Dailyhunt Logo
  • Light mode
    Follow system
    Dark mode
    • Play Story
    • App Story
MENAKA GURUSWAMY: ಬಿಜೆಪಿ ಪರ ಸಿದ್ದಾಂತ ಹೊಂದಿರುವವರೇ ಜಡ್ಜ್ ಗಳಾಗುತ್ತಿದ್ದಾರೆ - ಮೇನಕಾ ಗುರುಸ್ವಾಮಿ

MENAKA GURUSWAMY: ಬಿಜೆಪಿ ಪರ ಸಿದ್ದಾಂತ ಹೊಂದಿರುವವರೇ ಜಡ್ಜ್ ಗಳಾಗುತ್ತಿದ್ದಾರೆ - ಮೇನಕಾ ಗುರುಸ್ವಾಮಿ

Navasamaja.com 2 weeks ago

ವದೆಹಲಿ: ಕೇಂದ್ರ ಸರ್ಕಾರವು(Central Government) ತನ್ನ ರಾಜಕೀಯ ಸಿದ್ಧಾಂತಕ್ಕೆ ಬಗ್ಗದ ಅಥವಾ ಹೊಂದಾಣಿಕೆಯಾಗದ ವ್ಯಕ್ತಿಗಳನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಬಯಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದೆಯೂ ಆಗಿರುವ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ(Menaka Guruswamy) ರಾಜ್ಯಸಭೆಯಲ್ಲಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು 34 ರಿಂದ 38ಕ್ಕೆ ಹೆಚ್ಚಿಸುವ 'ಸುಪ್ರೀಂ ಕೋರ್ಟ್ ತಿದ್ದುಪಡಿ ವಿಧೇಯಕ, 2026' ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ತಮ್ಮ ಚೊಚ್ಚಲ ಭಾಷಣ ಮಾಡಿದರು.

ಕೇವಲ ಸಂಖ್ಯೆ ಹೆಚ್ಚಳದಿಂದ ಸಮಸ್ಯೆ ಬಗೆಹರಿಯಲ್ಲ

ಕೇವಲ ನಾಲ್ಕು ಹೆಚ್ಚುವರಿ ನ್ಯಾಯಾಧೀಶರನ್ನು ನೇಮಿಸುವುದರಿಂದ ಅಥವಾ ಸುಗ್ರೀವಾಜ್ಞೆ ತರುವುದರಿಂದ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಗುರುಸ್ವಾಮಿ ಪ್ರತಿಪಾದಿಸಿದರು. "ಕೇಂದ್ರ ಸರ್ಕಾರವು ವಿವಿಧ ಸಾಮಾಜಿಕ ಹಿನ್ನೆಲೆಯುಳ್ಳವರನ್ನು ನ್ಯಾಯಾಂಗಕ್ಕೆ ತರಲು ಬಯಸುತ್ತಿಲ್ಲ. ಮಹಿಳೆಯರು, ಕೆಳವರ್ಗದವರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಸಲಿಂಗಕಾಮಿ (ಗೇ) ಸಮುದಾಯದವರನ್ನು ನ್ಯಾಯಾಧೀಶರನ್ನಾಗಿ ನೇಮಿಸಲು ಸರ್ಕಾರ ಮುಂದಾಗುತ್ತಿಲ್ಲ. ತಮ್ಮದೇ ಸಿದ್ಧಾಂತ ಹೊಂದಿದ್ದಾರೆ ಎಂದು ಭಾವಿಸುವವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ," ಎಂದು ಅವರು ಆರೋಪಿಸಿದರು.

ಈ ಹಂತದಲ್ಲಿ ಸಭಾಪತಿ ಪೀಠದಲ್ಲಿದ್ದ ರಾಜ್ಯಸಭೆಯ ಉಪಸಭಾಪತಿಯವರು ಮೇನಕಾ ಅವರ ಈ ಹೇಳಿಕೆಯನ್ನು ಸದನದ ಕಡತಕ್ಕೆ ಸೇರಿಸಲಾಗುವುದಿಲ್ಲ ಎಂದು ಮಧ್ಯಪ್ರವೇಶಿಸಿ ತಿಳಿಸಿದರು.

ನ್ಯಾಯಾಂಗದಲ್ಲಿ ಪ್ರಾತಿನಿಧ್ಯದ ಕೊರತೆ: ಅಂಕಿಅಂಶಗಳ ವಿವರಣೆ

ದೇಶಾದ್ಯಂತ ಉಚ್ಚ ನ್ಯಾಯಾಲಯಗಳಲ್ಲಿ ಶೇ. 30ರಷ್ಟು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂಬುದನ್ನು ಸಂಸದೆ ಸದನದ ಗಮನಕ್ಕೆ ತಂದರು. ಪ್ರಸ್ತುತ ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಾಧೀಶರ ಪ್ರಮಾಣ ಕೇವಲ ಶೇ. 14ರಷ್ಟಿದೆ. ಅಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರೆಲ್ಲರೂ ಸೇರಿ ನ್ಯಾಯಾಂಗದಲ್ಲಿ ಒಟ್ಟಾರೆ ಪ್ರಾತಿನಿಧ್ಯ ಶೇ. 20ಕ್ಕಿಂತಲೂ ಕಡಿಮೆಯಿದೆ ಎಂದು ಅವರು ಹೇಳಿದರು.

2018 ರಿಂದ 2026ರ ನಡುವಿನ ಅವಧಿಯ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಈ ಅವಧಿಯಲ್ಲಿ ಸರ್ಕಾರವು ನೇಮಕ ಮಾಡಿದ ನ್ಯಾಯಾಧೀಶರಲ್ಲಿ ಪರಿಶಿಷ್ಟ ಜಾತಿಯವರು ಕೇವಲ ಶೇ. 3, ಪರಿಶಿಷ್ಟ ಪಂಗಡದವರು ಶೇ. 2 ಹಾಗೂ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಮಾಣ ಶೇ. 12ರಷ್ಟಿದೆ ಎಂದರು. "ಇವು ನಿಜವಾದ ಸಮಸ್ಯೆಗಳು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡಿದಾಗ ಮಾತ್ರ ನ್ಯಾಯಾಂಗದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ ಹೊರತು ನಾಲ್ಕು ಹುದ್ದೆಗಳನ್ನು ಹೆಚ್ಚಿಸುವುದರಿಂದಲ್ಲ," ಎಂದು ಅವರು ಒತ್ತಿ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja