ್ಲಾ ವಾಣಿಜ್ಯ ವಾಹನಗಳಿಗೆ 'ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್' (VLTD) ಮತ್ತು 'ಪ್ಯಾನಿಕ್ ಬಟನ್' ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು. ಈ ನಿರ್ದೇಶನದಂತೆ ಕರ್ನಾಟಕ ಸಾರಿಗೆ ಇಲಾಖೆಯು ಕಾರ್ಯಾಚರಣೆ ಆರಂಭಿಸಿದೆ. ಕೆಎಸ್‌ಆರ್‌ಟಿಸಿಯ ಒಟ್ಟು 6,063 ಬಸ್‌ಗಳ ಪೈಕಿ ಈಗಾಗಲೇ 2,344 ಬಸ್‌ಗಳಿಗೆ ಜಿಪಿಎಸ್ ಆಧಾರಿತ VLTD ಸಾಧನಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಉಳಿದ 3,743 ಬಸ್‌ಗಳಿಗೂ ಈ ತಂತ್ರಜ್ಞಾನ ಅಳವಡಿಸಲು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕಮಾಂಡ್ ಸೆಂಟರ್ ಮತ್ತು ರಕ್ಷಣೆ!
ಲೈವ್ ಟ್ರ್ಯಾಕಿಂಗ್: ವಿಎಲ್‌ಟಿಡಿ ಅಳವಡಿಕೆಯಿಂದ ಬಸ್ ಪ್ರಸ್ತುತ ಯಾವ ಸ್ಥಳದಲ್ಲಿದೆ ಎಂಬ ಕ್ಷಣ ಕ್ಷಣದ ಲೈವ್ ಮಾಹಿತಿಯನ್ನು ಪ್ರಯಾಣಿಕರು ಸುಲಭವಾಗಿ ತಿಳಿದುಕೊಳ್ಳಬಹುದು.

ಕೇಂದ್ರೀಯ ಕಮಾಂಡ್ ಸೆಂಟರ್: ಪ್ರತಿಯೊಂದು ಬಸ್‌ನ ಚಲನವಲನದ ಮೇಲೆ ನಿರಂತರ ನಿಗಾ ವಹಿಸಲು ಕೆಎಸ್‌ಆರ್‌ಟಿಸಿ ಪ್ರತ್ಯೇಕ 'ಕಮಾಂಡ್ ಸೆಂಟರ್' ನಿರ್ಮಿಸುತ್ತಿದೆ.

ಆಪತ್ಕಾಲಕ್ಕೆ ಪ್ಯಾನಿಕ್ ಬಟನ್: ಪ್ರಯಾಣದ ವೇಳೆ ಮಹಿಳೆಯರು ಅಥವಾ ಪ್ರಯಾಣಿಕರಿಗೆ ಭದ್ರತಾ ಭೀತಿ ಅಥವಾ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಬಸ್‌ನಲ್ಲಿರುವ ಪ್ಯಾನಿಕ್ ಬಟನ್ ಒತ್ತಬಹುದು. ತಕ್ಷಣವೇ ಈ ಮಾಹಿತಿ ಕಮಾಂಡ್ ಸೆಂಟರ್‌ ತಲುಪಿ, ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಲಿದ್ದಾರೆ.

ಕೆಎಸ್‌ಆರ್‌ಟಿಸಿ ಕೈಗೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಹಾಗೂ ಮಹಿಳಾ ಪ್ರಯಾಣಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಜಿಪಿಎಸ್ ಲೊಕೇಷನ್ ಮತ್ತು ಪ್ಯಾನಿಕ್ ಬಟನ್ ಸೌಲಭ್ಯದಿಂದಾಗಿ ಇನ್ಮುಂದೆ ನಿರಾತಂಕವಾಗಿ ಹಾಗೂ ಧೈರ್ಯವಾಗಿ ಪ್ರಯಾಣಿಸಬಹುದು ಎಂದು ಪ್ರಯಾಣಿಕರು ಸಂತಸ ಹಂಚಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja