Dailyhunt Logo
  • Light mode
    Follow system
    Dark mode
    • Play Story
    • App Story
ROAD RAGE :ಮೈಸೂರು ರಸ್ ಯಲ್ಲಿ ರೋಡ್‌ ರೇಜ್‌ - ಸರಕು ಸಾಗಾಣಿಕೆ ವಾಹನ ಚಾಲಕನಿಗೆ ಬೆದರಿಕೆ!

ROAD RAGE :ಮೈಸೂರು ರಸ್ ಯಲ್ಲಿ ರೋಡ್‌ ರೇಜ್‌ - ಸರಕು ಸಾಗಾಣಿಕೆ ವಾಹನ ಚಾಲಕನಿಗೆ ಬೆದರಿಕೆ!

Navasamaja.com 3 months ago

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರವಾಗಿ ಬೆಚ್ಚಿಬೀಳುವಂತಹ (Crime) ಆಘಾತಕಾರಿ ಘಟನೆಯೊಂದು ನಡೆದಿದೆ. ಮಂಡ್ಯದ ಹಳೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಮಂತ, ಪ್ರಭಾವಿ ವ್ಯಕ್ತಿಯೊಬ್ಬನ ಪುತ್ರ ಹಾಗೂ ಆತನ ಪುಂಡರ ಗ್ಯಾಂಗ್, ಔಷಧಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿ ಚಾಲಕನಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ನಿನ್ನೆ ಮುಂಜಾನೆ ಸುಮಾರು 4 ಗಂಟೆಯ ಸದ್ದಿಲ್ಲದ ಅವಧಿಯಲ್ಲಿ ಈ ಭೀಕರ ದರೋಡೆ ಯತ್ನ ನಡೆದಿದೆ. ಬೆಂಗಳೂರಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮೆಡಿಸಿನ್ (ಔಷಧ) ಲೋಡ್ ಮಾಡಿಕೊಂಡು ಮಂಡ್ಯದ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಗೆ ಐಷಾರಾಮಿ ಕಾರಿನಲ್ಲಿ ಬಂದ ಐದು ಮಂದಿ ಯುವಕರ ತಂಡ ಅಡ್ಡ ಬಂದಿತ್ತು. ಈ ವೇಳೆ ಇಬ್ಬರಿಗೂ ವಾಗ್ವಾದ ನಡೆದಿತ್ತು.

ಕಂಟೇನರ್‌ನಲ್ಲಿ ಮೈಸೂರು ಮೂಲದ ಚಾಲಕನೊಬ್ಬನೇ ಇದ್ದು, ಮುಂಜಾನೆಯ ನಿರ್ಜನ ರಸ್ತೆಯಲ್ಲಿ ಆ ಕಾರಿನಲ್ಲಿದ್ದವರ ವಿಚಿತ್ರ ವರ್ತನೆಯನ್ನು ಕಂಡು ಆತ ಲಾರಿ ನಿಲ್ಲಿಸದೆ ಜಾಣತನದಿಂದ ಮುಂದೆ ಚಲಾಯಿಸಿದ್ದಾನೆ.

ಇದರಿಂದ ತೀವ್ರ ಆಕ್ರೋಶಗೊಂಡ ಐಷಾರಾಮಿ ಕಾರಿನಲ್ಲಿದ್ದ ಪ್ರಭಾವಿ ಉದ್ಯಮಿಯ ಪುತ್ರ ಲಾರಿ ಚಾಲಕನಿಗೆ ಅವಾಜ್‌ ಹಾಕಿ ಬೆದರಿಸಿದ್ದಾನೆ ಎನ್ನಲಾಗಿದೆ. ತೀವ್ರ ಭಯಭೀತರಾದ ಚಾಲಕ, ಪ್ರಾಣಭಯದಿಂದ ತಕ್ಷಣ ಅಲ್ಲಿಂದ ಲಾರಿ ಸಮೇತ ಹೊರಟು ಹೋಗಿದ್ದಾನೆ.

ಈ ಘಟನೆ ನಡೆದ ಕೆಲ ಗಂಟೆಗಳ ಕಾಲ ಯಾರಿಗೂ ವಿಷಯ ತಿಳಿಯದಿದ್ದರೂ, ನಂತರ ಸಾರ್ವಜನಿಕ ವಲಯದಲ್ಲಿ ಬಾಯಿಂದ ಬಾಯಿಗೆ ಹರಡತೊಡಗಿತು. ವಿಷಯದ ಗಂಭೀರತೆಯನ್ನು ಅರಿತು ತಕ್ಷಣ ಎಚ್ಚೆತ್ತ ಮಂಡ್ಯ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಯ ಮುಖ್ಯ ಸೂತ್ರಧಾರ ಎನ್ನಲಾದ ಮಂಡ್ಯದ ಯುವಕನನ್ನು ತಡರಾತ್ರಿ ಪೊಲೀಸರು ಠಾಣೆಗೆ ಎಳೆದು ತಂದಿದ್ದಾರೆ. ಮಂಡ್ಯ ಡಿವೈಎಸ್ಪಿ (DYSP) ಕಚೇರಿಯಲ್ಲಿ ಇಡೀ ರಾತ್ರಿ ಆರೋಪಿಗಳ ತೀವ್ರ ವಿಚಾರಣೆ ನಡೆದಿದೆ ಎಂದು ತಿಳಿದುಬಂದಿದೆ.

ಆರೋಪಿಗಳ ವಿರುದ್ದ ಎಫ್‌ಐಆರ್‌ ದಾಖಲಾಗಲಿದ್ದು, ನಂತರವಷ್ಟೇ ಘಟನೆಯ ಕುರಿತು ಖಚಿತ ಮಾಹಿತಿ ಹೊರಬೀಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja