Dailyhunt Logo
  • Light mode
    Follow system
    Dark mode
    • Play Story
    • App Story
PM NARENDRA MODI : ಶಿಕ್ಷಕರ ದಿನಾಚರಣೆಯಂದು ಜೆನ್ ಝೀ ವಿದ್ಯಾರ್ಥಿಗಳೊಡನೆ ಪ್ರಧಾನಿ ಮೋದಿ ಸಂವಾದ

PM NARENDRA MODI : ಶಿಕ್ಷಕರ ದಿನಾಚರಣೆಯಂದು ಜೆನ್ ಝೀ ವಿದ್ಯಾರ್ಥಿಗಳೊಡನೆ ಪ್ರಧಾನಿ ಮೋದಿ ಸಂವಾದ

Navasamaja.com 3 days ago

ವದೆಹಲಿ: ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ದೆಹಲಿಯ(Delhi) ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ಕಾಲೇಜಿಗೆ ಭೇಟಿ ನೀಡುವ ಸಾಧ್ಯತೆಯಿದೆ. 100 ವರ್ಷಗಳನ್ನು ಪೂರೈಸುತ್ತಿರುವ ಈ ಕಾಲೇಜಿನ ಶತಾಬ್ದಿ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ, ಯುವ ಜನ್-ಝಿ (Gen Z) ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಯುವ ಪೀಳಿಗೆ ತಲುಪಲು ಬಿಜೆಪಿ ಬೃಹತ್ ಪ್ಲಾನ್
ಮುಂದಿನ ಪೀಳಿಗೆಯ ಮತದಾರರಾದ ಯುವಕರನ್ನು ಸೆಳೆಯಲು ಮತ್ತು ಅವರ ಆಶೋತ್ತರಗಳನ್ನು ಅರ್ಥೈಸಿಕೊಳ್ಳಲು ಬಿಜೆಪಿ ಹೆಣೆದಿರುವ ವಿಶೇಷ ಕಾರ್ಯತಂತ್ರದ ಭಾಗವಾಗಿ ಪ್ರಧಾನಿಯವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ವಿಶೇಷ ತಂಡ ರಚನೆ: ಯುವಕರೊಂದಿಗೆ ಸುಲಭವಾಗಿ ಸಂವಹನ ನಡೆಸಲು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆದಿದ್ದು, ಪಕ್ಷದ ಹಿರಿಯ ನಾಯಕರು ಹಾಗೂ ಯುವ ಪ್ರತಿನಿಧಿಗಳನ್ನೊಳಗೊಂಡ 'ಜನ್-ಝಿ ಔಟ್‌ರೀಚ್' (Gen Z Outreach) ತಂಡವನ್ನು ರಚಿಸಲಾಗಿದೆ.

ವಿವಿಧ ಕಾರ್ಯಕ್ರಮಗಳು: ಕೇವಲ ರಾಜಕೀಯ ಸಮಾವೇಶಗಳಿಗೆ ಸೀಮಿತವಾಗದೆ, ಬೈಕ್ ಯಾತ್ರೆಗಳು, ಹ್ಯಾಕಥಾನ್‌ಗಳು, ಮ್ಯಾರಥಾನ್, ಸೈಕ್ಲಿಂಗ್ ಹಾಗೂ ನಾವೀನ್ಯತೆ ಸ್ಪರ್ಧೆಗಳ ಮೂಲಕ ಯುವಜನತೆಯನ್ನು ತಲುಪಲು ಯೋಜಿಸಲಾಗಿದೆ.

NEET ಪ್ರತಿಭಟನೆಯ ಬೆನ್ನಲ್ಲೇ ಯುವಕರತ್ತ ಗಮನ
ಇತ್ತೀಚೆಗೆ ನಡೆದ NEET ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಯ ಕಾವು ಹೆಚ್ಚಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು. ಪ್ರತಿಭಟನೆ ವೇಳೆ ಪ್ರತಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಜನ್-ಝಿ ಯುವಕರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದವು ಎಂದು ಧರ್ಮೇಂದ್ರ ಪ್ರಧಾನ್ ಬಳಿಕ ಆರೋಪಿಸಿದ್ದರು.

ಈ ಘಟನೆಗಳ ಬಳಿಕ ಯುವಜನರಲ್ಲಿ ಸರ್ಕಾರದ ವಿರುದ್ಧ ಸೃಷ್ಟಿಯಾಗಿರುವ ಅಸಮಾಧಾನವನ್ನು ಶಮನಗೊಳಿಸಲು ಮತ್ತು ಯುವ ಭಾರತದ ನೈಜ ಅಗತ್ಯತೆಗಳನ್ನು ಆಲಿಸಲು ಪ್ರಧಾನಿ ಮೋದಿ ಅವರ ಈ ನೇರ ಸಂವಾದ ಕಾರ್ಯಕ್ರಮ ನೆರವಾಗಲಿದೆ ಎಂದು ಹೇಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja