Dailyhunt Logo
  • Light mode
    Follow system
    Dark mode
    • Play Story
    • App Story
SEEMANTH KUMAR: ಕರ್ತವ್ಯ ಲೋಪ ಎಸಗಿದರೆ ಅಮಾನತು ಫಿಕ್ಸ್: ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಎಚ್ಚರಿಕೆ

SEEMANTH KUMAR: ಕರ್ತವ್ಯ ಲೋಪ ಎಸಗಿದರೆ ಅಮಾನತು ಫಿಕ್ಸ್: ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಎಚ್ಚರಿಕೆ

Navasamaja.com 3 months ago

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಯಾವುದೇ ಹಂತದ ಅಧಿಕಾರಿ ಅಥವಾ ಸಿಬ್ಬಂದಿ ಅಶಿಸ್ತು ತೋರಿದರೆ ನಿರ್ಧಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತೊಗೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ (Seemanth Kumar) ಎಚ್ಚರಿಕೆ ನೀಡಿದ್ದಾರೆ.

ಕರ್ತವ್ಯ ಲೋಪಕ್ಕೆ ಇಲ್ಲ ಮನ್ನಣೆ
ಆಡುಗೋಡಿಯ ಸಿಎಆರ್ ದಕ್ಷಿಣ ಮೈದಾನದಲ್ಲಿ ನಡೆದ ಮಾಸಿಕ ಪರೇಡ್ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಸೇವೆಯಲ್ಲಿ ಬೇಜವಾಬ್ದಾರಿತನ ತೋರುವವರನ್ನು ತಕ್ಷಣವೇ ಅಮಾನತುಗೊಳಿಸಲಾಗುವುದು. ಈಗಾಗಲೇ ನಿಯಮ ಉಲ್ಲಂಘಿಸಿದ ಕೆಲವರ ಮೇಲೆ ಕಠಿಣ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ನಗರದ ತುರ್ತು ಸಹಾಯವಾಣಿ 'ನಮ್ಮ 112' ರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, "ಈ ಹಿಂದೆ ಸಾರ್ವಜನಿಕರ ಕರೆ ಬಂದಾಗ ಪೊಲೀಸರು ಸ್ಥಳಕ್ಕೆ ತಲುಪಲು 13 ನಿಮಿಷ ತಗಲುತ್ತಿತ್ತು. ಆದರೆ ಈಗ ಕೇವಲ 6 ನಿಮಿಷ 30 ಸೆಕೆಂಡ್‌ಗಳಲ್ಲಿ ಧಾವಿಸುತ್ತಿದ್ದಾರೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ನೆರವಾಗುತ್ತಿರುವುದು ಹೆಮ್ಮೆಯ ವಿಚಾರ" ಎಂದರು.

ಡ್ರಗ್ಸ್ ಮುಕ್ತ ನಗರಕ್ಕೆ ಮಹಾ ಅಭಿಯಾನ
ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಚಾಲನೆ ನೀಡಿರುವ 'ರೈಸ್' (RISE) ಮತ್ತು 'ಬೇಡ ಬ್ರೋ' ಜಾಗೃತಿ ಆಂದೋಲನಗಳಲ್ಲಿ ಪ್ರತಿಯೊಬ್ಬ ಸಿಬ್ಬಂದಿಯೂ ತೊಡಗಿಸಿಕೊಳ್ಳಬೇಕು ಎಂದು ಕಮಿಷನರ್ ನಿರ್ದೇಶನ ನೀಡಿದರು. ಸಂಚಾರಿ ವಿಭಾಗ, ಸಿಎಆರ್ ಸೇರಿದಂತೆ ಇಲಾಖೆಯ ಯಾವುದೇ ವಿಭಾಗದವರೂ ಇದರಿಂದ ದೂರ ಉಳಿಯುವಂತಿಲ್ಲ. ಕಾನ್‌ಸ್ಟೇಬಲ್‌ನಿಂದ ಹಿಡಿದು ಕಮಿಷನರ್‌ವರೆಗೆ ಎಲ್ಲರೂ ಡ್ರಗ್ಸ್ ವಿರುದ್ಧ ಹೋರಾಡಬೇಕು.

ನಗರದ 20 ಸಾವಿರ ಪೊಲೀಸ್ ಸಿಬ್ಬಂದಿಯೂ ತಮ್ಮ ಕರ್ತವ್ಯದ ವೇಳೆ ಎಲ್ಲೇ ಮಾದಕ ವಸ್ತುಗಳ ಮಾರಾಟ, ಸಾಗಣೆ ಅಥವಾ ಬಳಕೆ ಕಂಡುಬಂದರೂ ತಕ್ಷಣವೇ ದಾಳಿ ನಡೆಸಿ ಕೇಸ್ ದಾಖಲಿಸಬೇಕು. ಆರೋಗ್ಯವಂತ ಸಮಾಜಕ್ಕಾಗಿ ಪೊಲೀಸರು ಸಾರ್ವಜನಿಕರೊಂದಿಗೆ ಕೈಜೋಡಿಸಬೇಕು. ಕಳೆದ ಒಂದು ವರ್ಷದಲ್ಲಿ ಇಲಾಖೆಯು ಸುಮಾರು 350 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಈ ಬೇಟೆ ಮುಂದುವರಿಯಲಿದೆ ಎಂದರು.

ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗುವ ಸೂಕ್ಷ್ಮ ಅವಧಿಯಲ್ಲಿ ಇಲಾಖೆಯ ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಪರಿಸ್ಥಿತಿಯನ್ನು ನಿಭಾಯಿಸಿರುವುದು ಶ್ಲಾಘನೀಯ. ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲೂ ಇದೇ ರೀತಿಯ ಬಿಗಿ ಬಂದೋಬಸ್ತ್ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja