ಮುಂಬೈ: ಬಾಲಿವುಡ್‌ನಲ್ಲಿ ಸದ್ಯ ರಾಮಾಯಣ (Ramayana) ಸಿನಿಮಾದ ಬಗ್ಗೆಯೇ ಸುದ್ದಿ ಹರಿದಾಡುತ್ತಿದೆ. ಈ ಭಾರಿ ಬಜೆಟ್‌ನ ಚಿತ್ರ 'ರಾಮಾಯಣ'ದ ಮೇಲೆ ಇಡೀ ದೇಶದ ಕಣ್ಣಿದೆ. ಈ ದೊಡ್ಡ ಸಿನಿಮಾದ ಮುಖ್ಯವಾದ ಪಾತ್ರದ ಮೇಲೆ ಎಲ್ಲರ ಚಿತ್ತ ಇದ್ದು, ಅದಕ್ಕೆ ಸ್ಟಾರ್ ನಟಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.
ಶೂರ್ಪನಖಿ ಪಾತ್ರದಲ್ಲಿ ರಾಕುಲ್ ಸದ್ಯದ ಮಾಹಿತಿಗಳ ಪ್ರಕಾರ, ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಶೂರ್ಪನಖಿಯ ಪಾತ್ರವನ್ನ ಸ್ಟಾರ್ ನಟಿ ರಾಕುಲ್ ಪ್ರೀತ್ ಸಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರಬರುತ್ತಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿವೆ. ಸದ್ಯ ಈ ಚಿತ್ರದಲ್ಲಿ ಶೂರ್ಪನಖಿಯ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಚರ್ಚೆ ಬಿ-ಟೌನ್‌ನಲ್ಲಿ ಜೋರಾಗಿ ನಡೆಯುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಆರಂಭದಲ್ಲಿ ಶೂರ್ಪನಖಿ ಪಾತ್ರಕ್ಕೆ ಸೌತ್ ಸುಂದರಿ ಕಾಜಲ್ ಅಗರ್ವಾಲ್ ಅವರ ಹೆಸರು ಕೇಳಿಬಂದಿತ್ತು. ಆದರೆ, ವರದಿಗಳ ಪ್ರಕಾರ ಕಾಜಲ್ ಬದಲಿಗೆ ಈಗ ರಾಕುಲ್ ಪ್ರೀತ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಮಾಯಣದ ಕಥೆಯ ಪ್ರಕಾರ ಸೀತೆಗಿಂತ ಶೂರ್ಪನಖಿ ಹೆಚ್ಚು ಸುಂದರಿಯಾಗಿ ಕಾಣಿಸಬೇಕು ಎಂಬ ಉದ್ದೇಶದಿಂದ ಚಿತ್ರತಂಡ ಈ ಬದಲಾವಣೆ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸಿದ್ದ ನಟಿ ರಾಮಾಯಣ ಚಿತ್ರದ ಟೀಸರ್ ಬಿಡುಗಡೆ - ರಾಮನ ಪಾತ್ರದಲ್ಲಿ ರಣಬೀರ್ ಸಖತ್ ಲುಕ್ ಹನುಮ ಜಯಂತಿಯಂದು ರಣಬೀರ್ ಕಪೂರ್ ನಟನೆಯ 'ರಾಮಾಯಣ' (Ramayana ) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ (Ranbir kapoor ) ಲುಕ್ ನೋಡಿ ಫ್ಯಾನ್ಸ್ ಸೈ ಎಂದಿದ್ದಾರೆ. ಅದ್ಭುತ ಕಲರ್ ಫುಲ್ ವಿಶ್ಯುವಲ್ಸ್, ಅಂತಾರಾಷ್ಟ್ರೀಯ ಮಟ್ಟದ VFX ಜೊತೆಗೆ ಈ ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಾಜೆಕ್ಟ್ ಆಗುವ ನಿರೀಕ್ಷೆ ದಟ್ಟವಾಗಿದ್ದು, ಸಿನಿಮಾ ಬಗ್ಗೆ ಕೌತುಕ ಇನ್ನಷ್ಟು ಹೆಚ್ಚಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಭರ್ಜರಿಯಾಗಿ ದುಡ್ಡು ಸುರಿದಿದ್ದು, ಮೆಗಾ ಸಿನಿಮಾ 'ರಾಮಾಯಣ'ದ ಮೊದಲ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಪ್ರೇಕ್ಷಕರ ಮನಗೆದ್ದಿದ್ದು, 5000 ವರ್ಷಗಳಷ್ಟು ಹಳೆಯ ಈ ಕಥೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಜಾಗತಿಕ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ.
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಈ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಸಿನಿ ಜರ್ನಿಯನ್ನ ಆರಂಭ ಮಾಡಿದ್ದು, ಕನ್ನಡದ ಸಿನಿಮಾದಿಂದ ಎಂಬುದು ವಿಶೇಷ. ಹೌದು, ಕನ್ನಡದ 'ಗಿಲ್ಲಿ' ಚಿತ್ರದ ಮೂಲಕವೇ ಆರಂಭಿಸಿದ್ದರು.

