Dailyhunt
SAMARTH SHAMANUR: ಜನರ ಸೇವೆಗೆ ಸದಾ ಸಿದ್ಧ, ಅಜ್ಜನ ಹಾದಿಯಲ್ಲೇ ನನ್ನ ಪಯಣ: ಶಾಸಕ ಸಮರ್ಥ್ ಶಾಮನೂರು ಸಂಕಲ್ಪ

SAMARTH SHAMANUR: ಜನರ ಸೇವೆಗೆ ಸದಾ ಸಿದ್ಧ, ಅಜ್ಜನ ಹಾದಿಯಲ್ಲೇ ನನ್ನ ಪಯಣ: ಶಾಸಕ ಸಮರ್ಥ್ ಶಾಮನೂರು ಸಂಕಲ್ಪ

Navasamaja.com 1 week ago

ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಮರ್ಥ್ ಶಾಮನೂರು (Samarth Shamanur) ಮಾತನಾಡಿದ್ದು, ತಮ್ಮ ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆ 'ಅಜಾತಶತ್ರು'ವಾಗಿ ಜನರ ಮನ ಗೆಲ್ಲುವುದೇ ನನ್ನ ಮುಖ್ಯ ಗುರಿ ಎಂದು ಹೇಳಿದ್ದಾರೆ.

ಮನೆಮತ್ತುಮನದಬಾಗಿಲುಸದಾಮುಕ್ತ ಸುದ್ದಿಗೋಷ್ಠಿಯಲ್ಲಿ ತಮ್ಮ ಆಶಯಗಳನ್ನು ಹಂಚಿಕೊಂಡ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಜನತೆ ನಮ್ಮ ಅಭಿವೃದ್ಧಿ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ನನ್ನನ್ನು ಆಶೀರ್ವದಿಸಿದ್ದಾರೆ. ಜನರ ಸೇವೆಗಾಗಿ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಯಾರೇ ಬಂದರೂ ಅವರಿಗೆ ಗೌರವಯುತ ಸ್ಪಂದನೆ ಸಿಗಲಿದೆ,ಎಂದು ಭರವಸೆ ನೀಡಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲು ಶೀಘ್ರದಲ್ಲೇ ಕ್ಷೇತ್ರದಲ್ಲಿ ಸುಸಜ್ಜಿತ 'ಶಾಸಕರ ಜನಸಂಪರ್ಕ ಕಚೇರಿ'ಯನ್ನು ಪ್ರಾರಂಭಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ

ಅಭಿವೃದ್ಧಿಯೇಮೂಲಮಂತ್ರಕ್ಷೇತ್ರದ ಸಮಗ್ರ ಪ್ರಗತಿಗಾಗಿ ಪಾರದರ್ಶಕವಾಗಿ ಕೆಲಸ ಮಾಡುವುದಾಗಿ ಹೇಳಿದ ಸಮರ್ಥ್, ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ದಾವಣಗೆರೆ ದಕ್ಷಿಣದ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸಿ, ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಿರುವ ಶಾಸಕನಾಗಿ ಕಾರ್ಯನಿರ್ವಹಿಸುವುದು ನನ್ನ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ದಾವಣಗೆರೆಯಲ್ಲಿ ಆಸ್ಪತ್ರೆಗಳಿದ್ದು ಸರಿಯಾದ ವ್ಯವಸ್ಥೆ ಇಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ವಿಜಯೋತ್ಸವ, ಸಮರ್ಥ್ ಗೆಲುವಿನ ಬೆನ್ನಲ್ಲೇ 'ಕೈ' ನಾಯಕರ ನಡುವೆ ಶುರುವಾಯ್ತು ಬಣ ರಾಜಕೀಯದ ಚರ್ಚೆ!

ದಾವಣಗೆರೆ ದಕ್ಷಿಣ (By Election) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸುಮಾರು 7,000 ಮತಗಳ ಅಂತರದ ಮುನ್ನಡೆಯೊಂದಿಗೆ ಸಮರ್ಥ್ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಈ ಗೆಲುವು ಕೇವಲ ಒಬ್ಬ ಅಭ್ಯರ್ಥಿಯದ್ದಲ್ಲದೆ, ರಾಜ್ಯ ಕಾಂಗ್ರೆಸ್‌ನಲ್ಲಿರುವ ಪ್ರಭಾವಿ ಬಣಗಳ ನಡುವಿನ ಪ್ರತಿಷ್ಠೆಯ ಕದನವಾಗಿಯೂ ಮಾರ್ಪಟ್ಟಿದೆ.

ರಿಜ್ವಾನ್-ಸಲೀಂ ಬಣಕ್ಕೆ ಪ್ಲಸ್ ಜಮೀರ್‌ಗೆ ಹಿನ್ನಡೆ?
ಸಮರ್ಥ್ ಮಲ್ಲಿಕಾರ್ಜುನ್ ಅವರ ಈ ಗೆಲುವು ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ನೇತೃತ್ವದ ಬಣಕ್ಕೆ ಸಂದ ಜಯ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಈ ನಾಯಕರು ಅಲ್ಪಸಂಖ್ಯಾತರ ಬಂಡಾಯವನ್ನು ಶಮನಗೊಳಿಸಿ, ಕಾಂಗ್ರೆಸ್‌ಗೆ ಮತಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ, ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಗೆ ಧ್ವನಿಗೂಡಿಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಣಕ್ಕೆ ಈ ಫಲಿತಾಂಶ ಹಿನ್ನಡೆ ತಂದಿದೆ ಎಂಬ ಚರ್ಚೆಗಳು ಆರಂಭವಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja