Dailyhunt Logo
  • Light mode
    Follow system
    Dark mode
    • Play Story
    • App Story
RAHUL GANDHI : ಅಣ್ಣ ತಂಗಿಯರ ಈ ಬಂಧ -ರಾಖಿ ಹಬ್ಬಕ್ಕೆ ರಾಹುಲ್ ಗಾಂಧಿ ವಿಶಿಷ್ಟ ವಿಡಿಯೋ ಹಂಚಿಕೊಂಡ ರಾಗಾ! VIDEO

RAHUL GANDHI : ಅಣ್ಣ ತಂಗಿಯರ ಈ ಬಂಧ -ರಾಖಿ ಹಬ್ಬಕ್ಕೆ ರಾಹುಲ್ ಗಾಂಧಿ ವಿಶಿಷ್ಟ ವಿಡಿಯೋ ಹಂಚಿಕೊಂಡ ರಾಗಾ! VIDEO

Navasamaja.com 2 weeks ago

ವದೆಹಲಿ: ರಕ್ಷಾಬಂಧನದ(Raksha Bandhan) ಶುಭ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ದೇಶದ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಸೋದರತ್ವ ಹಾಗೂ ಪ್ರೀತಿಯ ಸಂಕೇತ
ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿರುವ ರಾಹುಲ್ ಗಾಂಧಿ, ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅಪಾರ ಪ್ರೀತಿ, ವಾತ್ಸಲ್ಯ ಹಾಗೂ ರಕ್ಷಣೆಯ ಪವಿತ್ರ ಬಂಧವಾಗಿದೆ ಎಂದು ಬಣ್ಣಿಸಿದ್ದಾರೆ.

ರೇಷ್ಮೆ ದಾರದಿಂದ ಬಂಧಿತವಾದ ಈ ಸುಂದರ ಸಂಬಂಧವು ಪ್ರೀತಿ ಮತ್ತು ಪರಸ್ಪರ ನಂಬಿಕೆಯೊಂದಿಗೆ ಮತ್ತಷ್ಟು ಗಟ್ಟಿಯಾಗಲಿ ಎಂದು ಅವರು ಆಶಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಜೊತೆಗಿನ ಫೋಟೋ, ವಿಡಿಯೋ ಹಂಚಿಕೆ
ಶುಭಾಶಯದೊಂದಿಗೆ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗಿನ ಭಾವನಾತ್ಮಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಪ್ರತಿಯೊಬ್ಬರ ಜೀವನದಲ್ಲೂ ಈ ಹಬ್ಬವು ಸಂತೋಷ, ಸಮೃದ್ಧಿ ಹಾಗೂ ಭ್ರಾತೃತ್ವವನ್ನು ತರಲಿ ಎಂದು ಹಾರೈಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja