Dailyhunt
SADANANDA GOWDA: ಜನರಿಗಾಗಿ ಭಿಕ್ಷೆ ಬೇಡಿ, ಐಪಿಎಲ್‌ ಟಿಕೆಟ್​​​​ಗೆ ಅಲ್ಲ: ಶಾಸಕರಿಗೆ ಡಿವಿಎಸ್‌ ಕ್ಲಾಸ್‌

SADANANDA GOWDA: ಜನರಿಗಾಗಿ ಭಿಕ್ಷೆ ಬೇಡಿ, ಐಪಿಎಲ್‌ ಟಿಕೆಟ್​​​​ಗೆ ಅಲ್ಲ: ಶಾಸಕರಿಗೆ ಡಿವಿಎಸ್‌ ಕ್ಲಾಸ್‌

Navasamaja.com 2 weeks ago

ಬೆಂಗಳೂರು: ಐಪಿಎಲ್ ಟಿಕೆಟ್‌ ಪಡೆಯಲು ಶಾಸಕರು ವಿಧಾನಸಭೆಯಲ್ಲಿ ಬೇಡಿಕೆಯಿಟ್ಟಿರುವುದು ಮತ್ತು ಅವರ ಆಪ್ತ ಸಹಾಯಕರು (PA) ಸ್ಪೀಕರ್ ಕಚೇರಿ ಮುಂದೆ ಕ್ಯೂ ನಿಂತಿರುವ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ (DV Sadananda Gowda) ವಿರೋಧ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳ ಈ ನಡವಳಿಕೆಯನ್ನು ಅವರು 'ಭಿಕ್ಷೆ ಬೇಡುವ ಕೆಲಸ' ಎಂದು ಬಣ್ಣಿಸುವ ಮೂಲಕ ತಮ್ಮ ಅತೀವ ಅಸಮಾಧಾನ ಹೊರಹಾಕಿದ್ದಾರೆ.

ನಾಚಿಕೆಗೇಡಿನ ಸಂಗತಿ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆಯ ಸಮಯದಲ್ಲಿ ಇದೇ ಶಾಸಕರು ನೂರಾರು ಕೋಟಿ ಖರ್ಚು ಮಾಡುತ್ತಾರೆ. ಆದರೆ ಈಗ ಅದೇ ಶಾಸಕರು ಓಂದು ಐಪಿಎಲ್‌ ಟಿಕೆಟ್‌ಗಾಗಿ ಈ ರೀತಿ ಕೈ ಚಾಚುತ್ತಿರುವುದು ನಿಜಕ್ಕೂ ನಾಚಿನಗೇಡಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಈ ರೀತಿಯ ಕೆಲಸಗಳನ್ನ ಮಾಡಬಾರದು ಎಂದು ಹೇಳಿದ್ದಾರೆ

ಇತ್ತೀಚೆಗೆ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ 11 ಅಭಿಮಾನಿಗಳು ಮೃತಪಟ್ಟ ದುರ್ಘಟನೆಯನ್ನು ನೆನಸಿಕೊಂಡು ಮಾತನಾಡಿದ ಅವರು, ಸದನದಲ್ಲಿ ಜನಪ್ರತಿನಿಧಿಗಳ ನಡವಳಿಕೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. "ಆ ಅಮಾಯಕ ಅಭಿಮಾನಿಗಳ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದರೆ ಸದನಕ್ಕೆ ಒಂದು ಗೌರವವಿರುತ್ತಿತ್ತು. ಆದರೆ, ಜನರ ಪ್ರಾಣದ ಬಗ್ಗೆ ಮಾತನಾಡದವರು ಕೇವಲ ಟಿಕೆಟ್‌ಗಾಗಿ ಚರ್ಚೆ ಮಾಡುತ್ತಾರೆ ಎಂದರೆ ಏನನ್ನಬೇಕು?" ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಜನರಿಗಾಗಿ ಭಿಕ್ಷೆ ಬೇಡಿ

ಇದೇ ಸಮಯದಲ್ಲಿ ಶಾಸಕರಿಗೆ ಅವರು ಕಿವಿಮಾತು ಹೇಳಿದ್ದು, ನಿಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ಅಥವಾ ಜನರಿಗೆ ಅನ್ಯಾಯವಾದಾಗ ಸರ್ಕಾರದ ಮುಂದೆ ಬೇಕಿದ್ದರೆ ಭಿಕ್ಷೆ ಬೇಡಿ, ಅದರಲ್ಲಿ ತಪ್ಪಿಲ್ಲ. ಆದರೆ ವೈಯಕ್ತಿಕ ಕೆಲಸಗಳಿಗಾಗಿ ಈ ರೀತಿ ನಡೆದುಕೊಳ್ಳಬೇಡಿ" ಎಂದು ಹೇಳಿದ್ದಾರೆ.

ಆಟೋ ಚಾಲಕರು.. ಸಾಮಾನ್ಯ ಜನರಿಗೆ ಗ್ಯಾಸ್‌ ಸಮಸ್ಯೆ, ಜನಪ್ರತಿನಿಧಿಗಳಿಗೆ IPL ಚಿಂತೆ; ಬಿಟ್ಟಿ ಟಿಕೆಟ್‌ಗಾಗಿ ಕ್ಯೂ ನಿಂತ ಶಾಸಕರ ಪಿಎಗಳು!

ನಮ್ಮ ಜನಪ್ರತಿನಿಧಿಗಳು ಐಪಿಎಲ್ ಕ್ರಿಕೆಟ್ ಪಂದ್ಯದ ಸಂಭ್ರಮದಲ್ಲಿ ಮುಳುಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು, ಈಗ ಉಚಿತ ಐಪಿಎಲ್ ಟಿಕೆಟ್ ಪಡೆಯಲು ತಮ್ಮ ಆಪ್ತ ಸಹಾಯಕರನ್ನು (PA) ಕ್ಯೂ ನಿಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಡುವಿನ ಒಪ್ಪಂದದಂತೆ, ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ತಲಾ ಮೂರು ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್‌ಗಳಿಗಾಗಿ ಇಂದು ವಿಧಾನಸೌಧದ ಸ್ಪೀಕರ್ ಕಚೇರಿ ಮುಂದೆ ಶಾಸಕರ ಸಹಾಯಕರ ದಂಡೇ ನೆರೆದಿತ್ತು. ತಮ್ಮ ಶಾಸಕರ ಸೂಚನೆಯ ಮೇರೆಗೆ ಈ ಟಿಕೆಟ್ ಪಡೆಯಲು ಇವರು ಗಂಟೆಗಟ್ಟಲೆ ಕಾದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja