ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಸರ್ಕಾರದ ಸಂಪುಟ ವಿಸ್ತರಣೆ ಬಳಿಕ ಕರ್ನಾಟಕ ಕಾಂಗ್ರೆಸ್ನಲ್ಲಿ ಕೆಲ ಗೊಂದಲಗಳು ಹುಟ್ಟಿಕೊಂಡಿವೆ. ಸಂಪುಟ ರಚನೆಯ ಸುತ್ತ ಚರ್ಚೆಗಳು ನಡೆಯುತ್ತಿರುವಾಗ, ಶಾಸಕ ಸತೀಶ್ ಜಾರಕಿಹೊಳಿ (Satish Jarkiholi )ಅವರು ಹಲವಾರು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಉಪಮುಖ್ಯಮಂತ್ರಿ ಘೋಷಣೆ ಬಗ್ಗೆ ಪಕ್ಷದಲ್ಲಿ ಇನ್ನೂ ಚರ್ಚೆ ಆಗಿಲ್ಲ. ಖಾತೆ ಹಂಚಿಕೆ ಮುಗಿದ ನಂತರ ಈ ಬಗ್ಗೆ ಚರ್ಚಿಸಲಾಗುವುದು. ಇದನ್ನು ಯಾವುದೇ ಸಮಯದಲ್ಲಿ ಮಾಡಬಹುದು. ಕೆಲವು ಹುದ್ದೆಗಳಿಗೆ ಹಣ ನೀಡಿರಬಹುದು ಎಂಬ ಆಡಿಯೋ ವೈರಲ್ ಬಗ್ಗೆ, "ಇದು ಕೇವಲ ಊಹಾಪೋಹ. ಯಾರಿಗೆ ಹಣ ನೀಡಿದ್ದಾರೆಂದು ಅವರು ಹೇಳಲಿ," ಎಂದು ತಳ್ಳಿಹಾಕಿದರು. ಜಾಮೀನಿನ ಮೇಲೆ ಇರುವ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತಾರೆ. ಎಲ್ಲ ಹಿರಿಯರು ಚರ್ಚಿಸಿ ಇದನ್ನು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮಹಿಳೆಯರಿಗಾಗಿ ಒಂದು ಸ್ಥಾನ ಖಾಲಿ ಇದೆ. ಮಹಿಳಾ ಪ್ರಾತಿನಿಧ್ಯ ಇಲ್ಲದೆ ಮಂತ್ರಿಮಂಡಲ ಆಗುವುದಿಲ್ಲ. ಹೈಕಮಾಂಡ್ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಕೊರಟಗೆರೆ ರಾಜೀನಾಮೆ ವಿಚಾರ ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು ಎಂದರು.

