Dailyhunt Logo
  • Light mode
    Follow system
    Dark mode
    • Play Story
    • App Story
SHAKTI SCHEME: ಶಕ್ತಿ ಯೋಜನೆ - ರಸ್ತೆ ಸಾರಿಗೆ ನಿಗಮಗಳಿಗೆ ಇನ್ನೂ ಸಿಗದ 5,650 ಕೋಟಿ ಬಾಕಿ ಹಣ!

SHAKTI SCHEME: ಶಕ್ತಿ ಯೋಜನೆ - ರಸ್ತೆ ಸಾರಿಗೆ ನಿಗಮಗಳಿಗೆ ಇನ್ನೂ ಸಿಗದ 5,650 ಕೋಟಿ ಬಾಕಿ ಹಣ!

Navasamaja.com 1 week ago

ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Govt) ಮಹತ್ವಾಕಾಂಕ್ಷೆಯ ಅಭಯ ಅಭಿಯಾನವಾದ ಶಕ್ತಿ ಯೋಜನೆಯಡಿ (Shakti Scheme) ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ (Transport Corporations) ಬಿಡುಗಡೆಯಾಗಬೇಕಿದ್ದ ಹಣದಲ್ಲಿ ಭಾರಿ ಬಾಕಿ ಉಳಿದುಕೊಂಡಿದೆ.

ಯೋಜನೆ ಆರಂಭವಾದಂದಿನಿಂದ 2026ರ ಜುಲೈ ಅಂತ್ಯದವರೆಗೆ ಸರ್ಕಾರದಿಂದ ನಿಗಮಗಳಿಗೆ ಬರೋಬ್ಬರಿ 5,650.95 ಕೋಟಿ ರೂ. ಬರಬೇಕಾಗಿದೆ. ಉಚಿತ ಬಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಹಣ ಬಿಡುಗಡೆಯಾಗದ ಕಾರಣ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ನೀಡಿದ ಲಿಖಿತ ಮಾಹಿತಿಯ ಪ್ರಕಾರ, 2023ರ ಜೂನ್ 11ರಂದು ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ 2026ರ ಜುಲೈ 31ರವರೆಗೆ ನಾಲ್ಕೂ ನಿಗಮಗಳು ಒಟ್ಟು ₹20,955.96 ಕೋಟಿ ವೆಚ್ಚ ಮಾಡಿವೆ. ಆದರೆ, ಸರ್ಕಾರ ಈವರೆಗೆ ₹15,305.01 ಕೋಟಿಯನ್ನಷ್ಟೇ ಬಿಡುಗಡೆ ಮಾಡಿದೆ. ಈ ಬಾಕಿ ಹಣವನ್ನು ತಕ್ಷಣವೇ ನೀಡುವಂತೆ ಸಾರಿಗೆ ಇಲಾಖೆಯು ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ, ಈಗಾಗಲೇ ಬಜೆಟ್‌ನಲ್ಲಿ ನಿಗದಿಪಡಿಸಿದ ಹಣ ನೀಡಲಾಗಿದೆ ಹಾಗೂ ಇತರ ಮಾರ್ಗಗಳ ಮೂಲಕವೂ ನಿಗಮಗಳಿಗೆ ಅನುದಾನ ಹಂಚಿಕೆಯಾಗಿರುವುದರಿಂದ ಹೆಚ್ಚುವರಿ ಮೊತ್ತ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

ಯೋಜನೆ ಜಾರಿಯಾದ ದಿನದಿಂದ ಉಚಿತವಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಯೋಜನೆ ಆರಂಭದಿಂದ ಜುಲೈ 2026ರವರೆಗೆ ಸಾರಿಗೆ ನಿಗಮಗಳು ಒಟ್ಟು 797.16 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಿವೆ. ಶಕ್ತಿ ಯೋಜನೆಯ ಜೊತೆಗೆ ವಿದ್ಯಾರ್ಥಿ ಪಾಸ್, ಹೊಸ ಬಸ್‌ಗಳ ಖರೀದಿ, ಸಿಬ್ಬಂದಿ ವೇತನ, ಡೀಸೆಲ್ ವೆಚ್ಚ ಹಾಗೂ ತೆರಿಗೆ ವಿನಾಯಿತಿ ಸೇರಿದಂತೆ ಹಲವು ವಿಭಾಗಗಳಿಗೆ ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಒಟ್ಟು ₹18,459.37 ಕೋಟಿ ನೆರವು ನೀಡಿದ್ದರೂ ಸಹ, ಶಕ್ತಿ ಯೋಜನೆಯ ಬೃಹತ್ ಬಾಕಿ ಮೊತ್ತವು ಸಾರಿಗೆ ನಿಗಮಗಳ ದಿನನಿತ್ಯದ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja