Dailyhunt Logo
  • Light mode
    Follow system
    Dark mode
    • Play Story
    • App Story
MANDYA: ಶಿಕ್ಷೆ ಅನುಭವಿಸಿದ ಅಮಾಯಕನ ಪ್ರಕರಣ, ಸುಳ್ಳು ಕೇಸ್ ಹಾಕಿದವರಿಗೆ ಬಿಗ್ ಶಾಕ್!

MANDYA: ಶಿಕ್ಷೆ ಅನುಭವಿಸಿದ ಅಮಾಯಕನ ಪ್ರಕರಣ, ಸುಳ್ಳು ಕೇಸ್ ಹಾಕಿದವರಿಗೆ ಬಿಗ್ ಶಾಕ್!

Navasamaja.com 7 hrs ago

ಮಂಡ್ಯ: (mandya ) 'ಕೊಲೆಯಾಗಿದ್ದಳು ಎನ್ನಲಾದ ಮಹಿಳೆಯೊಬ್ಬಳು ಪ್ರಕರಣ (murder case), ಆರು ವರ್ಷಗಳ ನಂತರ ಜೀವಂತವಾಗಿ ಪತ್ತೆಯಾದ ಪ್ರಕರಣದ ಬಗ್ಗೆ ಶ್ರೀರಂಗಪಟ್ಟಣ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ (investigation) ನಡೆಸಲಾಗುವುದು' ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ತಿಳಿಸಿದ್ದಾರೆ.

ಪಾಂಡವಪುರದ ಹಿರೋಡೆ ಬೀದಿ ನಿವಾಸಿ ನಾಗರಾಜು ಅವರ ಮಗಳು ಮಂಜು ಅವರಿಗೆ ಶ್ರೀರಂಗಪಟ್ಟಣ ತಾಲ್ಲೂಕಿನ ನೀಲನಕೊಪ್ಪಲು ಗ್ರಾಮದ ಮಂಜುನಾಥ್ ಅವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಮಕ್ಕಳಾಗಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜು 2019ರ ಮೇ ತಿಂಗಳಲ್ಲಿ ತಂದೆಯ ಮನೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಇಲ್ಲದ ಮನೆಯಲ್ಲಿ ತಂದೆ-ಮಗಳು ಮಾತ್ರ ವಾಸವಿದ್ದರು. 2019ರ ಜೂನ್ 23ರಂದು ರಾತ್ರಿ ನಾಗರಾಜು 'ಸೆಕ್ಯುರಿಟಿ' ಕೆಲಸಕ್ಕೆ ತೆರಳಿದ್ದಾಗ ಮಂಜು ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಜುಲೈ 3ರಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ತಂದೆ ದೂರು ದಾಖಲಿಸಿದ್ದರು.

ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ ಎಂ.ಆರ್. (ಕಾಳ) ಎಂಬಾತ ಮಂಜು ಜೊತೆ ಆತ್ಮೀಯನಾಗಿದ್ದ. ಆತನಿಗೆ ಬೇರೆ ಮದುವೆ ನಿಶ್ಚಯವಾಗಿದ್ದನ್ನು ಮಂಜು ವಿರೋಧಿಸಿದ್ದರಿಂದ, ಜುಲೈ 23ರಂದು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಗೆ ತಳ್ಳಿ ಕೊಲೆ ಮಗಳನ್ನು ಕೊಲೆ ಮಾಡಿದ್ದಾರೆ' ಎಂದು ಆರೋಪಿಸಿ ಮಂಜು ತಂದೆ ನಾಗರಾಜು ಅವರು ಎರಡು ವರ್ಷಗಳ ನಂತರ (2021) ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಗಿತ್ತು. 'ಪಾಂಡವಪುರ ಪೊಲೀಸ್‌ನವರು ರಾಜೇಶ್‌ನನ್ನು ಕೊಲೆ ಪ್ರಕರಣದ ಆರೋಪಿಯನ್ನಾಗಿ ಸಿಲುಕಿಸಿ ಜೈಲು ಶಿಕ್ಷೆ ಅನುಭವಿಸುವಂತಾಯಿತು. ಈಗ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಗಡೆ ಬಂದಿದ್ದಾನೆ.

ಮಂಜು ಬದುಕಿರುವ ವಿಷಯ ತಿಳಿದ ರಾಜೇಶ್‌ ನನ್ನ ವಿರುದ್ಧ ಸುಳ್ಳು ಕೊಲೆ ಆರೋಪ ಹೊರಿಸಿ ಜೈಲುಪಾಲು ಮಾಡಿದ ಪಾಂಡವಪುರ ಪೊಲೀಸರು ಮತ್ತು ಸಂಚು ರೂಪಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು' ಎಂದು ಕೋರಿಕೊಂಡರು.

ಪ್ರಕರಣದ ಬಗ್ಗೆ ಮಾತನಾಡಿರುವ ಮಂಜು, 'ತನಗಿಷ್ಟವಿಲ್ಲದ ಮದುವೆ ಮಾಡಿದ್ದರಿಂದ ಮನೆಬಿಟ್ಟು ಓಡಿಹೋಗಿ ಪ್ರಿಯಕರ ಚಾಮರಾಜನಗರದ ನಾಗೇಂದ್ರ ಅವರನ್ನು ವಿವಾಹವಾದೆ. ಒಂದು ವರ್ಷ ತಮಿಳುನಾಡಿನಲ್ಲಿ ವಾಸವಿದ್ದು, ಬಳಿಕ ನಾಗಮಂಗಲ ತಾಲ್ಲೂಕಿನ ಮಾಯಿಗೋನಹಳ್ಳಿಗೆ ಬಂದು ವಾಸ ಮಾಡುತ್ತಿದ್ದೇವೆ. ನನ್ನ ತಂದೆ ನಾಪತ್ತೆ ಮತ್ತು ಕೊಲೆ ಪ್ರಕರಣ ದಾಖಲಿಸಿರುವುದು ಗೊತ್ತಿಲ್ಲ. ಕೊಲೆ ಆರೋಪ ಹೊತ್ತ ರಾಜೇಶನಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ಈ ಬಗ್ಗೆ ಎಲ್ಲಿಯಾದರೂ ಹೇಳಿಕೆ ನೀಡಲು ಸಿದ್ಧ' ಎಂದು ಮಂಜು ತಿಳಿಸಿದ್ದಾರೆ.

ಜೀವಂತವಾಗಿರುವ ಮಗಳು ಮಂಜು ಕೊಲೆಯಾಗಿದ್ದಾಳೆ ಎಂದು ಆಕೆಯ ತಂದೆಯೇ 2021ರಲ್ಲಿ ಎಫ್‌ಐಆರ್ ಮಾಡಿಸಿದ್ದರು. ಈ ಪ್ರಕರಣದಲ್ಲಿ ರಾಜೇಶ್ ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈಗ ಮಂಜು ಜೀವಂತವಾಗಿರುವುದು ಗಮನಕ್ಕೆ ಬಂದಿದೆ. ಕೊಲೆ ಆರೋಪ ಹೊತ್ತ ರಾಜೇಶ್ ಮತ್ತು ಅವರ ತಂದೆ ರಮೇಶ್ ಅವರು ಗುರುವಾರ ಎಸ್ಪಿ ಅವರನ್ನು ಭೇಟಿ ಮಾಡಿ, 'ನಮಗೆ ನ್ಯಾಯ ಕಲ್ಪಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ಮನವಿ ಸಲ್ಲಿಸಿದರು. ಈ ಸಂದರ್ಭ ಎಸ್ಪಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: SOWJANYA CASE: ಚುರುಕುಗೊಂಡ ಸೌಜನ್ಯ ಪ್ರಕರಣದ ಮರುತನಿಖೆ, ಒಂದೇ ದಿನ ಎಸ್​ಐಟಿ ಹಲವರ ವಿಚಾರಣೆ

Dailyhunt
Disclaimer: This content has not been generated, created or edited by Dailyhunt. Publisher: Navasamaja