Dailyhunt Logo
  • Light mode
    Follow system
    Dark mode
    • Play Story
    • App Story
R ASHOK: ಡಿಕೆ ಸರ್ಕಾರ 3 ತಿಂಗಳು ತುಂಬುವ ಮೊದಲೇ ವಿಕೆಟ್​ ಪತನವಾಗಿದ್ದು ನಮ್ಮ ಹೋರಾಟಕ್ಕೆ ಸಿಕ್ಕ ಜಯ: ಅಶೋಕ್

R ASHOK: ಡಿಕೆ ಸರ್ಕಾರ 3 ತಿಂಗಳು ತುಂಬುವ ಮೊದಲೇ ವಿಕೆಟ್​ ಪತನವಾಗಿದ್ದು ನಮ್ಮ ಹೋರಾಟಕ್ಕೆ ಸಿಕ್ಕ ಜಯ: ಅಶೋಕ್

Navasamaja.com 2 weeks ago

ವದೆಹಲಿ: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ (B Nagendra) ಅವರು ರಾಜೀನಾಮೆ ನೀಡಿರುವುದು ಬಿಜೆಪಿ (BJP) ಹೋರಾಟಕ್ಕೆ ಸಿಕ್ಕ ಜಯ ಎಂದು ವಿರೋಧ ಪಕ್ಷದ ನಾಯಕ ಆರ್‌̤ ಅಶೋಕ್‌ (R Ashok) ಹೇಳಿದ್ದಾರೆ.

ದಲಿತರ ಹಣವನ್ನ ಲೂಟಿ ಮಾಡಿದ್ದಾರೆ

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಅವರನ್ನ ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಸರ್ಕಾರಕ್ಕೆ ಮೂರು ತಿಂಗಳು ತುಂಬುವ ಮೊದಲೇ ಒಂದು ವಿಕೆಟ್‌ ಪತನವಾಗಿದೆ.

ಬಿ ನಾಗೇಂದ್ರ ಅವರು, ದಲಿತರ ಹಣವನ್ನ ಲೂಟಿ ಮಾಡಿದ್ದಾರೆ. ಅವರು ರಾಜೀನಾಮೆ ನೀಡಿರುವುದರಿಂದ ನಮ್ಮ ಪಕ್ಷಕ್ಕೆ ಹೆಚ್ಚು ಶಕ್ತಿ ಬಂದಿದೆ. ಮುಂದಿನ ವಿಧಾನಸಭೆಯಲ್ಲಿ ನಮ್ಮ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟಗಳನ್ನ ಮಾಡುತ್ತೇವೆ. ರೈತರಿಗಾಗಿ ಹಾಗೂ ಜನರಿಗಾಗಿ ಹೋರಾಟ ರೂಪಿಸಲಾಗುತ್ತದೆ ಎಂದರು.

ಸಿಎಂ ಡಿಕೆಶಿ ​​​​​ಸಂಪುಟದ ಮೊದಲ ವಿಕೆಟ್ ಪತನ, ರಾಜೀನಾಮೆ ನಾಗೇಂದ್ರ ಅಧಿಕೃತ ಘೋಷಣೆ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಗರಣದ ಕಾವು ತೀವ್ರಗೊಂಡ ಹಿನ್ನೆಲೆಯಲ್ಲಿ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಬಿ. ನಾಗೇಂದ್ರ (B Nagendra) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ಖಚಿತಪಡಿಸಿದರು. ಇದರೊಂದಿಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಮೊದಲ ವಿಕೆಟ್ ಇದೀಗ (Breaking) ಪತನಗೊಂಡಿದೆ.

ರಾಜೀನಾಮೆ ವಿಚಾರ ಚರ್ಚಿಸಲು ಹೈಕಮಾಂಡ್​ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿ ಬೆಂಗಳೂರಿಗೆ ಇಂದು ಮರಳಿದ ನಾಗೇಂದ್ರ ಅವರು ಸುದ್ದಿಯಗೋಷ್ಠಿಯಲ್ಲಿ ರಾಜೀನಾಮೆಯ ವಿಚಾರವನ್ನು ವಿವರಿಸಿದರು. ಪಕ್ಷಕ್ಕೆ ನನ್ನಿಂದ ಯಾವುದೇ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡಿದ್ದೇನೆ. ಆದರೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೇ ಸದನವನ್ನು ವಿಪಕ್ಷದವರು ಹಾಳು ಮಾಡಿದರು ಎಂದು ನಾಗೇಂದ್ರ ಟೀಕಿಸಿದರು.

ಇನ್ನು, ನೈತಿಕವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ನಾಗೇಂದ್ರ, ಶೂದ್ರರು, ದಲಿತರು, ಮಹಿಳೆಯರು ಮುಖ್ಯವಾಗಿ ಆದಿವಾಸಿಗಳು ಸ್ವತಂತ್ರವಾಗಿ ಬದುಕಲೇಬಾರದು ಎಂಬ ಧೋರಣೆಯನ್ನು ಬಿಜೆಪಿಯ ಮನುಸ್ಮೃತಿವಾದಿಗಳು ಅನುಸರಿಸುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಕಣ್ಣೀರು..

ಸದನದಲ್ಲಿ ನೋಟಿಸ್​ ಕೊಡದೇ ಕೇವಲ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿ ಸದನದ ಕಲಾಪವನ್ನು ಹಾಳು ಮಾಡಿರುವ ವಿಪಕ್ಷದವರು ಸಂವಿಧಾನದ ವಿರೋಧಿಗಳು. ಹಗರಣ ಆಗಿದೆ ಎಂದು ಸುಳ್ಳನ್ನು ಬಿತ್ತರಿಸಿದ ವಿಪಕ್ಷದವರ ನಡೆಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ವಾಲ್ಮೀಕಿ ಹಗರಣ ಆಗಿದೆ ಎಂದು ಪ್ರತಿಪಾದಿಸುತ್ತಾ, ಒಬ್ಬ ದಲಿತ ಮೇಲೆ ಬರಬಾರದು ಎಂದು ಮುಗ್ಧ ಜನರ ಬದುಕನ್ನು ಹಾಳು ಮಾಡುತ್ತಿದ್ದಾರೆ. ಕುತಂತ್ರ ರಾಜಕಾರಣದಿಂದ ನನ್ನನ್ನು ಜೈಲಿಗೆ ಕಳುಹಿಸಿದರು ಎಂದು ವಾಗ್ದಾಳಿ ನಡೆಸಿದರು. ಪ್ರಕರಣದಲ್ಲಿ ನನ್ನಿಂದ ಯಾವುದೇ ತಪ್ಪಾಗಿಲ್ಲ. ಸಂವಿಧಾನಕ್ಕೆ ಗೌರವಕೊಟ್ಟು, ಪಕ್ಷಕ್ಕೆ ಮುಜುಗರ ಆಗಬಾರದೆಂದು ಭಾವುಕರಾಗಿ ನಾಗೇಂದ್ರ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja