Dailyhunt
RAJ SHETTY: ನೇಮೋತ್ಸವದಲ್ಲಿ ರಾಜ್‌ ಶೆಟ್ರು, ದೈವದ ಮುಂದೆ ಶರಣಾದ ನಟ

RAJ SHETTY: ನೇಮೋತ್ಸವದಲ್ಲಿ ರಾಜ್‌ ಶೆಟ್ರು, ದೈವದ ಮುಂದೆ ಶರಣಾದ ನಟ

Navasamaja.com 2 weeks ago

ಮಂಗಳೂರು: ಸ್ಯಾಂಡಲ್‌ವುಡ್‌ನ ನಟ ಮತ್ತು ನಿರ್ದೇಶಕ ರಾಜ್ ಬಿ. ಶೆಟ್ಟಿ (Raj Shetty) ಅವರು ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆ ಬಗ್ಗೆ ತಮಗೆ ಇರುವ ನಂಬಿಕೆ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಅದನ್ನ ಸಿನಿಮಾಗಳ ಮೂಲಕ ಸಹ ತೋರಿಸಿದ್ದಾರೆ. ಇದೀಗ, ಮತ್ತೊಮ್ಮೆ ತಮ್ಮ ನಂಬಿಕೆಯನ್ನ ಸಾಬೀತು ಮಾಡಿದ್ದಾರೆ.

ನೇಮೋತ್ಸವದಲ್ಲಿ ಭಾಗವಹಿಸಿದ್ದ ನಟ
ಇತ್ತೀಚೆಗೆ ರಾಜ್‌ ಅವರು ಕರಾವಳಿಯ ಪವಿತ್ರ ದೈವಾರಾಧನೆಯ ನೇಮೋತ್ಸವವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರು ಪಿಲ್ಚಂಡಿ ದೈವದ ಮುಂದೆ ಅತ್ಯಂತ ಸರಳ ಭಕ್ತನಂತೆ ನಿಂತು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸುಂದರ ಕ್ಷಣದ ಫೋಟೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದಕ್ಕೆ 'ಸ್ವಾಮಿ ಎನ್ನ ಅಪ್ಪೆ ಪಿಲ್ಚಂಡಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.

ರಾಜ್‌ ಶೆಟ್ಟಿ ಕ್ಯಾಪ್ಷನ್‌ ಅರ್ಥ ಇದು

ರಾಜ್ ಬಿ. ಶೆಟ್ಟಿ ಅವರು ಬರೆದುಕೊಂಡಿರುವ 'ಸ್ವಾಮಿ ಎನ್ನ ಅಪ್ಪೆ ಪಿಲ್ಚಂಡಿ' ಎಂಬ ವಾಕ್ಯವು ತುಳುವೇತರರಲ್ಲಿ ಕುತೂಹಲ ಮೂಡಿಸಿತ್ತು.‌ಹಾಗಾಗಿ ಕಮೆಂಟ್‌ನಲ್ಲಿ ಈ ವಾಕ್ಯದ ಅರ್ಥವನ್ನ ಸಹ ಅನೇಕರು ಕೇಳಿದ್ದರು. ಈ ವಾಕ್ಯದ ಅರ್ಥವನ್ನ ನಾವು ನೋಡುವುದಾದರೆ, ಇದೊಂದು ಭಕ್ತಪೂರ್ವಕ ಪ್ರಾರ್ಥನೆ ಆಗಿದೆ. ಹೌದು, ಪಿಲ್ಚಂಡಿ ದೈವವು ಸ್ತ್ರೀ ಶಕ್ತಿಯ ಸಂಕೇತವಾಗಿರುವುದರಿಂದ, 'ಸ್ವಾಮಿ ನನ್ನ ತಾಯೇ ಪಿಲ್ಚಂಡಿಯೇ' ಎಂದು ದೈವದ ಮುಂದೆ ಎಲ್ಲವನ್ನೂ ಮರೆತು ಶರಣಾಗುವ ರೀತಿ ಎನ್ನಲಾಗುತ್ತದೆ. ದೈವದ ಮುಂದೆ ಇಷ್ಟು ಆಳವಾದ ಭಕ್ತಿಯಿಂದ ಬೇಡಿಕೊಂಡರೆ ಆ ದೈವವು ತನ್ನನ್ನು ನಂಬಿದವರನ್ನು ಖಂಡಿತ ಕಾಪಾಡುತ್ತದೆ ಎಂಬುದು ಅಲ್ಲಿನ ಜನರ ಅಚಲ ನಂಬಿಕೆ.

ತುಳುನಾಡು ಮೂಲತಃ ಮಾತೃಪ್ರಧಾನ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶ. ಇಲ್ಲಿ ತಂದೆಗಿಂತ ತಾಯಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ದೈವಾರಾಧನೆಯಲ್ಲೂ ಕೂಡ ಹೆಣ್ಣು ದೈವಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಮನೆಯ ಒಡತಿಯ ಕೈಯಿಂದಲೇ ದೈವಗಳು ಹಾಲು ಸ್ವೀಕರಿಸುವ ಸಂಪ್ರದಾಯವಿದೆ.

ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ; ಸಿಂಪಲ್‌ ಸ್ಟಾರ್‌ಗೆ ಸಿಕ್ತು ದೈವದ ಅಭಯ

ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ಅವರ ಸ್ನೇಹಿತರಾದ ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ 1 ಹಾಗೂ ರಾಜ್‌ ಬಿ ಶೆಟ್ಟಿಯ ಸು ಫ್ರಾಮ್‌ ಸೋ ಸಿನಿಮಾಗಳು ಬಿಡುಗಡೆಗೊಂದಿದ್ದವು. ಆದರೆ ಇದ್ಯಾವ ಸಿನಿಮಾವನ್ನು ರಕ್ಷಿತ್‌ ಶೆಟ್ಟಿಯವರು ನೋಡಿಲ್ಲ ಎನ್ನಲಾಗಿತ್ತು. ಜೊತೆಗೆ ರಕ್ಷಿತ್‌ ಶೆಟ್ಟಿಯವರು ಎಲ್ಲಿ ಇದ್ದಾರೆ? ಏನಾಗಿದೆ ಎನ್ನುವದರ ಬಗ್ಗೆ ಅಭಿಮಾನಿಗಳು ತಲೆ ಕೆಡೆಸಿಕೊಂಡಿದ್ದರು. ಇದೀಗ ಉತ್ತರ ಸಿಕ್ಕಿದ್ದು, ಉಡುಪಿಯಲ್ಲಿ ದೈವದ ಮುಂದೆ ಕಾಣಿಸಿಕೊಂಡಿದ್ದರು

ಈ ಹಿಂದೆ ರಕ್ಷಿತ್‌ ಗೆಳೆಯರಾದ ರಿಷಬ್‌, ರಾಜ್‌, ಪ್ರಮೋದ್‌ ಮೂರು ಜನ ರಕ್ಷಿತ್‌ ರಿಚರ್ಡ್‌ ಆಂಟನಿ ಸ್ಕ್ರಿಪ್ಟ್‌ ಅಲ್ಲಿ ಬ್ಯೂಸಿ ಎಂದು ಮಾಧ್ಯಮಗಳಿಗೆ ಹೇಳಿದ್ದರು. ಕೆಲ ದಿನ ಅಮೆರಿಕಾದಲ್ಲಿ ಕಥೆ ಯೋಚಿಸುತ್ತಿದ್ದ ರಕ್ಷಿತ್‌ ಇದೀಗ ತಮ್ಮ ಮೂಲಮನೆಯ ಕೋಲದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು

Dailyhunt
Disclaimer: This content has not been generated, created or edited by Dailyhunt. Publisher: Navasamaja