Dailyhunt Logo
  • Light mode
    Follow system
    Dark mode
    • Play Story
    • App Story
PM NARENDRA MODI : MAN KI BAAT : ವಿಕಸಿತ ಭಾರತ ನಿರ್ಮಾಣಕ್ಕೆ ವ್ಯಸನ ಮುಕ್ತ ಯುವಜನ ಅಗತ್ಯ - ಪ್ರಧಾನಿ ಮೋದಿ

PM NARENDRA MODI : MAN KI BAAT : ವಿಕಸಿತ ಭಾರತ ನಿರ್ಮಾಣಕ್ಕೆ ವ್ಯಸನ ಮುಕ್ತ ಯುವಜನ ಅಗತ್ಯ - ಪ್ರಧಾನಿ ಮೋದಿ

Navasamaja.com 1 week ago

ವದೆಹಲಿ: ದೇಶವನ್ನು ಸಂಪೂರ್ಣವಾಗಿ ಮಾದಕದ್ರವ್ಯ ಮುಕ್ತ (Drugs Free) ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, 'ವಿಕಸಿತ ಭಾರತ'ದ ಕನಸು ನನಸಾಗಲು ಯುವಜನತೆ ಮಾದಕ ವ್ಯಸನದಿಂದ ದೂರವಿರುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಪ್ರತಿಪಾದಿಸಿದ್ದಾರೆ.

ತಮ್ಮ ಜನಪ್ರಿಯ 'ಮನ್ ಕೀ ಬಾತ್'(Mann Ki Baat) ರೇಡಿಯೋ ಕಾರ್ಯಕ್ರಮದ 137ನೇ ಆವೃತ್ತಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಕ ದ್ರವ್ಯಗಳ ವಿರುದ್ಧ ಇಡೀ ಸಮಾಜ ಒಂದಾಗಿ ಧ್ವನಿ ಎತ್ತಬೇಕೆಂದು ಆಹ್ವಾನ ನೀಡಿದರು.

"ಮನೆ ಮತ್ತು ಮನಗಳಿಂದಲೇ ಹೋರಾಟ ಆರಂಭವಾಗಲಿ"
"ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ, ಇಡೀ ಕುಟುಂಬ ಮತ್ತು ಸಮಾಜವನ್ನೇ ನಾಶಪಡಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆ ಮತ್ತು ಮನಗಳಿಂದಲೇ ಈ ಹೋರಾಟವನ್ನು ಆರಂಭಿಸಬೇಕು" ಎಂದು ಪ್ರಧಾನಿ ಮೋದಿ ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದರು.

ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಯುವಜನತೆಗೆ ಕರೆ
ಈ ಜಾಗೃತಿ ಅಭಿಯಾನದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು ಎಂದು ಆಶಿಸಿದ ಪ್ರಧಾನಿ, ಯುವ ಸಮುದಾಯಕ್ಕೆ ಸುಲಭವಾಗಿ ತಲುಪುವಂತೆ ವಿವಿಧ ಭಾಷೆಗಳಲ್ಲಿ ಆಕರ್ಷಕ ಹಾಡುಗಳು, ಸೋಷಿಯಲ್ ಮೀಡಿಯಾ ಸ್ಲೋಗನ್‌ಗಳು ಹಾಗೂ ಬೀದಿ ನಾಟಕಗಳ (Street Plays) ಮೂಲಕ ಮಾದಕ ದ್ರವ್ಯಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಸಲಹೆ ನೀಡಿದರು.

'ನಶಾ ಮುಕ್ತ ಯುವ ಅಭಿಯಾನ'ಕ್ಕೆ ಅಭೂತಪೂರ್ವ ಸ್ಪಂದನೆ
ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ 'ನಶಾ ಮುಕ್ತ ಯುವ ಅಭಿಯಾನ'ಕ್ಕೆ ದೇಶಾದ್ಯಂತ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ಮತ್ತು ಸ್ಪಂದನೆ ಸಿಗುತ್ತಿರುವುದಕ್ಕೆ ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. ಪ್ರತಿಯೊಬ್ಬ ನಾಗರಿಕನೂ ಈ ಜಾಗೃತಿ ಚಳವಳಿಯಲ್ಲಿ ಕೈಜೋಡಿಸಿದಾಗ ಮಾತ್ರ ದೇಶವನ್ನು ಸಂಪೂರ್ಣವಾಗಿ ಮಾದಕ ವ್ಯಸನದಿಂದ ಮುಕ್ತಗೊಳಿಸಲು ಸಾಧ್ಯ ಎಂದು ಅವರು ಪುನರುಚ್ಚರಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja