Dailyhunt Logo
  • Light mode
    Follow system
    Dark mode
    • Play Story
    • App Story
SANITATION WORKERS : 2019 ರಿಂದೀಚೆಗೆ ಒಳಚರಂಡಿ ಸ್ವಚ್ಛಗೊಳಿಸುವಾಗ 500 ಪೌರಕಾರ್ಮಿಕರ ಸಾವು: ಕೇಂದ್ರ ಸರ್ಕಾರ ಮಾಹಿತಿ

SANITATION WORKERS : 2019 ರಿಂದೀಚೆಗೆ ಒಳಚರಂಡಿ ಸ್ವಚ್ಛಗೊಳಿಸುವಾಗ 500 ಪೌರಕಾರ್ಮಿಕರ ಸಾವು: ಕೇಂದ್ರ ಸರ್ಕಾರ ಮಾಹಿತಿ

Navasamaja.com 1 week ago

ವದೆಹಲಿ: ಕಳೆದ ಏಳು ವರೆ ವರ್ಷಗಳಲ್ಲಿ (2019 ರಿಂದ ಜೂನ್ 30, 2026 ರವರೆಗೆ) ದೇಶಾದ್ಯಂತ ಒಳಚರಂಡಿ (Sewer) ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳನ್ನು (Septic Tank) ಸ್ವಚ್ಛಗೊಳಿಸುವಾಗ ಕನಿಷ್ಠ 498 ಪೌರಕಾರ್ಮಿಕರು ಮೃತಪಟ್ಟಿದ್ದಾರೆ (sanitation workers) ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ಲಿಖಿತ ಉತ್ತರ ರೂಪದಲ್ಲಿ ಈ ಆಘಾತಕಾರಿ ಅಂಕಿ-ಅಂಶಗಳನ್ನು ಮಂಡಿಸಿದ್ದಾರೆ.

2019: 132 ಸಾವುಗಳು (ಅತಿ ಹೆಚ್ಚು) 2020: 34, 2021: 62, 2022: 88, 2023: 65, 2024: 54, 2025: 47, 2026 (ಜೂನ್ 30ರವರೆಗೆ): 16 ಒಟ್ಟು 498 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರೂ, ಕೈಯಿಂದ ಮಲ ಬಳಿಯುವಿಕೆ (Manual Scavenging) ಯಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ತೆರೆದ ಚರಂಡಿ, ಶೌಚಾಲಯ ಅಥವಾ ಹೊಂಡಗಳಿಂದ ಮಾನವನ ಮಲವನ್ನು ಕೈಯಿಂದ ಸ್ವಚ್ಛಗೊಳಿಸುವುದಕ್ಕೆ ಮಾತ್ರ ಈ ವ್ಯಾಖ್ಯಾನ ಅನ್ವಯಿಸುತ್ತದೆ. ಸೂಕ್ತ ಸುರಕ್ಷತಾ ಉಪಕರಣಗಳು ಹಾಗೂ ಯಂತ್ರಗಳಿಲ್ಲದೆ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದು ಸ್ವಚ್ಛಗೊಳಿಸುವುದನ್ನು 'ಅಪಾಯಕಾರಿ ಸ್ವಚ್ಛತೆ' ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಸರ್ಕಾರವು ಈ 498 ಪ್ರಾಣಹಾನಿಗಳನ್ನು 'ಅಪಾಯಕಾರಿ ಒಳಚರಂಡಿ ಸ್ವಚ್ಛತೆ'ಯಿಂದ ಸಂಭವಿಸಿದ ಸಾವುಗಳು ಎಂದು ದಾಖಲಿಸಿದೆಯೇ ಹೊರತು 'ಮ್ಯಾನುವಲ್ ಸ್ಕ್ಯಾವೆಂಜಿಂಗ್' ನಿಂದಲ್ಲ ಎಂದು ಸ್ಪಷ್ಟಪಡಿಸಿದೆ.

2024-25ರಲ್ಲಿ ನಡೆಸಿದ ಸರ್ವೇಯ ಪ್ರಕಾರ ದೇಶದ ಎಲ್ಲಾ ಜಿಲ್ಲೆಗಳು ತಮ್ಮಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್‌ಗಳು ಇಲ್ಲ ಎಂದು ಘೋಷಿಸಿಕೊಂಡಿವೆ ಎಂದು ಸರ್ಕಾರ ಹೇಳಿದೆ.

78 ಪ್ರಕರಣಗಳಲ್ಲಿ ಪರಿಹಾರ ಅಸ್ಪಷ್ಟ!

ಸುಪ್ರೀಂ ಕೋರ್ಟ್ ಅಕ್ಟೋಬರ್ 2023 ರಲ್ಲಿ ನೀಡಿದ ತೀರ್ಪಿನ ಪ್ರಕಾರ, ಮೃತರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ₹10 ಲಕ್ಷದಿಂದ ₹30 ಲಕ್ಷಕ್ಕೆ ಏರಿಸಲಾಗಿತ್ತು. ₹10 ಲಕ್ಷ ಪೂರ್ಣ ಪರಿಹಾರ ಸಿಕ್ಕಿದ್ದು: 345 ಪ್ರಕರಣಗಳಿಗೆ. ₹30 ಲಕ್ಷ ಪೂರ್ಣ ಪರಿಹಾರ ಸಿಕ್ಕಿದ್ದು: 75 ಪ್ರಕರಣಗಳಿಗೆ. 78 ಪ್ರಕರಣಗಳಲ್ಲಿ (ಇದರಲ್ಲಿ 22 ಭಾಗಶಃ ಪರಿಹಾರ ಹಾಗೂ 56 ಪ್ರಕರಣಗಳಲ್ಲಿ ಪರಿಹಾರ ನೀಡಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ).

'ನಮಸ್ತೆ' (NAMASTE) ಯೋಜನೆ ಮತ್ತು ಸುಧಾರಣೆ

ಕೇಂದ್ರ ಸರ್ಕಾರವು 'ನಮಸ್ತೆ' (National Action for Mechanised Sanitation Ecosystem) ಯೋಜನೆಯಡಿಯಲ್ಲಿ 89,915 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ವಿವರಗಳನ್ನು ನೋಂದಾಯಿಸಿಕೊಂಡಿದೆ. ಈ ಯೋಜನೆಯು ಅವರಿಗೆ ಸುರಕ್ಷತಾ ಉಪಕರಣಗಳು, ತರಬೇತಿ, ಆರೋಗ್ಯ ವಿಮೆ ಮತ್ತು ಯಾಂತ್ರಿಕ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡುತ್ತದೆ. ಒಳಚರಂಡಿ ಸ್ವಚ್ಛತೆಯನ್ನು ಸಂಪೂರ್ಣವಾಗಿ ಯಾಂತ್ರಿಕಗೊಳಿಸಲು ಅಥವಾ ಸಂತ್ರಸ್ತ ಕುಟುಂಬಗಳ ಪುನರ್ವಸತಿಗೆ ಸರ್ಕಾರ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ವಿಧಿಸಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Navasamaja