ಪಾಟ್ನಾ : ಖ್ಯಾತ ಚುನಾವಣಾ ತಜ್ಞ, ಜನ್ ಸೂರಜ್ ಪಾರ್ಟಿಯ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಅವರು ಅಂತಿಮವಾಗಿ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಬಿಹಾರದ ಹೈಪ್ರೊಫೈಲ್ ವಿಧಾನಸಭಾ ಕ್ಷೇತ್ರವಾಗಿರುವ ಬಂಕಿಪುರ (Bankipur) ಉಪಚುನಾವಣೆಗೆ ಪ್ರಶಾಂತ್ ಕಿಶೋರ್ (Prashant Kishore) ಅವರನ್ನು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಜನ್ ಸೂರಜ್ ಪಕ್ಷವು ಪ್ರಕಟಿಸಿದೆ.
ಜನ್ ಸೂರಜ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮನೋಜ್ ಭಾರ್ತಿ ಅವರು ಪಾಟ್ನಾದಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಕ್ಷೇತ್ರವು ಸಾಂಪ್ರದಾಯಿಕವಾಗಿ ಭಾರತೀಯ ಜನತಾ ಪಾರ್ಟಿಯ (BJP) ಭದ್ರಕೋಟೆಯಾಗಿದ್ದು, ಪ್ರಶಾಂತ್ ಕಿಶೋರ್ ಕಣಕ್ಕಿಳಿಯುವುದರೊಂದಿಗೆ ಈ ಉಪಚುನಾವಣೆಯು ಇಡೀ ದೇಶದ ಗಮನ ಸೆಳೆಯುವಂತಾಗಿದೆ. ನಿತಿನ್ ನಬಿನ್ ರಾಜೀನಾಮೆಯಿಂದ ತೆರವಾದ ಸ್ಥಾನ ಒಟ್ಟು ಚುನಾವಣಾ ಪ್ರಕ್ರಿಯೆಯು ಆಗಸ್ಟ್ 4ರ ಒಳಗಾಗಿ ಪೂರ್ಣಗೊಳ್ಳಲಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಇವಿಎಂ (EVM) ಹಾಗೂ ವಿವಿಪ್ಯಾಟ್ (VVPAT) ಯಂತ್ರಗಳನ್ನು ಕಡ್ಡಾಯವಾಗಿ ಬಳಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈವರೆಗೆ ತೆರೆಮರೆಯಲ್ಲಿದ್ದುಕೊಂಡು ದೇಶದ ಪ್ರಮುಖ ರಾಜಕೀಯ ಪಕ್ಷಗಳ ಗೆಲುವಿಗೆ ತಂತ್ರ ರೂಪಿಸುತ್ತಿದ್ದ ಪ್ರಶಾಂತ್ ಕಿಶೋರ್, ಇದೀಗ ತಾವೇ ಖುದ್ದಾಗಿ ಕಣಕ್ಕಿಳಿದಿರುವುದು ಬಿಹಾರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. : BIG NEWS: ಗೃಹ ಜ್ಯೋತಿ ಮನೆ-ಮನೆ ತಪಾಸಣೆ ಆರಂಭ, ಉಚಿತ ವಿದ್ಯುತ್ ಕೈತಪ್ಪುವ ಭೀತಿಯಲ್ಲಿ ಬಾಡಿಗೆದಾರರು!
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಇತ್ತೀಚೆಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಂಕಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ದಶಕಗಳಿಂದಲೂ ಬಿಜೆಪಿಯ ಗಟ್ಟಿಯಾದ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಸ್ಪರ್ಧಿಸುತ್ತಿರುವುದರಿಂದ, ಇಲ್ಲಿ ಬಿಜೆಪಿ ಹಾಗೂ ಜನ್ ಸೂರಜ್ ಪಕ್ಷದ ನಡುವೆ ಹಣಾಹಣಿ ಏರ್ಪಡುವುದು ನಿಶ್ಚಿತವಾಗಿದೆ.

