Dailyhunt
RAMAYANA: ರಾಮಾಯಣ ಸಿನಿಮಾಗೆ ರೆಹಮಾನ್‌ ಪಡೆಯುತ್ತಿರೋ ಸಂಭಾವನೆ ಎಷ್ಟು ಗೊತ್ತಾ? ಶಾಕ್‌ ಆಗೋದು ಫಿಕ್ಸ್

RAMAYANA: ರಾಮಾಯಣ ಸಿನಿಮಾಗೆ ರೆಹಮಾನ್‌ ಪಡೆಯುತ್ತಿರೋ ಸಂಭಾವನೆ ಎಷ್ಟು ಗೊತ್ತಾ? ಶಾಕ್‌ ಆಗೋದು ಫಿಕ್ಸ್

Navasamaja.com 1 week ago

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಮಹಾಕಾವ್ಯದ ಟೀಸರ್ ಮೊನ್ನೆಯಷ್ಟೇ ಬಿಡುಗಡೆಯಾಗಿ ಸಂಚಲನ ಮೂಡಿಸಿದೆ. ಈ ಬೃಹತ್ ಬಜೆಟ್ ಸಿನಿಮಾಗೆ (Ramayana) ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.

ರೆಹಮಾನ್ ಅವರು ಸಂಗೀತ ಸಂಯೋಜಿಸುತ್ತಿದ್ದು, ಅವರ ಸಂಭಾವನೆಯ ವಿಚಾರ ಈಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

30 ಕೋಟಿ ಸಂಭಾವನೆ ಪಡೆಯುತ್ತಾರಂತೆ ರೆಹಮಾನ್‌!

ಮೂಲಗಳ ಪ್ರಕಾರ, ಭಾರತದ ಅತ್ಯಂತ ದುಬಾರಿ ಚಿತ್ರ ಎನ್ನಲಾಗಿರುವ ಈ ಯೋಜನೆಗಾಗಿ ರೆಹಮಾನ್ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷವೆಂದರೆ, ಈ 30 ಕೋಟಿ ರೂಪಾಯಿ ಕೇವಲ ಅವರ ಆರಂಭಿಕ ಸಂಭಾವನೆಯಾಗಿದ್ದು, ಸಿನಿಮಾ ಬಿಡುಗಡೆಯಾದ ನಂತರ ಗಳಿಸುವ ಲಾಭದಲ್ಲೂ ರೆಹಮಾನ್ ಅವರು ನಿರ್ದಿಷ್ಟ ಪಾಲನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಸಿನಿಮಾದ ಇತಿಹಾಸದಲ್ಲೇ ಸಂಗೀತ ನಿರ್ದೇಶಕರೊಬ್ಬರಿಗೆ ಇಷ್ಟು ದೊಡ್ಡ ಮಟ್ಟದ ಸಂಭಾವನೆ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ವಿಶ್ವವಿಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್ ಅವರ ಸೇರ್ಪಡೆಯಿಂದಾಗಿ 'ರಾಮಾಯಣ' ಚಿತ್ರದ ಘನತೆ ಮತ್ತಷ್ಟು ಹೆಚ್ಚಲಿದ್ದು, ಈ ಪೌರಾಣಿಕ ಕಥೆಗೆ ಅವರ ಸಂಗೀತವು ಹೊಸ ಆಯಾಮ ನೀಡಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದಾಗಿದೆ.

ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನುಳಿದಂತೆ ಕನ್ನಡದ ಸ್ಟಾರ್ ನಟ ಯಶ್ ಅವರು ರಾವಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾದ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಸ್ಟಾರ್ ನಟರ ದಂಡೇ ಇರುವ ಈ ಚಿತ್ರಕ್ಕೆ ಈಗ ರೆಹಮಾನ್ ಅವರ ಸಂಗೀತದ ಬಲವೂ ದೊರೆತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯಲು ಚಿತ್ರತಂಡ ಸಜ್ಜಾಗಿದೆ.

ರಾಮಾಯಣ ಸಿನಿಮಾದ ನಟರ ಸಂಭಾವನೆ ಬಹಿರಂಗ, ರಣಬೀರ್‌-ಯಶ್‌ಗೆ ಎಷ್ಟು?

ವರದಿಗಳ ಪ್ರಕಾರ, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಪ್ರತಿ ಭಾಗಕ್ಕೆ 75 ಕೋಟಿ ರೂಪಾಯಿಯಂತೆ ಒಟ್ಟು 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದು ಅವರ ಹಿಂದಿನ ಸೂಪರ್ ಹಿಟ್ ಚಿತ್ರಗಳಾದ 'ಅನಿಮಲ್' (35 ಕೋಟಿ ರೂ.) ಮತ್ತು 'ಬ್ರಹ್ಮಾಸ್ತ್ರ' (30 ಕೋಟಿ ರೂ.) ಚಿತ್ರಗಳಿಗಿಂತಲೂ ದುಪ್ಪಟ್ಟು ಮೊತ್ತವಾಗಿದೆ. ವಿಶೇಷವೆಂದರೆ, ಲಂಕೇಶನ ಪಾತ್ರದಲ್ಲಿ ನಟಿಸುತ್ತಿರುವ ಕನ್ನಡಿಗರ ನೆಚ್ಚಿನ ಯಶ್ ಪ್ರತಿ ಭಾಗಕ್ಕೆ 50 ಕೋಟಿ ರೂ.ನಂತೆ ಒಟ್ಟು 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಾಯಿ ಪಲ್ಲವಿ ಮತ್ತು ಇತರ ನಟರ ಗಳಿಕೆ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಭಾಗಕ್ಕೆ 6 ಕೋಟಿ ರೂಪಾಯಿಯಂತೆ ಅವರು ಒಟ್ಟು 12 ಕೋಟಿ ರೂ. ಪಡೆಯುತ್ತಿದ್ದಾರೆ. ಇನ್ನು ಹನುಮಂತನ ಪಾತ್ರದಲ್ಲಿ ಮಿಂಚಲಿರುವ ಸನ್ನಿ ಡಿಯೋಲ್ 40 ಕೋಟಿ ರೂ. ಹಾಗೂ ಲಕ್ಷ್ಮಣನ ಪಾತ್ರಕ್ಕೆ ಟಿವಿ ತಾರೆ ರವಿ ದುಬೆ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja