Dailyhunt Logo
  • Light mode
    Follow system
    Dark mode
    • Play Story
    • App Story
RAIN: ಭಾರಿ ಮಳೆಯ ಮುನ್ಸೂಚನೆ, ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್!

RAIN: ಭಾರಿ ಮಳೆಯ ಮುನ್ಸೂಚನೆ, ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್!

Navasamaja.com 3 months ago

ಬೆಳ್ತಂಗಡಿ: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ (Big News) ತಾಣವಾದ 'ಗಡಾಯಿಕಲ್ಲು' ಚಾರಣಕ್ಕೆ (Trekking) ಜುಲೈ 8 ರಿಂದ ಅನ್ವಯವಾಗುವಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ನಿರಂತರವಾಗಿ ಈ ಪ್ರದೇಶದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟದ ಕಲ್ಲು ಬಂಡೆಗಳು ಹಾಗೂ ಚಾರಣದ ಹಾದಿ ವಿಪರೀತ ಜಾರುತ್ತಿರುವುದರಿಂದ ಇಲ್ಲಿ ಸಂಚರಿಸುವುದು ಅತ್ಯಂತ ಅಪಾಯಕಾರಿಯಾಗಿದೆ. ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಿ ಅಧಿಕೃತ ಆದೇಶ ಹೊರಡಿಸಿದೆ.

ಎರಡನೇ ಬಾರಿ ಟ್ರಕ್ಕಿಂಗ್‌ಗೆ ನಿಷೇಧ
ಪ್ರಸಕ್ತ ಸಾಲಿನ ಜೂನ್ 1 ರಂದು ಗಡಾಯಿಕಲ್ಲು ಚಾರಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆದರೆ ಆರಂಭದಲ್ಲೇ ಸುರಿದ ಮಳೆಯಿಂದಾಗಿ ಒಮ್ಮೆ ನಿಷೇಧ ಹೇರಿ, ಬಳಿಕ ಹವಾಮಾನ ಸುಧಾರಿಸಿದ್ದನ್ನು ನೋಡಿ ಜೂನ್ 25 ರಂದು ಮತ್ತೆ ಮುಕ್ತ ಅವಕಾಶ ಕೊಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಮಳೆ ಮತ್ತೆ ತೀವ್ರಗೊಂಡಿರುವುದರಿಂದ ಚಾರಣಿಗರ ಹಿತದೃಷ್ಟಿಯಿಂದ ಎರಡನೇ ಬಾರಿಗೆ ಟ್ರೆಕ್ಕಿಂಗ್‌ಗೆ ನಿಷೇಧ ಹೇರಲಾಗಿದೆ.

ಕರಾವಳಿಯಲ್ಲಿ ಮಳೆ ಹೆಚ್ಚಳ: ಭೂಕುಸಿತದ ಎಚ್ಚರಿಕೆ
ಇನ್ನೊಂದೆಡೆ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ 24 ಗಂಟೆಗಳ ಅವಧಿಯಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿರಲಿದ್ದು, ಸುಮಾರು 130 ಮಿ.ಮೀ ನಷ್ಟು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದ್ದು, ಅತ್ಯಂತ ಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ.

ಬೆಟ್ಟಗುಡ್ಡ ಹಾಗೂ ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತ (ಲ್ಯಾಂಡ್‌ಸ್ಲೈಡ್) ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಘಾಟಿ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಸಾರ್ವಜನಿಕರು ತೀವ್ರ ಜಾಗರೂಕರಾಗಿರಬೇಕು ಹಾಗೂ ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ಮುನ್ನಡೆಸಬೇಕು ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಲೆನಾಡಿನ ಮಳೆ ವೈಭವ - ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದೆ ವಿಶ್ವಪ್ರಸಿದ್ಧ ಜೋಗ ಜಲಪಾತ

ಶಿವಮೊಗ್ಗ : ಜಿಲ್ಲೆಯಾದ್ಯಂತ (Shivamogga) ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ (Rain) ಮಲೆನಾಡು ಭಾಗ ಸಂಪೂರ್ಣ ಹಸಿರಾಗಿ ಕಂಗೊಳಿಸುತ್ತಿದೆ. ಶರಾವತಿ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ತೀವ್ರಗೊಂಡ ಹಿನ್ನೆಲೆಯಲ್ಲಿ, ನದಿಯಲ್ಲಿ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರ ನೇರ ಪರಿಣಾಮವಾಗಿ ಪ್ರಸಿದ್ಧ ಪ್ರವಾಸಿ ತಾಣವಾದ ಸಾಗರ ತಾಲೂಕಿನ ಜೋಗ ಜಲಪಾತಕ್ಕೆ (Jog Falls) ಈಗ ಹೊಸ ಚೈತನ್ಯ ಬಂದಿದ್ದು, ಪ್ರಕೃತಿ ಪ್ರೇಮಿಗಳ ಪ್ರಮುಖ ಆಕರ್ಷಣೆಯಾಗಿದೆ.

ಈ ಪ್ರಕೃತಿಯ ವಿಸ್ಮಯ ತನ್ನ ಸಾಂಪ್ರದಾಯಿಕ ಕವಲುಗಳಾದ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಧಾರೆಗಳ ಮೂಲಕ ಭೋರ್ಗರೆಯುತ್ತಾ ಪ್ರಪಾತಕ್ಕೆ ಧುಮ್ಮಿಕ್ಕುತ್ತಿದೆ. ಬೆಟ್ಟದ ತುದಿಯಿಂದ ಭಾರಿ ವೇಗದಲ್ಲಿ ಕೆಳಗೆ ಬೀಳುತ್ತಿರುವ ನೀರು ನೋಡುಗರಿಗೆ ಹಾಲಿನ ನೊರೆಯಂತೆ ಭಾಸವಾಗುತ್ತಿದೆ. ಜಲಪಾತದ ಈ ರಮಣೀಯ ದೃಶ್ಯ ಮತ್ತು ಸುತ್ತಲಿನ ಸೌಂದರ್ಯ ಅಲ್ಲಿಗೆ ಭೇಟಿ ನೀಡುತ್ತಿರುವ ಸಾರ್ವಜನಿಕರ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja