ಮಕ್ಕಳು ಉಪಹಾರಕ್ಕೆ (Breakfast Recipe) ರುಚಿಕರವಾದ ಹಾಗೂ ಕುರುಕಲಾದ ತಿಂಡಿಗಳನ್ನೇ ಕೇಳೋದು ಹೆಚ್ಚು. ಆದರೆ ಮಕ್ಕಳ ಆರೋಗ್ಯದ ಕಾಳಜಿಯಿಂದಾಗಿ ಹೆಚ್ಚು ಬೋರಿಂಗ್ ಆಹಾರಗಳನ್ನೇ ತಯಾರಿಸಿ ನೀಡುತ್ತೇವೆ. ಆದರೆ ಇನ್ನು ಚಿಂತೆ ಮಾಡಬೇಕಿಲ್ಲ.
ನಾವಿಂದು ಹೇಳಿಕೊಡುತ್ತಿರುವ 'ಪಾಲಕ್ ಓಟ್ಸ್ ಕಟ್ಲೆಟ್' (Spinach Oats Cutlet) ರುಚಿಯ ಜೊತೆಗೆ ದೇಹಕ್ಕೂ ಪೋಷಕಾಂಶ ನೀಡುತ್ತದೆ. ಸಂಜೆಯ ಟೀ ಟೈಮ್‌ಗೂ ಇದು ಅತ್ಯುತ್ತಮ ಆಹಾರ. ಈ ಕಟ್ಲೆಟ್ ಮಾಡಲು ಕೇವಲ 30 ನಿಮಿಷಗಳ ಸಮಯ ಸಾಕು. ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು:
* ಪಾಲಕ್ ಸೊಪ್ಪು - 2 ಕಪ್
* ಓಟ್ಸ್ - 1 ಕಪ್
* ಬೇಯಿಸಿದ ಆಲೂಗಡ್ಡೆ - 2
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
* ಚಾಟ್ ಮಸಾಲ - 1 ಟೀಸ್ಪೂನ್
* ಖಾರದ ಪುಡಿ - 1/2 ಟೀಸ್ಪೂನ್
* ಗರಂ ಮಸಾಲ - 1/2 ಟೀಸ್ಪೂನ್
* ಉಪ್ಪು - ರುಚಿಗೆ ತಕ್ಕಷ್ಟು
* ಎಣ್ಣೆ - ಕಟ್ಲೆಟ್ ಕರಿಯಲು/ಶ್ಯಾಲೋ ಫ್ರೈ ಮಾಡಲು
ಮಾಡುವ ವಿಧಾನ:
* ಮೊದಲಿಗೆ ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಸ್ವಲ್ಪ ಸಮಯ ಹಾಕಿ (ಬ್ಲಾಂಚ್ ಮಾಡಿ), ನಂತರ ನೀರನ್ನು ಸಂಪೂರ್ಣವಾಗಿ ಹಿಂಡಿ ತೆಗೆಯಿರಿ.
* ಒಂದು ಅಗಲವಾದ ಪಾತ್ರೆಯಲ್ಲಿ ಓಟ್ಸ್, ಬ್ಲಾಂಚ್ ಮಾಡಿದ ಪಾಲಕ್, ಬೇಯಿಸಿದ ಆಲೂಗಡ್ಡೆ ಹಾಗೂ ಎಲ್ಲಾ ಮಸಾಲೆ ಪದಾರ್ಥಗಳನ್ನು (ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಾಟ್ ಮಸಾಲ, ಖಾರದ ಪುಡಿ, ಗರಂ ಮಸಾಲ, ಉಪ್ಪು) ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ತಯಾರಿಸಿದ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ವೃತ್ತಾಕಾರದ ಕಟ್ಲೆಟ್ ಆಕಾರಕ್ಕೆ ತಟ್ಟಿ.
* ತವಾ ಅಥವಾ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಟ್ಲೆಟ್‌ಗಳನ್ನು ಎರಡೂ ಕಡೆ ಹೊಂಬಣ್ಣ (ಗೋಲ್ಡನ್ ಬ್ರೌನ್) ಬರುವವರೆಗೆ ಶ್ಯಾಲೋ ಫ್ರೈ ಮಾಡಿ.
* ಈಗ ಬಿಸಿಬಿಸಿಯಾದ ಕ್ರಿಸ್ಪಿ ಪಾಲಕ್ ಓಟ್ಸ್ ಕಟ್ಲೆಟ್ ಸಿದ್ಧ. ಇದನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆ ಸವಿಯಲು ನೀಡಿ.

