Dailyhunt Logo
  • Light mode
    Follow system
    Dark mode
    • Play Story
    • App Story
ONLINE GAMBLING: ಆನ್‌ಲೈನ್ ಜೂಜುಕೋರರಿಗೆ ಕರ್ನಾಟಕ ಪೊಲೀಸರ ಶಾಕ್, 127 ಗ್ಲೋಬಲ್ ಹೋಸ್ಟಿಂಗ್ ಏಜೆನ್ಸಿಗಳಿಗೆ ಸೈಬರ್ ಕಮಾಂಡ್ ನೋಟಿಸ್.!

ONLINE GAMBLING: ಆನ್‌ಲೈನ್ ಜೂಜುಕೋರರಿಗೆ ಕರ್ನಾಟಕ ಪೊಲೀಸರ ಶಾಕ್, 127 ಗ್ಲೋಬಲ್ ಹೋಸ್ಟಿಂಗ್ ಏಜೆನ್ಸಿಗಳಿಗೆ ಸೈಬರ್ ಕಮಾಂಡ್ ನೋಟಿಸ್.!

Navasamaja.com 1 week ago

ಬೆಂಗಳೂರು: ರಾಜ್ಯದಲ್ಲಿ (Karnataka) ದಿನೇ ದಿನೇ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಾ, ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿರುವ ಅಕ್ರಮ ಆನ್‌ಲೈನ್ ಜೂಜು (Online Gambling) ಮತ್ತು ಬೆಟ್ಟಿಂಗ್ ದಂಧೆಯ ಬೇರುಗಳನ್ನೇ ಕತ್ತರಿಸಲು ಕರ್ನಾಟಕ ಸೈಬರ್ ಕಮಾಂಡ್ (Cyber Police) ಅತ್ಯಂತ ಭರ್ಜರಿ ಕಾರ್ಯಾಚರಣೆ ತೀವ್ರಗೊಳಿಸಿದೆ.

ಹೌದು, ಇಂಟರ್ನೆಟ್ ಜಗತ್ತಿನಲ್ಲಿ ಕಾನೂನುಬಾಹಿರವಾಗಿ ಸಕ್ರಿಯವಾಗಿರುವ ನೂರಾರು ಜೂಜಿನ ವೆಬ್‌ಸೈಟ್‌ಗಳು ಹಾಗೂ ಆಯಪ್‌ಗಳನ್ನು ಇಂಟರ್ನೆಟ್‌ನಿಂದ ಶಾಶ್ವತವಾಗಿ ಕಿತ್ತೊಗೆಯಲು ಮತ್ತು ಅವುಗಳ ಡಿಜಿಟಲ್ ಹೆಜ್ಜೆಗುರುತುಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲು ದೇಶ ಹಾಗೂ ವಿದೇಶಗಳ ಒಟ್ಟು 127 ಪ್ರಮುಖ ವೆಬ್ ಹೋಸ್ಟಿಂಗ್ ಏಜೆನ್ಸಿಗಳ ತಾಂತ್ರಿಕ ನೆರವನ್ನು ಕರ್ನಾಟಕ ಸೈಬರ್ ಕಮಾಂಡ್ ಮತ್ತು ಇನ್ಫಾರ್ಮೇಶನ್ ಸೆಕ್ಯುರಿಟಿ ಡಿವಿಷನ್ (CCISD) ಕೋರಿದೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವ ಇಂತಹ ಜೂಜಿನ ಅಪ್ಲಿಕೇಶನ್‌ಗಳ ಸರ್ವರ್‌ಗಳು ಹೆಚ್ಚಾಗಿ ವಿದೇಶಿ ಮೂಲದ ಅಥವಾ ಖಾಸಗಿ ಹೋಸ್ಟಿಂಗ್ ಸಂಸ್ಥೆಗಳ ಅಡಿಯಲ್ಲಿ ಇಂಟರ್ನೆಟ್ ಜಾಗವನ್ನು ಪಡೆದುಕೊಂಡಿರುತ್ತವೆ. ಕೇವಲ ವೆಬ್‌ಸೈಟ್ ಲಿಂಕ್‌ಗಳನ್ನು ಬ್ಲಾಕ್ ಮಾಡುವುದರಿಂದ ಈ ದಂಧೆಯನ್ನು ತಡೆಯಲು ಸಾಧ್ಯವಿಲ್ಲ, ಬದಲಿಗೆ ಅವುಗಳ ಮೂಲ ಬೇರನ್ನೇ ಕತ್ತರಿಸಬೇಕಾದ ಅಗತ್ಯವಿದೆ ಎಂಬುದನ್ನು ಸೈಬರ್ ಪೊಲೀಸರು ಗುರುತಿಸಿದ್ದಾರೆ.

ಇದನ್ನರಿತು ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಸೈಬರ್ ಕಮಾಂಡ್ ಅಧಿಕಾರಿಗಳು, ಆಯಾ ವಂಚಕ ವೆಬ್‌ಸೈಟ್‌ಗಳಿಗೆ ಬ್ಯಾಕಪ್ ನೀಡುತ್ತಿರುವ 127 ಪ್ರಮುಖ ಗ್ಲೋಬಲ್ ಹೋಸ್ಟಿಂಗ್ ಏಜೆನ್ಸಿಗಳನ್ನು ಪಟ್ಟಿ ಮಾಡಿದ್ದಾರೆ. ಈ ಸಂಸ್ಥೆಗಳಿಗೆ ಅಧಿಕೃತ ನೋಟಿಸ್ ಮಾದರಿಯ ಪತ್ರಗಳನ್ನು ರವಾನಿಸಲಾಗಿದ್ದು, ಅವರ ಸಹಯೋಗದೊಂದಿಗೆ ಅಕ್ರಮ ಸೈಟ್‌ಗಳನ್ನು ಸರ್ವರ್ ಮಟ್ಟದಲ್ಲೇ ಸಂಪೂರ್ಣವಾಗಿ ಡಿಲೀಟ್ ಮಾಡಿಸುವುದು ಪೊಲೀಸರ ಪ್ರಮುಖ ಉದ್ದೇಶವಾಗಿದೆ.

ಹೋಸ್ಟಿಂಗ್ ಸಂಸ್ಥೆಗಳು ಕೈಡಿಸಲಿ ಎಂದ ಪೊಲೀಸರು

ಇಂಟರ್ನೆಟ್ ಸೇವಾ ಪೂರೈಕೆದಾರರು (ISPs) ಹಾಗೂ ಈ ಜಾಗತಿಕ ಹೋಸ್ಟಿಂಗ್ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿದರೆ, ರಾಜ್ಯದ ಜನರಿಗೆ ಇಂತಹ ಯಾವುದೇ ಬೆಟ್ಟಿಂಗ್ ಸೈಟ್‌ಗಳು ಕಾಣಿಸದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಾರ್ವಜನಿಕರು ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದು ಇಂತಹ ಅನಧಿಕೃತ ಹಾಗೂ ನಕಲಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗಬಾರದು ಎಂದು ವಿನಂತಿಸಿದ್ದಾರೆ. ಇಂಟರ್ನೆಟ್ ಬಳಸುವಾಗ ಯಾವುದೇ ಸಂಶಯಾಸ್ಪದ ಬೆಟ್ಟಿಂಗ್ ಅಥವಾ ಜೂಜಿನ ಜಾಹೀರಾತುಗಳು, ಲಿಂಕ್‌ಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಜಿಟಲ್ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಇಟ್ಟಿರುವ ಈ ಹೈಟೆಕ್ ಹೆಜ್ಜೆ ಸದ್ಯ ಸೈಬರ್ ಮತ್ತು ತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja