ಬೆಳಗಿನ ಉಪಹಾರಕ್ಕೆ (Breakfast) ಶಕ್ತಿ ನೀಡುವ ಹಾಗೂ ದೇಹಕ್ಕೆ ಅತ್ಯಂತ ಹಿತಕರವಾದ ಪಾನೀಯ (Drink) ಎಂದರೆ ಅದು ರಾಗಿ ಮಾಲ್ಟ್ ಅಥವಾ ರಾಗಿ ಅಂಬಲಿ (Ragi Malt). ಈಗ ಪೌಷ್ಟಿಕಾಂಶಯುಕ್ತ ಹಾಗೂ ರುಚಿಕರವಾದ ರಾಗಿ ಮಾಲ್ಟ್ ಬೆಳಗಿನ ಉಪಹಾರದ ಸಮಯದಲ್ಲಿ ಸೇವಿಸುವುದರಿಂದ ದಿನಪೂರ್ತಿ ಚೈತನ್ಯದಿಂದ ಕೂಡಿರಬಹುದು.
ಇದನ್ನು ಗಂಟಾಗದಂತೆ ಅತ್ಯಂತ ಸುಲಭವಾಗಿ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ತಯಾರಿಸುವುದು (Recipe) ಹೇಗೆಂದು ನಾವಿಂದು ಹೇಳಿಕೊಡುತ್ತೇವೆ. ಬೇಕಾಗುವ ಪದಾರ್ಥಗಳು: ಮಾಡುವ ವಿಧಾನ:
* ರಾಗಿ ಹಿಟ್ಟು - 4 ದೊಡ್ಡ ಚಮಚ
* ನೀರು - 2.5 ಕಪ್
* ಬೆಲ್ಲದ ಪುಡಿ - 6 ದೊಡ್ಡ ಚಮಚ
* ಏಲಕ್ಕಿ ಪುಡಿ - 1/4 ಚಮಚ
* ಮೊದಲಿಗೆ ಒಂದು ಸಣ್ಣ ಪಾತ್ರೆಯಲ್ಲಿ 1/2 ಕಪ್ ನೀರು ಮತ್ತು 4 ಚಮಚ ರಾಗಿ ಹಿಟ್ಟನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.
* ಇನ್ನೊಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಒಲೆಯ ಮೇಲಿಟ್ಟು ಕುದಿಯಲು ಬಿಡಿ.
* ನೀರು ಕುದಿಯಲು ಪ್ರಾರಂಭಿಸಿದಾಗ, ಉರಿಯನ್ನು ಸಣ್ಣದು ಮಾಡಿ, ಕಲಸಿಟ್ಟ ರಾಗಿ ಮಿಶ್ರಣವನ್ನು ಮೆಲ್ಲನೆ ಸೇರಿಸುತ್ತಾ ಕೈಯಾಡಿಸಿ.
* ರಾಗಿ ಹಿಟ್ಟು ಗಂಟಾಗದಂತೆ ನಿರಂತರವಾಗಿ ಕೈಯಾಡಿಸುತ್ತಾ ಸುಮಾರು 10 ರಿಂದ 12 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
* ರಾಗಿ ಹಿಟ್ಟು ದಪ್ಪಗಾದ ನಂತರ ಬೆಲ್ಲದ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ, ಬೆಲ್ಲ ಕರಗುವವರೆಗೆ ಚೆನ್ನಾಗಿ ಬೆರೆಸಿ ಒಲೆಯಿಂದ ಇಳಿಸಿ.
* ಇದೀಗ ಆರೋಗ್ಯಕರ ರಾಗಿ ಮಾಲ್ಟ್ ಸವಿಯಲು ಸಿದ್ಧ.

