Dailyhunt Logo
  • Light mode
    Follow system
    Dark mode
    • Play Story
    • App Story
PM MODI: ವಿವಾಹಕ್ಕೆ ಪ್ರಧಾನಿಗೆ ಆಹ್ವಾನ ನೀಡಿದ್ದ ಚಿಕ್ಕಬಳ್ಳಾಪುರ ನವಜೋಡಿಗೆ ಬಂತು ಸರ್ಪ್ರೈಸ್ ಗಿಫ್ಟ್!

PM MODI: ವಿವಾಹಕ್ಕೆ ಪ್ರಧಾನಿಗೆ ಆಹ್ವಾನ ನೀಡಿದ್ದ ಚಿಕ್ಕಬಳ್ಳಾಪುರ ನವಜೋಡಿಗೆ ಬಂತು ಸರ್ಪ್ರೈಸ್ ಗಿಫ್ಟ್!

Navasamaja.com 1 week ago

ಚಿಕ್ಕಬಳ್ಳಾಪುರ: ತಮ್ಮ ಮದುವೆಗೆ (wedding) ದೇಶದ ಪ್ರಧಾನಿ ನರೇಂದ್ರ ಮೋದಿ (narendra modi) ಅವರನ್ನೇ ಆಹ್ವಾನಿಸಿದ್ದ ನವ ದಂಪತಿಗೆ ಪ್ರಧಾನಿ ಕಚೇರಿ (PMO) ಇಂದ ಮರೆಯಲಾಗದ ವಿಶೇಷ ಉಡುಗೊರೆಯೊಂದು ಬಂದಿದೆ.

ಬಿಡುವಿಲ್ಲದ ರಾಜತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳ ನಡುವೆಯೂ ಪ್ರಧಾನಿ ಮೋದಿ ಅವರು ನವಜೋಡಿಗೆ ಶುಭ ಹಾರೈಸಿ ಕಳುಹಿಸಿರುವ ಪತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಪ್ರಧಾನಿಗೆ ಆಮಂತ್ರಣ ಪತ್ರಿಕೆ ಕಳುಹಿಸಿದ್ದ ಅಭಿಮಾನಿಗಳು!
ಚಿಕ್ಕಬಳ್ಳಾಪುರ ಜಿಲ್ಲೆಯ ನುಗುತಹಳ್ಳಿಯ ಯುವಕ ಮಂಜುನಾಥ್ ಹಾಗೂ ತೋಕಲಘಟ್ಟ ಗ್ರಾಮದ ವಿದ್ಯಾಶ್ರೀ ಅವರು ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿಗಳು. ಕಳೆದ ಮೇ 13ರಂದು ಕಂದವಾರ ಬಾಗಿಲಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇವರಿಬ್ಬರ ಅದ್ಧೂರಿ ವಿವಾಹ ನೆರವೇರಿತ್ತು. ತಮ್ಮ ಮದುವೆಗೆ ಪ್ರಧಾನಿ ಮೋದಿಯವರನ್ನು ಕರೆಯಲೇಬೇಕು ಎಂದು ಆಸೆ ಪಟ್ಟಿದ್ದ ಈ ಜೋಡಿ, ಪ್ರಧಾನಿ ಕಚೇರಿಗೆ ಅಂಚೆ (Post) ಮೂಲಕ ಲಗ್ನ ಪತ್ರಿಕೆ ಕಳುಹಿಸಿ ಆಹ್ವಾನ ನೀಡಿದ್ದರು.

ಪ್ರಧಾನಿ ಕಚೇರಿಯಿಂದ ಬಂದ ವಿಶೇಷ ಪತ್ರದಲ್ಲಿ ಏನಿದೆ?
ಮೇ 13ರಂದು ನಡೆದ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರಲು ಸಾಧ್ಯವಾಗದಿದ್ದರೂ, ಜೂನ್ 29ರಂದು ಪ್ರಧಾನಿ ಕಚೇರಿಯಿಂದ ನೂತನ ದಂಪತಿಗೆ ವಿಶೇಷ ಸಂದೇಶವಿರುವ ಶುಭಾಶಯ ಪತ್ರವೊಂದು ಪೋಸ್ಟ್ ಮೂಲಕ ಬಂದು ತಲುಪಿದೆ.

ಪತ್ರದಲ್ಲಿ ಪ್ರಧಾನಿಯವರು, "ಶ್ರೀಮತಿ ರತ್ನಮ್ಮ ಮತ್ತು ಶ್ರೀ ಮುನಿಬೈರಪ್ಪ ಅವರೇ, ಮಂಜುನಾಥ್ ಹಾಗೂ ವಿದ್ಯಾಶ್ರೀ ಅವರ ವಿವಾಹಕ್ಕೆ ಅಭಿನಂದನೆಗಳು. ಅವರ ದಾಂಪತ್ಯ ಜೀವನವು ನಿರಂತರ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸಿನಿಂದ ಕೂಡಿರಲಿ" ಎಂದು ಬರೆದು ನವಜೋಡಿಗೆ ಆಶೀರ್ವದಿಸಿದ್ದಾರೆ.

ದೇಶದ ಪ್ರಧಾನಿಯವರೇ ತಮ್ಮ ಮದುವೆಯನ್ನು ನೆನಪಿಟ್ಟುಕೊಂಡು ಆಶೀರ್ವಾದದ ಪತ್ರ ಕಳುಹಿಸಿರುವುದನ್ನು ನೋಡಿ ಮಂಜುನಾಥ್ ಹಾಗೂ ವಿದ್ಯಾಶ್ರೀ ದಂಪತಿ ಮತ್ತು ಅವರ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja