Dailyhunt
MANGALURU: ಟನ್‌ಗಟ್ಟಲೆ ಧಾರ್ಮಿಕ ತಾಜ್ಯ ಸಂಗ್ರಹ ಮಾಡಿದ ರಾಮಕೃಷ್ಣ ಮಿಷನ್‌, ಮಂಗಳೂರಿನಲ್ಲಿ ಅದ್ಭುತ ಕಾರ್ಯ

MANGALURU: ಟನ್‌ಗಟ್ಟಲೆ ಧಾರ್ಮಿಕ ತಾಜ್ಯ ಸಂಗ್ರಹ ಮಾಡಿದ ರಾಮಕೃಷ್ಣ ಮಿಷನ್‌, ಮಂಗಳೂರಿನಲ್ಲಿ ಅದ್ಭುತ ಕಾರ್ಯ

Navasamaja.com 1 week ago

ಮಂಗಳೂರು: ಸಾಮಾನ್ಯವಾಗಿ ಮನೆಯಲ್ಲಿ ಪೂಜೆ ಮಾಡಿದ ಹಳೆಯ ದೇವರ ಫೋಟೋಗಳು, ವಿಗ್ರಹಗಳು ಹಾಗೂ ಇತರ ಧಾರ್ಮಿಕ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ ಇದಕ್ಕೆ ಮಂಗಳೂರಿನ (Mangaluru) ರಾಮಕೃಷ್ಣ ಮಿಷನ್ ಅರ್ಥಪೂರ್ಣ ಪರಿಹಾರ ಕಂಡುಕೊಂಡಿದೆ.

ವಿಶೇಷ ಅಭಿಯಾನವನ್ನ ಮಾಡಿ, ಟನ್‌ಗಟ್ಟಲೆ ಧಾರ್ಮಿಕ ತಾಜ್ಯವನ್ನ ಸಂಗ್ರಹ ಮಾಡಿದೆ.

5.5 ಟನ್ ತಾಜ್ಯ ಸಂಗ್ರಹ
ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯ ಜೊತೆಗೆ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ಈ ಅಭಿಯಾನವನ್ನ ಆರಂಭ ಮಾಡಲಾಗಿದ್ದು, ಕೇವಲ 10 ದಿನಗಳ ಅವಧಿಯಲ್ಲಿ ಬರೋಬ್ಬರಿ 5.5 ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹವಾಗಿದೆ ಎನ್ನಲಾಗಿದೆ.

ಅನೇಕ ಜನರು ಮನೆಯಲ್ಲಿ ಇರುವ ಹಳೆಯ ದೇವರ ಫೋಟೋ ಅಥವಾ ವಿಗ್ರಹಗಳನ್ನು ದೇವಸ್ಥಾನದ ಆವರಣದಲ್ಲಿ, ಅರಳಿ ಮರದ ಕೆಳಗೆ ಅಥವಾ ನದಿ ತೀರಗಳಲ್ಲಿ ಎಸೆಯುತ್ತಾರೆ. ಇದರಿಂದ ಆ ಪ್ರದೇಶಗಳಲ್ಲಿ ಕಸದ ರಾಶಿ ಬೀಳುವುದಲ್ಲದೆ, ಇದು ಆ ವಸ್ತುಗಳಿಗೆ ಅವಮಾನ ಮಾಡಿದ್ದಂತೆ ಸಹ ಆಗುತ್ತದೆ. ಹಾಗಾಗಿ ರಾಮಕೃಷ್ಣ ಮಿಷನ್, ಮಂಗಳೂರು ನಗರದ ಐದು ಪ್ರಮುಖ ಸ್ಥಳಗಳಲ್ಲಿ ಧಾರ್ಮಿಕ ವಸ್ತುಗಳನ್ನು ಸಂಗ್ರಹಿಸಲು ಪ್ರತ್ಯೇಕ ಬಾಕ್ಸ್‌ಗಳನ್ನು ಇರಿಸಿತ್ತು. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಫೋಟೋಗಳನ್ನು ತಂದು ಈ ಬಾಕ್ಸ್‌ಗಳಿಗೆ ಹಾಕುವಂತೆ ಮನವಿ ಮಾಡಲಾಗಿತ್ತು. ಈ ಅಭಿಯಾನಕ್ಕೆ ಜನರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದ್ದು, ಜನ ಆ ಬಾಕ್ಸ್‌ಗಳಲ್ಲಿ ಬೇಡದ ಧಾರ್ಮಿಕ ವಸ್ತುಗಳನ್ನ ಹಾಕಿದ್ದಾರೆ.

ಧಾರ್ಮಿಕವಾಗಿವಿಲೇವಾರಿ ಮಾಡಲು ನಿರ್ಧಾರ
ಇನ್ನು ಸಂಗ್ರಹವಾದ ಈ ಫೋಟೋ ಹಾಗೂ ಇತರ ವಸ್ತುಗಳನ್ನ ಕಾಲೇಜು ವಿದ್ಯಾರ್ಥಿಗಳ ಸಹಾಯದಿಂದ ರಾಮಕೃಷ್ಣ ಮಠದಲ್ಲಿ ವಿಂಗಡಣೆ ಮಾಡಲಾಗುತ್ತಿದೆ. ಇದನ್ನ ಕಸದ ರೀತಿ ಬಿಸಾಡದೇ ಪ್ರತಿಯೊಂದು ವಸ್ತುವಿಗೂ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ನಂತರ ವಿಲೇವಾರಿ ಮಾಡಲು ನಿರ್ಧರ ಮಾಡಲಾಗಿದೆ. ಹಾಗೆಯೇ, ಮಣ್ಣಿನಲ್ಲಿ ಕರಗುವ ವಿಗ್ರಹಗಳನ್ನು ಭೂಮಿಯಲ್ಲಿ ಹೂಳಲಾಗುತ್ತದೆ ಹಾಗೂ ಮರದ ಫ್ರೇಮ್ ಮತ್ತು ಫೋಟೋಗಳನ್ನು ಹೋಮದ ಅಗ್ನಿಗೆ ಅರ್ಪಿಸುವ ಮೂಲಕ ಗೌರವಯುತವಾಗಿ ವಿಸರ್ಜಿಸಲಾಗುತ್ತದೆ ಎಂದು ಆಶ್ರಮ ಮಾಹಿತಿ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja