Dailyhunt Logo
  • Light mode
    Follow system
    Dark mode
    • Play Story
    • App Story
RSS : ಪ್ರಿಯಾಂಕ್‌ ಖರ್ಗೆ ಪತ್ರದ ಬಗ್ಗೆ ನೀವು ತುಟ್ಟಿ ಬಿಚ್ಚಬೇಡಿ - ಬಿಜೆಪಿ ನಾಯಕರಿಗೆ ಆರೆಸೆಸ್‌ ಖಡಕ್‌ ಸೂಚನೆ!

RSS : ಪ್ರಿಯಾಂಕ್‌ ಖರ್ಗೆ ಪತ್ರದ ಬಗ್ಗೆ ನೀವು ತುಟ್ಟಿ ಬಿಚ್ಚಬೇಡಿ - ಬಿಜೆಪಿ ನಾಯಕರಿಗೆ ಆರೆಸೆಸ್‌ ಖಡಕ್‌ ಸೂಚನೆ!

Navasamaja.com 2 weeks ago

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬರೆದಿರುವ ಪತ್ರಕ್ಕೆ (Letter) ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರಲು ಸಂಘದ ಹಿರಿಯ ಮುಖಂಡರು ತೀರ್ಮಾನಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಸೂಕ್ಷ್ಮ ವಿಚಾರದ ಬಗ್ಗೆ ಬಿಜೆಪಿ ನಾಯಕರೂ ಕೂಡ ಎಲ್ಲೂ ಬಹಿರಂಗವಾಗಿ ಮಾತನಾಡಬಾರದು ಎಂದು ಆರ್‌ಎಸ್‌ಎಸ್ ಬೈಠಕ್ನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಇಂದು ನಡೆದ ಆರ್‌ಎಸ್‌ಎಸ್ ಪ್ರಮುಖರ ಮಹತ್ವದ ಸಭೆಯಲ್ಲಿ ಈ ನೋಂದಣಿ ವಿವಾದದ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಆರ್‌ಎಸ್‌ಎಸ್ ನೋಂದಣಿ ವಿಚಾರದ ಬಗ್ಗೆ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಈಗಾಗಲೇ ಹಲವು ವೇದಿಕೆಗಳಲ್ಲಿ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದಾರೆ.

ಕೇರಳ ಪ್ರವಾಸದ ವೇಳೆಯೂ ಅವರು ತಮ್ಮ ಖಚಿತ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಕರ್ನಾಟಕದಲ್ಲೂ ಈ ವಿಷಯದ ಬಗ್ಗೆ ಮುಖಂಡರು ಸ್ಪಷ್ಟ ಮಾತುಗಳಲ್ಲಿ ಉತ್ತರ ನೀಡಿದ್ದಾರೆ ಎಂಬುದನ್ನು ಸಭೆಯಲ್ಲಿ ಹಿರಿಯರು ನೆನಪಿಸಿಕೊಂಡಿದ್ದಾರೆ.

100 ವರ್ಷಗಳಿಂದ ಇಂತಹ ಪ್ರಶ್ನೆಗಳು ಬರುತ್ತಲೇ ಇವೆ.

ಕಳೆದ ನೂರು ವರ್ಷಗಳಿಂದಲೂ ಸಂಘದ ಅಸ್ತಿತ್ವ ಮತ್ತು ನೋಂದಣಿ ಕುರಿತು ಇಂತಹ ನೂರಾರು ಪ್ರಶ್ನೆಗಳು, ಆಕ್ಷೇಪಗಳು ಕೇಳಿಬರುತ್ತಲೇ ಇವೆ. ಹಾಗಾಗಿ, ಪ್ರತಿ ಬಾರಿಯೂ ಇಂತಹ ವಿಚಾರಗಳನ್ನು ಕೆದಕುವವರಿಗೆ ಉತ್ತರಿಸುತ್ತಾ ವಿವಾದವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಪ್ರಿಯಾಂಕ್ ಖರ್ಗೆ ಅವರು ಕೇಳಿರುವ ಪ್ರಶ್ನೆಗಳ ಹಿಂದೆ ಕೇವಲ ರಾಜಕೀಯ ಉದ್ದೇಶ ಅಡಗಿದೆ ಎಂಬುದು ಸ್ಪಷ್ಟವಾಗಿದೆ.

ಈ ಹಂತದಲ್ಲಿ ಸಂಘದ ಕಡೆಯಿಂದ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದರೆ, ರಾಜಕೀಯವಾಗಿ ವಿವಾದ ಮತ್ತಷ್ಟು ಜೀವಂತವಾಗಿರಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸದ್ಯಕ್ಕೆ ಈ ವಿಷಯದಲ್ಲಿ ಮೌನವಾಗಿರುವುದೇ ಸೂಕ್ತ ಎಂದು ಮುಖಂಡರು ನಿರ್ಧರಿಸಿದ್ದಾರೆ.

ಕಾನೂನು ಕ್ರಮ ಕೈಗೊಂಡರೆ ನೋಡಿಕೊಳ್ಳೋಣ

ಇದೇ ವೇಳೆ ಸಭೆಯಲ್ಲಿದ್ದ ಬಿಜೆಪಿ ನಾಯಕರಿಗೂ ಸಂಘದ ಮುಖಂಡರು ಮಹತ್ವದ ಕಿವಿಮಾತು ಹೇಳಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರವಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯಾಗಲಿ ಕಾನೂನುಬದ್ಧವಾಗಿ ನೋಂದಣಿ ವಿಷಯದಲ್ಲಿ ಮುಂದಿನ ಕ್ರಮ ಕೈಗೊಂಡರೆ, ಆಗ ಅದಕ್ಕೆ ಹೇಗೆ ಕಾನೂನಾತ್ಮಕವಾಗಿ ಅಗತ್ಯವಿರುವ ಸೂಕ್ತ ಉತ್ತರ ನೀಡಬೇಕು ಎಂಬುದನ್ನು ನಾವು ನೋಡಿಕೊಳ್ಳುತ್ತೇವೆ.

ಅಲ್ಲಿಯವರೆಗೆ ಬಿಜೆಪಿ ನಾಯಕರು ಯಾರೂ ಕೂಡ ಮಾಧ್ಯಮಗಳ ಮುಂದಾಗಲಿ ಅಥವಾ ಸಾರ್ವಜನಿಕವಾಗಲಿ ಈ ವಿಚಾರದ ಬಗ್ಗೆ ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ವಿವಾದವನ್ನು ಬೆಳೆಸಬಾರದು ಎಂದು ಆರ್‌ಎಸ್‌ಎಸ್ ಕಠಿಣ ಸಂದೇಶ ರವಾನಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja